Trending Hairstyles: 2024ರಲ್ಲಿ ಸಖತ್ ಟ್ರೆಂಡ್ ಆದ ಪುರುಷರ ಹೇರ್‌ಸ್ಟೈಲ್‌ಗಳಿವು
ಹೊಸ ವರುಷದ ಹೊಸ್ತಿಲಲ್ಲಿರುವ ನಾವು ಇನ್ನೇನು ಕೆಲವೇ ದಿನಗಳಲ್ಲಿ 2024ರನ್ನು ಬೀಳ್ಕೊಡಲಿದ್ದೇವೆ. ಅಂತೆಯೇ ಹಲವು ಬದಲಾವಣೆಗಳಿಗೆ ಈ ವರುಷ ಸಾಕ್ಷಿಯಾಗಿದೆ. ಇತ್ತೀಚೆಗೆ ಪುರುಷರು ಕೂಡ ತಮ್ಮ ಕೇಶ ಸೌಂದರ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಮಹಿಳೆಯರಿಗೆ ಪೈಪೋಟಿ ನೀಡುವಂತೆ ಪುರುಷರ ವಿಚಾರಕ್ಕೆ ಬಂದರೆ ವಿಭಿನ್ನ ಹೇರ್‌ಸ್ಟೈಲ್‌ಗಳು ಕೂಡ ಈ ವರ್ಷ ಗಮನಸೆಳೆದಿವೆ. ಈ ಪೈಕಿ ಕೆಲವು ಹೇರ್‌ಸ್ಟೈಲ್‌ಗಳಂತೂ ಸಖತ್ ಟ್ರೆಂಡ್ ಆಗಿದ್ದು, ಅವು ಹೀಗಿವೆ.
ಅಂಡರ್ ಕಟ್ ಹೇರ್ ಸ್ಟೈಲ್ (Undercut Hairstyle):
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಪುರುಷರ ವಿಭಾಗದಲ್ಲಿ ಅಂಡರ್ ಕಟ್ ಟ್ರೆಂಡಿಂಗ್ ಹೇರ್ ಸ್ಟೈಲ್ ಆಗಿದೆ. ಈ ರೀತಿಯ ಹೇರ್ ಕಟ್ ಬಹುತೇಕ ಪುರುಷರ ಮುಖದ ಆಕಾರಗಳಿಗೆ ಹೋಲುವುದಲ್ಲದೆ, ನೋಡಲು ಡೀಸೆಂಟ್ ಆಗಿಯೂ ಕಾಣುವ ಕಾರಣಕ್ಕೆ ಪುರುಷರು ಈ ಸ್ಟೈಲ್ ಅನ್ನೇ ಹೆಚ್ಚಾಗಿ ಈ ವರ್ಷ ಬಳಸಿದ್ದಾರೆ. ಅಲ್ಲದೆ ಇದು ಕಡಿಮೆ ನಿರ್ವಹಣೆಗೆ ಆದ್ಯತೆ ನೀಡುವ ಪುರುಷರಿಗೆ ಈ ಕೇಶವಿನ್ಯಾಸವು ಉತ್ತಮವಾಗಿದೆ. ಕ್ಯಾಶುಯಲ್ ಮತ್ತು ಕಾರ್ಪೊರೇಟ್ ಪುರುಷರಿಗೂ ಇದು ಸರಿಹೊಂದುತ್ತದೆ ಎನ್ನಲಾಗಿದೆ.
ಬಝ್ ಕಟ್ (Buzz Cut Hairstyle)
ಬಝ್ ಕಟ್ ಹೇರ್ ಸ್ಟೈಲ್ ದಪ್ಪ ಮತ್ತು ಕಡಿಮೆ ನಿರ್ವಹಣೆ ಬಯಸುವ ಪುರುಷರಿಗೆ ಉತ್ತಮ ಆಯ್ಕೆಯಾಗಿದೆ. ಇದು ಸದ್ಯ ಎಲ್ಲೆಡೆ ಟ್ರೆಂಡ್ ಆಗಿದ್ದು, ಯುವಜನರಂತೂ ಸಲೂನ್‌ಗಳಲ್ಲಿ ಬಝ್ ಕಟ್ ಮಾಡಿ ಎನ್ನುವುದನ್ನು ಕಾಣಬಹುದು. ಇದು ಸಾಮಾನ್ಯವಾಗಿ ತಲೆಯ ಕೂದಲನ್ನು ಟ್ರಿಮ್ ಮಾಡುವ ಶೈಲಿಯಾಗಿದೆ. ಇದು ಸಖತ್ ಸಿಂಪಲ್ ಆದರೂ ನೋಡಲು ಲುಕ್ ಆಗಿ ಕಾಣುತ್ತದೆ. ಈ ಹೇರ್ ಸ್ಟೈಲ್ ಮಾಡಿಸಿಕೊಂಡರೆ ಪ್ರತಿನಿತ್ಯ ತಲೆ ಬಾಚಿಕೊಳ್ಳುವ ತಲೆನೋವು ನಿಮಗಿರೋದಿಲ್ಲ. ಫ್ಯಾಶನ್ ಬಯಸುವ ಭಾರತೀಯ ಪುರುಷರ ನೆಚ್ಚಿನ ಆಯ್ಕೆ ಬಝ್ ಕಟ್.
ಸ್ಲಿಕ್ಡ್ ಬ್ಯಾಕ್ ಹೇರ್ ಸ್ಟೈಲ್ (Slicked Back Hairstyle):
ಇದು ಕ್ಲಾಸಿಕ್ ಹಾಗೂ ಬೋಲ್ಡ್ ಶೈಲಿಯ ಹೇರ್ ಸ್ಟೈಲ್ ಆಗಿದೆ. ಈ ವಿನ್ಯಾಸದಲ್ಲಿ ಮುಖದಿಂದ ಕೂದಲನ್ನು ಹಿಂದಕ್ಕೆ ಬಾಚಿಕೊಂಡರೆ ನಯವಾಗಿ ಮತ್ತು ಅಚ್ಚುಕಟ್ಟಾಗಿ ಆಕರ್ಷಿಸುತ್ತದೆ. ಇದು ನಿಮ್ಮ ನೋಟ ಮತ್ತು ವ್ಯಕ್ತಿತ್ವದ ಪ್ರತಿಬಿಂಬವಾಗಿಯೂ ಹೈಲೈಟ್ ಆಗುತ್ತದೆ. ಎರಡೂ ಬದಿಗಳಲ್ಲಿ ಸೈಡ್ ಲಾಕ್‌ಗಳನ್ನು ಹೊಂದಿರುವ ಪುರುಷರಿಗೆ, ಸ್ಲಿಕ್ ಬ್ಯಾಕ್ ಉತ್ತಮ ಆಯ್ಕೆಯಾಗಿದೆ.
ಪೊಂಪಡೋರ್ (Pompadour):
ಪೊಂಪಡೋರ್ ಹೇರ್‌ಸ್ಟೈಲ್ ಅತ್ಯಂತ ಜನಪ್ರಿಯ ಹೇರ್‌ಕಟ್‌ಗಳಲ್ಲಿ ಒಂದಾಗಿದೆ. ಇದು ಪುರುಷರ ಹಣೆಯ ಮೇಲ್ಭಾಗದಲ್ಲಿ ಉದ್ದವಾದ ಕೂದಲನ್ನು ಒಳಗೊಂಡಿರುತ್ತದೆ. ಅದು ಮೇಲ್ಮುಖವಾಗಿ ಹಿಂದಕ್ಕೆ ಸರಿಸಲಾಗುತ್ತದೆ. ಇದನ್ನು ಉದ್ದ ಹಾಗೂ ಎತ್ತರವಾಗಿಯೂ ಮುಖಕ್ಕೆ ತಕ್ಕಂತೆ ಸೆಟ್ ಮಾಡಲಾಗುತ್ತದೆ. ಈ ಕೇಶವಿನ್ಯಾಸವನ್ನು ವಿವಿಧ ಮುಖದ ಆಕಾರಗಳಿಗೆ ಸೂಕ್ತವಾಗಿರುತ್ತದೆ. ಕ್ಲಾಸಿಕ್ ಪೊಂಪಡೋರ್ ವಿನ್ಯಾಸದಲ್ಲಿ ಸೈಡ್‌ಗಳಲ್ಲಿ ಹಾಗೂ ಹಿಂಭಾಗದಲ್ಲಿ ತುಸು ಕೂದಲನ್ನು ಕತ್ತರಿಸಲಾಗುತ್ತದೆ.
ಮ್ಯಾನ್ ಬನ್ (Man Bun):
ಮ್ಯಾನ್ ಬನ್ ಹೇರ್ ಸ್ಟೈಲ್ ಸಾಮಾನ್ಯವಾಗಿ ಉದ್ದ ಕೂದಲು ಹೊಂದಿರುವ ಭಾರತೀಯ ಪುರುಷರಿಗೆ ಟ್ರೆಂಡಿ ಆಯ್ಕೆಯಾಗಿದೆ. ಈ ಕೇಶವಿನ್ಯಾಸವು ತಲೆಯ ಮೇಲೆ ಉದ್ದನೆಯ ದಟ್ಟವಾದ ಕೂದಲನ್ನು ಸಂಗ್ರಹಿಸುತ್ತದೆ. ಅದನ್ನು ಒಂದು ಗಂಟಿನಂತೆ (ಬನ್) ಕಟ್ಟಲಾಗುತ್ತದೆ. ಇದನ್ನು ಕೆಲವೇ ಮಂದಿ ಮಾತ್ರವೇ ಇಷ್ಟಪಡುತ್ತಾರೆ. ಅದರಲ್ಲೂ ಕೂದಲು ದಟ್ಟವಾಗಿ ಹಾಗೂ ಉದ್ದವಾಗಿ ಬೆಳೆದಿರುವವರಿಗೆ ಮಾತ್ರವೇ ಈ ಹೇರ್‌ಸ್ಟೈಲ್ ಸಖತ್ ಆಗಿರುತ್ತೆ.
ಲಾಂಗ್ & ವೇವಿ ಹೇರ್‌ಸ್ಟೈಲ್ (Long and Wavy Hairstyle)
ಲಾಂಗ್ & ವೇವಿ ಹೇರ್‌ಸ್ಟೈಲ್ ಪುರುಷರಿಗೆ ಸೊಗಸಾದ ಮತ್ತು ಮುಕ್ತ ಮನೋಭಾವದ ನೋಟವನ್ನು ನೀಡುತ್ತದೆ. ಇದನ್ನು ಭಾರತೀಯ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಹೆಚ್ಚಾಗಿ ಫಾಲೋ ಮಾಡಿದ್ದಾರೆ. ಕ್ರಿಕೆಟಿಗ ಎಂ.ಎಸ್.ಧೋನಿ ಸೇರಿದಂತೆ ಹಲವರು ಈ ಲುಕ್‌ನಲ್ಲಿ ಕಾಣಿಸಿಕೊಂಡು ಟ್ರೆಂಡ್ ಸೆಟ್ ಮಾಡಿದ್ದರು. ನೈಸರ್ಗಿಕವಾಗಿ ಗುಂಗುರು ಕೂದಲು ಇರುವವರಿಗೆ ಇದು ಸುಲಭವಾಗಿ ಹೋಲುತ್ತದೆ.
ಇದಲ್ಲದೆ ಮುಲ್ಲೆಟ್ (Mullet), ಫಾಕ್ಸ್ ಹಾಕ್ (Faux Hawk), ಮೆಸ್ಸೀ ಫ್ರಿಂಜ್ (Messy Fringe), ಕರ್ಲಿ ಕೇಶವಿನ್ಯಾಸ (Curly Hairstyle) ಕೂಡ ಈ ವರ್ಷ ಪ್ರಚಲಿತದಲ್ಲಿವೆ.