December 23, 2024

ಸಿ.ಟಿ.ರವಿಗೆ ಸ್ವಾಗತ ಕೋರಿದ್ದ 7 ಆ್ಯಂಬುಲೆನ್ಸ್​ ವಿರುದ್ಧ FIR ದಾಖಲು, ಆಗಿದ್ದೇನು?

0

ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ಆಕ್ಷೇಪಾರ್ಹ ಶಬ್ದಗಳನ್ನು ಬಳಸಿದ ಆರೋಪದಲ್ಲಿ ಸಿ.ಟಿ.ರವಿ ಜಾಮೀನನ್ನು ಪಡೆದು ಆಚೆ ಬಂದಿದ್ದು ಈಗ ಹಳೆ ಪ್ರಕರಣವಾಯ್ತು. ಈಗ ಅದೇ ಪ್ರಕರಣ ಮತ್ತೊಂದಿಷ್ಟು ಸಂಕಷ್ಟಗಳನ್ನು ತಂದಿದೆ. ಜಾಮೀನಿನ ಮೇಲೆ ಆಚೆ ಬಂದ ಸಿ.ಟಿ.ರವಿಯವರ ಸ್ವಾಗತಕ್ಕೆ ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರು ಅದ್ಧೂರಿ ಸ್ವಾಗತವನ್ನು ಹಮ್ಮಿಕೊಂಡಿದ್ದು ಈ ವೇಳೆ ಮಾಡಿದ ಎಡವಟ್ಟಿಗೆ ಎಫ್​ಐಆರ್ ದಾಖಲಾಗಿದೆ.

 

ಚಿಕ್ಕಮಗಳೂರು, (ಡಿಸೆಂಬರ್ 22): ಪೊಲೀಸ್‌ ಬಂಧನ, ಜಾಮೀನು ರದ್ಧಾಂತದ ಬಳಿಕ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿನವರೆಗೂ ದಾರಿಯುದ್ಧಕ್ಕೂ ಕಾರ್ಯಕರ್ತರು ಮೆರವಣಿಗೆ, ಪುಷ್ಪಾರ್ಚನೆ ಮಾಡಿ ಅದ್ಧೂರಿ ಸ್ವಾಗತ ಕೋರಿದ್ದಾರೆ. ಅದರಲ್ಲೂ ಚಿಕ್ಕಮಗಳೂರಿನಲ್ಲಿ ಭರ್ಜರಿ ರೋಡ್ ಶೋ ಮಾಡಿದ್ದು, ಈ ವೇಳೆ ಆ್ಯಂಬುಲೆನ್ಸ್​ಗಳನ್ನು ಬಳಕೆ ಮಾಡಲಾಗಿದೆ. ಹೌದು… ಸಿ.ಟಿ.ರವಿ ಸ್ವಾಗತಕ್ಕೆ ಆ್ಬಂಬುಲೆನ್ಸ್​ಗಳು ಸೈರನ್ ಹಾಕಿಕೊಂಡು ಬಂದಿವೆ. ಈ ಸಂಬಂಧ ಇದೀಗ ಎಫ್​ಐಆರ್ ದಾಖಲಾಗಿದೆ. ಕೈಮರದಿಂದ ಸೈರನ್ ಹಾಕಿಕೊಂಡು ಬಂದಿದ್ದ 7 ಆ್ಯಂಬುಲೆನ್ಸ್ ಮೇಲೆ ಈಗ ಪ್ರಕರಣ ದಾಖಲಾಗಿದೆ.

 

ರೋಗಿಗಳಲ್ಲಿದೆ ಸೈರನ್ ಹಾಕಿಕೊಂಡು ಹಾಗೂ ಟಾಪ್​ನಲ್ಲಿ ಲೈಟ್ ಹಾಕಿಕೊಂಡು ಬಂದಿದ್ದ 7 ಆ್ಯಂಬ್ಯುಲೆನ್ಸ್ ಚಾಲಕ, ಮಾಲೀಕರ ವಿರುದ್ಧ ಈಗ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರ ಶಾಂತಿ ಭಂಗ ಆರೋಪದಡಿ ಆ್ಯಂಬುಲೆನ್ಸ್ ಮಾಲೀಕ, ಚಾಲಕರ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ.

 

ಬಂಧನದಿಂದ ಮುಕ್ತವಾದ ಬಳಿಕ ಸಿಟಿ ರವಿ ಅವರು ನಿನ್ನೆ(ಡಿಸೆಂಬರ್ 21) ಮಧ್ಯರಾತ್ರಿ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು, ಅವರ ಅಭಿಮಾನಿಗಳು ಸಿ.ಟಿ ರವಿ ಅವರನ್ನು ಭರ್ಜರಿ ಸ್ವಾಗತ ಕೋರಿದ್ದರು. ರಸ್ತೆಯುದ್ದಕ್ಕೂ ಜೈಕಾರ ಹಾಕಿ ಹೂಮಳೆಗೈದಿದ್ದರು.ಇನ್ನು ಈ ಸ್ವಾಗತದ ಮೆರವಣಿಗೆಯಲ್ಲಿ 7 ಆ್ಯಂಬುಲೆನ್ಸ್​ಗಳು ಭಾಗಿಯಾಗಿದ್ದವು. ಚಿಕ್ಕಮಗಳೂರು ನಗರದ ಹಿರೇಮಗಳೂರಿನಿಂದ ಸಿ.ಟಿ ರವಿ ನಿವಾಸದ ವರೆಗೂ ಸೈರನ್ ಹಾಕಿಹೊಂಡು ಬಂದಿದ್ದವು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು