December 23, 2024

ಸರ್ವಾಧಿಕಾರಿ, ದ್ವೇಷದ ರಾಜಕಾರಣದ ಮೂಲಕ ಕೆಟ್ಟ ಪರಂಪರೆಗೆ ನಾಂದಿ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬೆಳ್ತಂಗಡಿ ಬಿಜೆಪಿ ನಾಯಕ

0

ಬೆಳ್ತಂಗಡಿ: ಈ ಬಾರಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ನಾಮ್ ಕೇ ವಾಸ್ತೆಯಾಗಿದೆ. ನಾನಾ ಕಾರಣಗಳಿಂದ ಅಧಿವೇಶನದಲ್ಲಿ ಮೂರು ದಿನ ನಷ್ಟವಾಗಿದ್ದು, ಅಧಿವೇಶನ ಮುಂದುವರಿಸುವಂತೆ ಪ್ರತಿಪಕ್ಷಗಳ ಕೋರಿಕೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ಎಂ ಎಲ್ ಸಿ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಶನಿವಾರ ಬೆಳ್ತಂಗಡಿಯ ಪ್ರವಾಸಿ ಬಂಗಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಬಹುಮತದ ಅಹಂಕಾರದಿಂದ ತಾವು ಮಾಡಿದ್ದು ನಡೆಯುತ್ತದೆ ಎಂಬ ನಡವಳಿಕೆಯುಳ್ಳ ಕಾಂಗ್ರೆಸ್, ಅಧಿವೇಶನದ ಪ್ರತಿ ಹಂತದಲ್ಲೂ ಗೊಂದಲ ನಡೆಸಿದೆ. ಸರ್ವಾಧಿಕಾರಿ, ದ್ವೇಷದ ರಾಜಕಾರಣದ ಮೂಲಕ ಕೆಟ್ಟ ಪರಂಪರೆಗೆ ನಾಂದಿ ಹಾಡಿದೆ.ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯೇ ನಡೆದಿಲ್ಲ. ಉತ್ತರ ಕೊಡಬೇಕಾದ ಸರಕಾರ ಅಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡಿರುವುದು ವಿಪರ್ಯಾಸ” ಎಂದು ಹೇಳಿದರು.

 

“ರಾಜ್ಯ ಸರಕಾರದಿಂದ ಅಭಿವೃದ್ಧಿ ಕಾರ್ಯ, ಶಂಕುಸ್ಥಾಪನೆ ಸ್ಥಗಿತಗೊಂಡಿದ್ದು ಇದನ್ನು ಶಾಸಕರು ಪ್ರಶ್ನಿಸಿದರೆ ಸರಕಾರದ ಬಳಿ ಸಮರ್ಪಕ ಉತ್ತರವಿಲ್ಲ. ಕುಮ್ಕಿ ಭೂಮಿಯಲ್ಲಿ ಕೃಷಿ ಮಾಡಿ ಮಾಲೀಕತ್ವಕ್ಕಾಗಿ ಕಾಯುತ್ತಿರುವ ಕೃಷಿಕರ ಕುರಿತು ನಿರ್ಲಕ್ಷ ತೋರಲಾಗುತ್ತಿದೆ. ದಕ ಜಿಲ್ಲೆಯ ಸಮಸ್ಯೆಗಳಿಗೆ ಸರಕಾರ ಉದಾಸೀನದ ಪ್ರವೃತ್ತಿ ಮುಂದುವರಿಸಿದೆ ಸದನದಲ್ಲಿ ತಾನು ಕೇಳಿದ 44 ಪ್ರಶ್ನೆಗಳಲ್ಲಿ ಕೇವಲ 13 ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲಾಗಿದೆ” ಎಂದು ದೂರಿದರು.

 

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಭಟನೆಯ ವೇಗದಲ್ಲಿ ಸಾಮಾನ್ಯ ಸದಸ್ಯರಂತೆ ವರ್ತಿಸಿದ್ದಾರೆ.ರಾಜಕೀಯ ಚರ್ಚೆಯನ್ನು ಅವರು ವೈಯಕ್ತಿಕ ನೆಲೆಗೆ ತಂದರು. ಸಾಮಾನ್ಯ ನಿಯಮಗಳನ್ನು ಪಾಲಿಸದೆ ಸಿ.ಟಿ. ರವಿ ಅವರನ್ನು ಬಂಧಿಸಿರುವುದು ಖಂಡನೀಯ.ಈ ಘಟನೆಯ ಒಟ್ಟು ಉದ್ದೇಶ ಪ್ರತಿಪಕ್ಷಗಳ ಧ್ವನಿಯನ್ನು ತಗ್ಗಿಸುವುದು ಆಗಿತ್ತು.ಆದರೆ ಪ್ರತಿ ಪಕ್ಷಗಳು ಇದಕ್ಕೆ ಬೆದರುವುದಿಲ್ಲ ಎಂದು ಹೇಳಿದರು.
ಗಣೇಶ ಗೌಡ ಹಾಗೂ ಪ್ರಶಾಂತ ಪಾರೆಂಕಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು