ಕರಿಮಣೇಲು ಕಾರ್ಯಕ್ಷೇತ್ರದ ಫಲಾನುಭವಿಗಳಿಗೆ ಲಾಭಾ೦ಶ ವಿತರಣೆ ಧರ್ಮಸ್ಥಳದ ಯೋಜನೆಯಿಂದ ಬಡ ಜನರ ಏಳಿಗೆ: ರಾಮದಾಸ್ ನಾಯಕ್
ವೇಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ವೇಣೂರು ವಲಯದ ಕರಿಮಣೇಲು ಕಾರ್ಯಕ್ಷೇತ್ರದಲ್ಲಿ ಯೋಜನೆಯ ಫಲಾನುಭವಿಗಳಿಗೆ ಲಾಭಾ೦ಶ ವಿತರಣಾ ಕಾರ್ಯಕ್ರಮ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ತಿಮ್ಮಣಬೆಟ್ಟು ಶಾಲೆಯಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಲಯದ ಮೇಲ್ವಿಚಾರಕಿ ಶ್ರೀಮತಿ ಶಾಲಿನಿ ಸದಸ್ಯರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ರಾಮದಾಸ್ ನಾಯಕ್ ಲಾಭಾಂಶ ವಿತರಣೆ ಮಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ . ಜನತೆಯ ಬದುಕಿಗೆ ದಾರಿದೀಪವಾಗಿದೆ ಮತ್ತು ಬಡವರ ಕುಟುಂಬ ಅಭಿವೃದ್ಧಿ ಪಡಿಸುವಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಯೋಜನೆಗಳು ಪರಿಣಾಮಕಾರಿ ಬೀರಿದೆ ಎಂದರು. ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರು ದೋಗು ನಾಯ್ಕ ಮತ್ತು ಒಕ್ಕೂಟದ ಪದಾಧಿಕಾರಿ ಅಂಬಿಕಾ ಮತ್ತು ಸಂಘದ ಸದಸ್ಯರು, ಸೇವಾಪ್ರತಿನಿಧಿ ಶೋಭಾ ,ವಿಪತ್ತು ಘಟಕದ ಸಂಯೋಜಕರಾದ ಗಣೇಶ್ ಉಪಸ್ಥಿತರಿದ್ದರು.