ನನಗೆ 40 ಲಕ್ಷ ರೂ. ಬೇಕು..!, ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸಲು ದೇಣಿಗೆ ಕೇಳಿದ ಸಿಎಂ ಅತಿಶಿ
ದೆಹಲಿ ಮುಖ್ಯಮಂತ್ರಿ ಮತ್ತು ಕಲ್ಕಾಜಿಯ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅತಿಶಿ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ 40 ಲಕ್ಷ ರೂ. ಸಂಗ್ರಹಿಸಲು ಕ್ರೌಡ್‌ಫಂಡಿಂಗ್ ಪ್ರಾರಂಭಿಸಿದ್ದಾರೆ. ಎಎಪಿ ಯಾವಾಗಲೂ ಸಾಮಾನ್ಯ ಜನರ ಸಣ್ಣ ದೇಣಿಗೆಯ ಸಹಾಯದಿಂದ ಚುನಾವಣೆಗಳನ್ನು ಎದುರಿಸುತ್ತಿದೆ, ಇದು ಕೆಲಸ ಮತ್ತು ಪ್ರಾಮಾಣಿಕತೆಯ ರಾಜಕೀಯವನ್ನು ಮುಂದುವರಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.
ದೆಹಲಿ ಮುಖ್ಯಮಂತ್ರಿ ಅತಿಶಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕ್ರೌಡ್ ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಚುನಾವಣೆಗೆ ದೆಹಲಿ ಜನತೆಯ ನೆರವು ಕೋರಿದ್ದಾರೆ. ನನಗೆ ಚುನಾವಣೆಗೆ ಸ್ಪರ್ಧಿಸಲು ಹಣ ಬೇಕು ಎಂದು ಅತಿಶಿ ಹೇಳಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು 40 ಲಕ್ಷ ರೂ. ಬೇಕು, ನನ್ನ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ದಯವಿಟ್ಟು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.
ನಾವು ಕೈಗಾರಿಕೋದ್ಯಮಿಗಳಿಂದ ದೇಣಿಗೆ ತೆಗೆದುಕೊಳ್ಳುವುದಿಲ್ಲ ಎಂದು ಅತಿಶಿ ಹೇಳಿದ್ದಾರೆ. ಸಾರ್ವಜನಿಕರ ದೇಣಿಗೆಯಿಂದ ಚುನಾವಣೆಗೆ ಸ್ಪರ್ಧಿಸುತ್ತೇವೆ. athishi.aamaadmiparty.org ಹೆಸರಿನ ಲಿಂಕ್ ಅನ್ನು ಬಿಡುಗಡೆ ಮಾಡಿದ ಅತಿಶಿ, ನಾಯಕ ಸಾರ್ವಜನಿಕ ದೇಣಿಗೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದರೆ ಆಗ ರಚನೆಯಾಗುವ ಸರ್ಕಾರ ಅವರ ಪರವಾಗಿ ಕೆಲಸ ಮಾಡುತ್ತದೆ ಮತ್ತು ಕೈಗಾರಿಕೋದ್ಯಮಿಗಳ ಹಣದಿಂದ ಸ್ಪರ್ಧಿಸಿದರೆ ಅದು ಅವರಿಗೆ ಕೆಲಸ ಮಾಡುತ್ತದೆ ಎಂದು ಹೇಳಿದರು.