January 14, 2025

ಶಬರಿಮಲೆಯಲ್ಲಿ ಮಕರ ಜ್ಯೋತಿ ನೋಡಲು ಜಮಾಯಿಸಿದ ಭಕ್ತರು

0

ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಶಬರಿಮಲೆಯಲ್ಲಿ ಜಮಾಯಿಸುತ್ತಿದ್ದಾರೆ. 2025ರ ಜನವರಿ 8 ರಿಂದ 15 ರವರೆಗೆ ಪ್ರತಿದಿನ 5 ಸಾವಿರ ಭಕ್ತರಿಗೆ ಮಾತ್ರ ಸನ್ನಿಧಾನಂ ಸ್ಪಾಟ್ ಬುಕಿಂಗ್ ಅನ್ನು ಸೀಮಿತಗೊಳಿಸಿದೆ.ಭಕ್ತರ ದಟ್ಟಣೆಯ ಬಗ್ಗೆ ಕೇರಳ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ, ಪಾಸ್ ವಿತರಣೆಯ ಮಿತಿಯನ್ನು ದಿನಕ್ಕೆ 5 ಸಾವಿರಕ್ಕೆ ಸೀಮಿತಗೊಳಿಸುವಂತೆ ನಿರ್ದೇಶನ ನೀಡಿತ್ತು.

 

ಅಯ್ಯಪ್ಪ ಸ್ವಾಮಿಯನ್ನು ಪೂಜಿಸಲು ಅಪಾರ ಸಂಖ್ಯೆಯ ಭಕ್ತರು ಶಬರಿಮಲೆಗೆ ಆಗಮಿಸಿದ್ದಾರೆ. ಮಕರವಿಳಕ್ಕು ಉತ್ಸವದ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಕರವಿಳಕ್ಕು ಉತ್ಸವಕ್ಕೂ ಮುನ್ನ ಅಯ್ಯಪ್ಪನ ದರ್ಶನ ಪಡೆಯಲು ಹಾಗೂ ಮಕರವಿಳಕ್ಕು ಉತ್ಸವದಲ್ಲಿ ಪಾಲ್ಗೊಳ್ಳಲು ಅಪಾರ ಸಂಖ್ಯೆಯ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಆಗಮಿಸಿದ್ದಾರೆ.

 

ದೇವಸ್ಥಾನದಲ್ಲಿ ಭದ್ರತೆಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಉತ್ಸವದ ಭದ್ರತೆ ಮತ್ತು ಸುಗಮ ನಿರ್ವಹಣೆಗಾಗಿ ಒಟ್ಟು 5,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾತ್ರಿಕರ ಒಳಹರಿವನ್ನು ನಿರ್ವಹಿಸಲು ಮತ್ತು ಧಾರ್ಮಿಕ ಕಾರ್ಯಕ್ರಮದ ಸಮಯದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ವಿಸ್ತಾರವಾದ ಯೋಜನೆಗಳನ್ನು ಮಾಡಿದ್ದಾರೆ.

Leave a Reply

Your email address will not be published. Required fields are marked *