January 12, 2025

Manmohan Singh: ಭಾರತದ ಕರೆನ್ಸಿ ನೋಟಲ್ಲೂ ಇತ್ತು ಮನಮೋಹನ್ ಸಿಂಗ್ ಸಹಿ! RBI ಸುಧಾರಣೆಯಲ್ಲೂ ಮಾಜಿ ಪ್ರಧಾನಿ ಪಾತ್ರ ಅಪಾರ

0

ಮನಮೋಹನ್‌ ಸಿಂಗ್ ಅವರು ಚಂಡೀಗಢದ ವಿಶ್ವವಿದ್ಯಾಲಯ ಮತ್ತು ಗ್ರೇಟ್‌ ಬ್ರಿಟನ್‌ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ವ್ಯಾಂಸಗ ಮಾಡಿದ್ರು. ನಂತರ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. 1970 ರ ದಶಕದಲ್ಲಿ ಅವರು ಭಾರತ ಸರ್ಕಾರದ ಆರ್ಥಿಕ ಸಲಹಾ ಹುದ್ದೆಗಳ ಸರಣಿಗೆ ಹೆಸರುವಾಸಿಯಾಗಿದ್ದರು. ಮನಮೋಹನ್‌ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕರಾಗಿ (1976–80) ಹಾಗೂ ಆರ್‌‌ಬಿಐ ಗವರ್ನರ್ (1982–85) ಸೇವೆ ಸಲ್ಲಿಸಿದ್ದಾರೆ.

ಭಾರತದ ಮಾಜಿ ಪ್ರಧಾನಿ ಮನಮೋಮಹನ್ ಸಿಂಗ್ (Former PM Manmohan Singh) ಇಂದು ಇಹಲೋಕ ತ್ಯಜಿಸಿದ್ದಾರೆ. ಇವರು ಪ್ರಧಾನಿಯಾಗಿದ್ದಾಗ ದೇಶಕ್ಕೆ ನೀಡಿದ್ದ ಕೊಡುಗೆ ಅಪಾರ. ಡಾ.ಮನಮೋಹನ್ ಸಿಂಗ್ ಅವರು ಸತತ ಎರಡು ಅವಧಿಗೆ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಈ ಮೂಲಕ ದೇಶದ ನಾಯಕನಾಗಿ 10 ವರ್ಷ ಕೆಲಸಮಾಡಿದ್ದಾರೆ. ಮನಮೋಹನ ಸಿಂಗ್ 2004 ರಿಂದ 2014 ರವರೆಗೆ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ್ದಾರೆ. ಇನ್ನು 2008 ರಲ್ಲಾದ ಆರ್ಥಿಕತೆ ಹಿಂಜರಿತವನ್ನು ಸರಿಯಾಗಿ ನಿಭಾಯಿಸಿದ್ದರು. ಈ ಕಾರ್ಯವನ್ನು ಇಡೀ ದೇಶವೇ ಗುರುತಿಸಿತ್ತು. ದೇಶದ ಪ್ರಧಾನಿಯಾಗಿ ಆಯ್ಕೆಯಾದವರಲ್ಲಿ ಇದುವರೆಗೆ ಯಾರೂ ಆರ್‌ಬಿಐ ಗವರ್ನರ್ (RBI Governor) ಆಗಿ ಮನಮೋಹನ್ ಸಿಂಗ್ ಆಯ್ಕೆಯಾಗಿದ್ದರು. ಈ ಮೂಲಕ ಭಾರತೀಯ ಕರೆನ್ಸಿ ನೋಟಿನಲ್ಲೂ ಇವರದ್ದು ಸಹಿ ಇತ್ತು.

ಮನಮೋಹನ್‌ ಸಿಂಗ್ ಅವರು ಚಂಡೀಗಢದ ವಿಶ್ವವಿದ್ಯಾಲಯ ಮತ್ತು ಗ್ರೇಟ್‌ ಬ್ರಿಟನ್‌ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ವ್ಯಾಂಸಗ ಮಾಡಿದ್ರು. ನಂತರ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. 1970 ರ ದಶಕದಲ್ಲಿ ಅವರು ಭಾರತ ಸರ್ಕಾರದ ಆರ್ಥಿಕ ಸಲಹಾ ಹುದ್ದೆಗಳ ಸರಣಿಗೆ ಹೆಸರುವಾಸಿಯಾಗಿದ್ದರು. ಮನಮೋಹನ್‌ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕರಾಗಿ (1976–80) ಹಾಗೂ ಆರ್‌‌ಬಿಐ ಗವರ್ನರ್ (1982–85) ಸೇವೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು