December 24, 2024

NMPA Recruitment 2024 : ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಖಾಲಿಯಿರುವ 33 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ತಕ್ಷಣ ಅಪ್ಲೈ ಮಾಡಿ

0

ನೀವು ಮಂಗಳೂರಿನ ಆಸುಪಾಸಿನಲ್ಲಿದ್ದು, ಉದ್ಯೋಗದ ಹುಡುಕಾಟದಲ್ಲಿದ್ದರೆ ಅಂತಹವರಿಗೆ ಇಲ್ಲೊಂದು ಸುವರ್ಣವಕಾಶವಿದೆ. ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೇ ಖಾಲಿಯಿರುವ ಒಟ್ಟು 33 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನಶ್ರೇಣಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಮಾಹಿತಿ ತಿಳಿದು ಇಂದೇ ಅರ್ಜಿ ಸಲ್ಲಿಸಿ.

ನವಮಂಗಳೂರು ಬಂದರು ಪ್ರಾಧಿಕಾರವು ಖಾಲಿಯಿರುವ ಒಟ್ಟು 33 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಪ್ರಾಧಿಕಾರದಲ್ಲಿ ಸಿವಿಲ್ ಮತ್ತು ಎಲೆಕ್ಟಿಕಲ್ ವಿಭಾಗದಲ್ಲಿ ಅಸಿಸ್ಟೆಂಟ್ ಇಂಜಿನಿಯರ್, ಅಸಿಸ್ಟೆಂಟ್ ಡೈರೆಕ್ಟರ್, ಡೆಪ್ಯೂಟಿ ಡೈರೆಕ್ಟರ್ , ಸ್ಪೋರ್ಟ್ಸ್ ಆಫೀಸರ್, ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ಹಾಗೂ ಸೀನಿಯರ್ ಅಕೌಂಟ್ಸ್ ಆಫೀಸರ್ ಹುದ್ದೆಗಳು ಖಾಲಿಯಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಡಿಸೆಂಬರ್ 27 ರೊಳಗೆ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ
* ಸಂಸ್ಥೆಯ ಹೆಸರು : ನವಮಂಗಳೂರು ಬಂದರು ಪ್ರಾಧಿಕಾರ

* ಹುದ್ದೆಗಳು : ಸಹಾಯಕ ನಿರ್ದೇಶಕರು, ಹಿರಿಯ ಲೆಕ್ಕಾಧಿಕಾರಿಗಳು, ಕಾನೂನು ಅಧಿಕಾರಿ, ವೈದ್ಯಕೀಯ ಅಧಿಕಾರಿ ಮತ್ತು ಸಹಾಯಕ ಇಂಜಿನಿಯರ್.

 

* ಹುದ್ದೆಗಳ ಸಂಖ್ಯೆ : ಒಟ್ಟು 33 ಹುದ್ದೆಗಳು

* ಉದ್ಯೋಗ ಸ್ಥಳ : ಪಣಂಬೂರು, ಮಂಗಳೂರು

ಶೈಕ್ಷಣಿಕ ಮತ್ತು ವಯೋಮಿತಿ ಅರ್ಹತೆಗಳು
* ಈ ಹುದ್ದೆಗಳ ನೇಮಕಾತಿ ಅನುಸಾರ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೋಮ, ಕಾನೂನು ಪದವಿ, ಮೆಡಿಕಲ್, ಸಿವಿಲ್ ಇಂಜಿನಿಯರ್ ಸೇರಿದಂತೆ ವಿವಿಧ ವಿಷಯದಲ್ಲಿ ಪದವಿ ಪಡೆದಿರಬೇಕು.

* ಅಭ್ಯರ್ಥಿಗಳ ಗರಿಷ್ಟ ವಯಸ್ಸು 45 ವರ್ಷದ ಒಳಗಿರಬೇಕು. ಮೀಸಲಾತಿ ವರ್ಗದವರಿಗೆ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ
* ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 475 ರೂ.

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಹುದ್ದೆಗಳ ನೇಮಕಾತಿ ಆಯ್ಕೆ ವಿಧಾನ

* ಆನ್ಲೈನ್ ಪರೀಕ್ಷೆ

* ವೈಯಕ್ತಿಕ ಸಂದರ್ಶನ.

 

ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ನವೆಂಬರ್ 15, 2024

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 27, 2024

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು