January 11, 2025

ಚೀನಾದಲ್ಲಿ ಹೊಸ ವೈರಸ್ ಆತಂಕ: ಕರ್ನಾಟಕಕ್ಕೆ ಕೇಂದ್ರ ಆರೋಗ್ಯ ಇಲಾಖೆ ನೀಡಿದ ಸೂಚನೆ ಏನು?

0

ಚೀನಾದಲ್ಲಿ ಹೊಸ ವೈರಸ್ ಪತ್ತೆಯಾಗಿರುವುದರಿಂದ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಎಚ್ಚರಿಕೆ ವಹಿಸಲಾಗಿದೆ. ಕೇಂದ್ರ ಸರ್ಕಾರ ಐಎಲ್ಐ ಮತ್ತು ಸಾರಿ ಪ್ರಕರಣಗಳಿಗೆ ಪರೀಕ್ಷೆ ನಡೆಸುವಂತೆ ಸೂಚಿಸಿದೆ. ಆರೋಗ್ಯ ಇಲಾಖೆ ಜ್ವರ, ಕೆಮ್ಮು ಇರುವವರು ಮಾಸ್ಕ್ ಧರಿಸುವಂತೆ ಸಲಹೆ ನೀಡಿದೆ. ಹೊಸ ವೈರಸ್‌ನಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಬೆಂಗಳೂರು, ಜನವರಿ 04: ಕೊರೊನಾ (Corona virus) ಹೆಮ್ಮಾರಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ವೈರಸ್​ನ ಅಟ್ಟಹಾಸ ಇನ್ನೂ ಮಾಸಿಲ್ಲ. ಹೀಗಿರುವಾಗಲೇ ಮತ್ತೊಂದು ಹೆಮ್ಮಾರಿ ಲಗ್ಗೆ ಇಟ್ಟಿದೆ. ಚೀನಾದಲ್ಲಿ ಇದೀಗ ಹೊಸ ವೈರಸ್ ಮತ್ತೆ ಪತ್ತೆಯಾಗಿದ್ದು, ಎಲ್ಲರೂ ಶಾಕ್​ ಆಗುವಂತೆ ಮಾಡಿದೆ. ನೆರೆಯ ಚೀನಾ ದೇಶದಲ್ಲಿ ಹೊಸ ವೈರಸ್ ಆತಂಕ ಬೆನ್ನಲ್ಲೇ ಸದ್ಯ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ ಐಎಲ್​ಐ, ಸಾರಿ ಕೇಸ್‌ಗಳು ಕಂಡುಬಂದರೆ ಟೆಸ್ಟಿಂಗ್‌ ಮಾಡುವಂತೆ ಸಲಹೆ ನೀಡಿದೆ.

 

ಚೀನಾ ದೇಶದಲ್ಲಿ ಹೊಸ ವೈರಸ್ ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ಮಾಡಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಪ್ರತಿಕ್ರಿಯಿಸಿದ್ದು, ಐಎಲ್​ಐ, ಸಾರಿ ಕೇಸ್‌ಗಳು ಕಂಡುಬಂದರೆ ಟೆಸ್ಟಿಂಗ್‌ ಮಾಡುವಂತೆ ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ ಕೇಂದ್ರಸರ್ಕಾರ ಸೂಚನೆ ನೀಡಿದೆ.
ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಈ ಸೀಸನ್‌ನಲ್ಲಿ ವೈರಸ್ ಹೆಚ್ಚಾಗಿ ಬರುತ್ತದೆ. ವೈರಸ್ ಹೆಚ್ಚಾಗುವುದರಿಂದ ಉಸಿರಾಟದ ಸಮಸ್ಯೆ ಆಗುತ್ತೆ. ಜ್ವರ, ಕೆಮ್ಮಿನಿಂದ ಬಳಲುವವರು ಮಾಸ್ಕ್ ಹಾಕುವಂತೆ ಸಲಹೆ ನೀಡಿದ್ದಾರೆ.

ಹೊಸ ವೈರಸ್ ಬಗ್ಗೆ ಗಾಬರಿಬೀಳುವ ಅಗತ್ಯವೇನು ಇಲ್ಲ: ಡಾ.ಅತುಲ್ ಗೋಯೆಲ್
ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಡಾ.ಅತುಲ್ ಗೋಯೆಲ್ ಮಾತನಾಡಿದ್ದು, ಮೆಟಾಪ್ನ್ಯೂಮೋವೈರಸ್ ಸಾಮಾನ್ಯ ಶೀತವನ್ನು ಉಂಟುಮಾಡುವ ವೈರಸ್. ತುಂಬಾ ವಯಸ್ಸಾದ ಮತ್ತು ಚಿಕ್ಕವರಲ್ಲಿ ಜ್ವರ ಬರಬಹುದು. ಹೊಸ ವೈರಸ್ ಬಗ್ಗೆ ಗಾಬರಿಬೀಳುವ ಅಗತ್ಯವೇನು ಇಲ್ಲ ಎಂದು ಹೇಳಿದ್ದಾರೆ.

 

 

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು