December 23, 2024

ಎಸ್.ಎಂ. ಕೃಷ್ಣ ನಿಧನಕ್ಕೆ ಶೋಕ; ಕರ್ನಾಟಕದ ಬ್ಯಾಂಕುಗಳಿಗೂ ಬುಧವಾರ ರಜೆಯಾ? ಇಲ್ಲಿದೆ ಡೀಟೇಲ್ಸ್

0

Bank holidays in Karnataka: ಇವತ್ತು ಇಹಲೋಕ ತ್ಯಜಿಸಿದ ಮಾಜಿ ಸಿಎಂ ಎಸ್ಸೆಂ ಕೃಷ್ಣ ಅವರಿಗೆ ಗೌರವಾರ್ಥವಾಗಿ ಡಿ. 11ರಂದು ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿರುವ ಬ್ಯಾಂಕುಗಳಿಗೆ ರಜೆ ಇದೆ ಎಂದು ಆರ್​ಬಿಐನಿಂದ ಯಾವುದೇ ಪ್ರಕಟಣೆ ಬಂದಿಲ್ಲ. ಬ್ಯಾಂಕುಗಳು ಯಥಾಪ್ರಕಾರ ಕಾರ್ಯನಿರ್ವಹಿಸುತ್ತವೆ.

 

ಬೆಂಗಳೂರು, ಡಿಸೆಂಬರ್ 10: ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲು ಕರ್ನಾಟಕ ಸರ್ಕಾರ ಇಂದಿನಿಂದ ಮೂರು ದಿನ ಶೋಚಾರಣೆ ಘೋಷಿಸಿದೆ. ನಾಳೆ ಬುಧವಾರ ಒಂದು ದಿನ ಸರ್ಕಾರಿ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ಡಿ. 11ರಂದು ರಜೆ ನೀಡಲಾಗಿದೆ. ಖಾಸಗಿ ಶಾಲೆಗಳೂ ನಾಳೆ ಬಂದ್ ಆಗಿರುತ್ತವೆ. ಇದೇ ವೇಳೆ ಬ್ಯಾಂಕುಗಳಿಗೂ ರಜೆ ಇರುತ್ತದಾ? ಈ ಬಗ್ಗೆ ಅಧಿಕೃತ ಘೋಷಣೆಗಳು ಆಗಿಲ್ಲ.

 

ಬ್ಯಾಂಕ್​ನ ರಜಾ ದಿನಗಳನ್ನು ಆರ್​ಬಿಐ ನಿಗದಿ ಮಾಡುತ್ತದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್​ನಿಂದ ಈ ಬಗ್ಗೆ ಯಾವುದೇ ಪ್ರಕಟಣೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆ ಇರುವ ಸಾಧ್ಯತೆ ಇಲ್ಲ. ಬುಧವಾರ ರಾಷ್ಟ್ರವ್ಯಾಪಿ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಕರ್ನಾಟಕದಲ್ಲೂ ಬ್ಯಾಂಕ್ ಕಚೇರಿಗಳು ಬಾಗಿಲು ತೆರೆದಿರುತ್ತವೆ.

 

ಡಿಸೆಂಬರ್ ತಿಂಗಳಲ್ಲಿ ದೇಶಾದ್ಯಂತ ಒಟ್ಟು 17 ದಿನ ಬ್ಯಾಂಕ್ ರಜೆ ಇರುತ್ತದೆ. ಇದರಲ್ಲಿ ಐದು ಭಾನುವಾರ ಮತ್ತು ಎರಡು ಸೋಮವಾರದ ರಜೆಗಳು ಸೇರಿವೆ. ಇದು ಬಿಟ್ಟರೆ ಸಾರ್ವತ್ರಿಕ ರಜೆ ಇರುವುದು ಡಿಸೆಂಬರ್ 25ರಂದು, ಕ್ರಿಸ್ಮಸ್ ಹಬ್ಬಕ್ಕೆ. ಇನ್ನುಳಿದವು ಪ್ರಾದೇಶಿಕ ರಜೆಗಳೇ ಆಗಿವೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು