38 ವಿಮಾನ, 300 ಕಾರು, 92 ಕೋಟಿ ರೂ. ಮೌಲ್ಯದ ವಜ್ರ ಹೊಂದಿರುವ ವಿಶ್ವದ ಶ್ರೀಮಂತ ರಾಜ ಈತ.
ಹಿಂದಿನ ಕಾಲದಲ್ಲಿ ಆಳ್ವಿಕೆ ನಡೆಸುತ್ತಿದ್ದ ರಾಜ-ಮಹಾರಾಜರ ಬಗ್ಗೆ ನಾವು ಲೆಕ್ಕವಿಲ್ಲದಷ್ಟು ಭಾರಿ ಕೇಳಿದ್ದೇವೆ ಓದಿದ್ದೇವೆ. ಅದೂ ಅಲ್ಲದೆ ಅವರ ಸಂಪತ್ತು, ಆಸ್ತಿ ಪಾಸ್ತಿ ಅವರಲ್ಲಿದ್ದ ಅಮೂಲ್ಯ ವಸ್ತುಗಳ ಬಗ್ಗೆ ಕೂಡ ಓದಿ ತಿಳಿದುಕೊಂಡಿದ್ದೇವೆ. ಸದ್ಯ ರಾಜಾಡಳಿತ ಹೋಗಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದ್ದು, ಬಹುತೇಕ ಎಲ್ಲಾ ದೇಶಗಳಲ್ಲಿ ರಾಜಾಡಳಿತ ಅಂತ್ಯಗೊಂಡಿದೆ.
ಆದರೆ ಕೆಲವೊಂದು ದೇಶಗಳಲ್ಲಿ ಪ್ರಜಾಪ್ರಭುತ್ವದ ಆಡಳಿತದ ಜೊತೆಗೆ ಈಗಲೂ ರಾಜಾಡಳಿತವನ್ನು ಹೊಂದಿದ್ದು, ಅವರ ಮನೆತನದವರು ಈಗಲೂ ಗದ್ದುಗೆಯಲ್ಲಿದ್ದಾರೆ. ಹಿಂದಿನ ಕಾಲದ ಅವರ ಪೂರ್ವಜರ ಆಸ್ತಿಗೆ ಹೋಲಿಕೆ ಮಾಡಿದರೆ ಅವರ ಬಳಿ ಅಷ್ಟೊಂದು ಸಂಪತ್ತು ಸದ್ಯ ಇಲ್ಲವಾದರೂ ಈಗಿನ ಕಾಲಘಟ್ಟಕ್ಕೆ ನೋಡಿದರೆ ಅದೊಂದು ದೊಡ್ಡ ಮಟ್ಟದ ಸಂಪತ್ತೇ ಆಗಿದೆ.
ಅಂಥ ರಾಜಮನೆತನದರ ಪೈಕಿ ಥೈಲ್ಯಾಂಡ್ ನ ರಾಜ ಮಹಾ ವಜಿರಲೋಂಗ್‌ಕಾರ್ನ್ ಬಳಿ ಅಪಾರ ಪ್ರಮಾಣದ ಆಸ್ತಿಯನ್ನು ಹೊಂದಿದ್ದೇವೆ. ಇನ್ನು ಸಾಮಾನ್ಯವಾಗಿ ಅಗಾಧ ಪ್ರಮಾಣದ ಸಂಪತ್ತನ್ನು ಹೊಂದಿರುವ ಹಿನ್ನೆಲೆಯಲ್ಲಿಯೇ ಅವರನ್ನು ಕಿಂಗ್ ರಾಮ ಎಂಬ ಹೆಸರಿನಿಂದ ವಜಿರಲೋಂಗ್‌ಕಾರ್ನ್ ಅವರನ್ನು ಗುರುತಿಸಲಾಗುತ್ತದೆ. ಇನ್ನು ಮಹಾ ವಜಿರಲೋಂಗ್‌ಕಾರ್ನ್ ಅವರನ್ನು ಜಾಗತಿಕವಾಗಿ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆಂದು ಸರ್ವ ವ್ಯಾಪಕವಾಗಿ ಗುರುತಿಸಲಾಗುತ್ತದೆ.
ಮಹಾ ವಜಿರಲೋಂಗ್‌ಕಾರ್ನ್ ಬಳಿ ಇರುವ ಆಸ್ತಿ ಎಷ್ಟು? ಇನ್ನು ಇಷ್ಟೆಲ್ಲಾ ಹೇಳಿದ ಮೇಲೆ ಹಲವರಲ್ಲಿ ಮಹಾ ವಜಿರಲೋಂಗ್‌ಕಾರ್ನ್ ಬಳಿ ಇರುವ ಆಸ್ತಿಯ ಬಗ್ಗೆ ಕುತೂಹಲ ಮೂಡುವುದು ಸಹಜವೇ ಆಗಿದೆ. ಇನ್ನು ಥಾಯ್ ರಾಜನ ಬಳಿ ಭಾರೀ ಪ್ರಮಾಣದ ಆಭರಣಗಳಿಂದ ಹಿಡಿದು ಬೃಹತ್ ರಿಯಲ್ ಎಸ್ಟೇಟ್ ಆಸ್ತಿಗಳು ಮತ್ತು ಪ್ರಮುಖ ಕಂಪೆನಿಗಳಲ್ಲಿ ಅವರು ಪಾಲನ್ನು ಕೂಡ ಹೊಂದಿದ್ದಾರೆ. ಇನ್ನು ಮೂಲವೊಂದರ ಪ್ರಕಾರ ರಾಜನ ಬಳಿ ಸುಮಾರು 40 ಬಿಲಿಯನ್ ಡಾಲರ್ ಅಂದರೆ 2.3 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ ಎನ್ನಲಾಗಿದೆ. ಈ ಮೂಲಕ ಅವರು ವಿಶ್ವದ ಅವರು ವಿಶ್ವದ ಶ್ರೀಮಂತ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಅಪಾರ ಪ್ರಮಾಣದ ಭೂಮಿಯನ್ನು ಹೊಂದಿರುವ ರಾಜ ಇನ್ನು ರಾಜನ ಬಳಿ ಇಡೀ ಥೈಲ್ಯಾಂಡ್‌ನಲ್ಲೇ ಭಾರೀ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ. ಥೈಲ್ಯಾಂಡ್‌ನಲ್ಲಿ ಅವರು ಸುಮಾರು 16,210 ಎಕರೆ ಜಾಗವನ್ನು ಹೊಂದಿದ್ದಾರೆ ಎನ್ನಲಾಗಿದೆ. ಅದರಲ್ಲೂ ಅವರು ಬ್ಯಾಂಕಾಕ್‌ನಲ್ಲಿಯೇ 17,000 ಆಸ್ತಿಗಳು ಕೂಡ ಸೇರಿವೆ. ಉಳಿದಂತೆ ಅವರು ಥೈಲ್ಯಾಂಡ್‌ನ ಎರಡನೇ ಅತಿದೊಡ್ಡ ಹಣಕಾಸು ಸಂಸ್ಥೆಯಾದ ಸಿಯಾಮ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ 23% ಪಾಲನ್ನು ಮತ್ತು ದೇಶದ ಅತಿದೊಡ್ಡ ಕೈಗಾರಿಕಾ ಸಮೂಹವಾದ ಸಿಯಾಮ್ ಸಿಮೆಂಟ್ ಗ್ರೂಪ್‌ನಲ್ಲಿ 33.3% ಪಾಲನ್ನು ಹೊಂದಿದ್ದಾರೆ ಎನ್ನಲಾಗಿದೆ.
ಅದೂ ಅಲ್ಲದೆ ಕಿಂಗ್ ವಜಿರಾಲಾಂಗ್‌ಕಾರ್ನ್ ಅವರು ಗೋಲ್ಡನ್ ಜುಬಿಲಿ ಎಂಬ ವಜ್ರವನ್ನು ಹೊಂದಿದ್ದಾರೆ. ಸುಮಾರು 545.67-ಕ್ಯಾರೆಟ್ ವಜ್ರವಾಗಿರುವ ಇದು ವಿಶ್ವದ ಅತೀ ದೊಡ್ಡ ಹಾಗೂ ಅತ್ಯಮೂಲ್ಯ ವಜ್ರವೆಂದು ಗುರುತಿಸಲ್ಪಡುತ್ತದೆ. ಇನ್ನು ಇದರ ಅಂದಾಜು ಮೌಲ್ಯ ಸುಮಾರು 98 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದ್ದು, ಇದು ವಿಶ್ವದ ಅಪ್ರತಿಮ ಆಭರಣಗಳಲ್ಲಿ ಒಂದೆಂದು ಗುರುತಿಸಲ್ಪಡುತ್ತದೆ. ಇನ್ನು ಸಂಚಾರಕ್ಕೆ ಉಪಯೋಗಿಸುವ ವಸ್ತುಗಳ ವಿಚಾರದಲ್ಲಿ ರಾಜ ವಿಭಿನ್ನತೆ ಹೊಂದಿದ್ದಾರೆ.
ಅದೂ ಅಲ್ಲದೆ ಕಿಂಗ್ ವಜಿರಾಲಾಂಗ್‌ಕಾರ್ನ್ ಅವರು ಗೋಲ್ಡನ್ ಜುಬಿಲಿ ಎಂಬ ವಜ್ರವನ್ನು ಹೊಂದಿದ್ದಾರೆ. ಸುಮಾರು 545.67-ಕ್ಯಾರೆಟ್ ವಜ್ರವಾಗಿರುವ ಇದು ವಿಶ್ವದ ಅತೀ ದೊಡ್ಡ ಹಾಗೂ ಅತ್ಯಮೂಲ್ಯ ವಜ್ರವೆಂದು ಗುರುತಿಸಲ್ಪಡುತ್ತದೆ. ಇನ್ನು ಇದರ ಅಂದಾಜು ಮೌಲ್ಯ ಸುಮಾರು 98 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದ್ದು, ಇದು ವಿಶ್ವದ ಅಪ್ರತಿಮ ಆಭರಣಗಳಲ್ಲಿ ಒಂದೆಂದು ಗುರುತಿಸಲ್ಪಡುತ್ತದೆ. ಇನ್ನು ಸಂಚಾರಕ್ಕೆ ಉಪಯೋಗಿಸುವ ವಸ್ತುಗಳ ವಿಚಾರದಲ್ಲಿ ರಾಜ ವಿಭಿನ್ನತೆ ಹೊಂದಿದ್ದಾರೆ.
ಅಲ್ಲದೆ ಲಿಮೋಸಿನ್, ಮರ್ಸಿಡಿಸ್ ಬೆನ್ಝ್ ವಾಹನಗಳ ಸಹಿತ 300ಕ್ಕೂ ಹೆಚ್ಚಿನ ದುಬಾರಿ ಕಾರುಗಳ ಸಂಗ್ರಹವನ್ನು ರಾಜ ಹೊಂದಿದ್ದಾರೆ. ಉಳಿದಂತೆ ಬಂಗಾರದಿಂದ ಮಾಡಿದ ಸುಂದರ ಕೆತ್ತನೆಗಳನ್ನು ಹೊಂದಿರುವ 52 ಗಿಲ್ಡೆಡ್ ದೋಣಿಗಳ ಸಂಗ್ರಹವನ್ನು ಕೂಡ ಅವರು ಹೊಂದಿದ್ದಾರೆ. ಇನ್ನು ಭಾರತದ ಪ್ರಖ್ಯಾತ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರಂತಹ ಭಾರತೀಯ ಬಿಲಿಯನೇರ್‌ಗಳಿಗೆ ಹೋಲಿಕೆ ಮಾಡಿದರೆ ರಾಜನ ಬಳಿ ಅಷ್ಟೊಂದು ಪ್ರಮಾಣದ ಆಸ್ತಿ ಇರದಿದ್ದರೂ ಥೈಲ್ಯಾಂಡ್‌ನಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅವರು ಪ್ರಸಿದ್ದತೆ ಪಡೆದುಕೊಂಡಿದ್ದಾರೆ.