ಪ್ರತಿಭಾ ಕಾರಂಜಿ: ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಅಂಡಿಂಜೆ ಸಉಪ್ರಾ ಶಾಲೆಯ ಕುಮಾರಿ ಪ್ರಜ್ಞಾ ಪ್ರಥಮ, ರಾಜ್ಯಮಟ್ಟಕ್ಕೆ ಆಯ್ಕೆ
ವೇಣೂರು : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಅಂಡಿಂಜೆ ಬೆಳ್ತಂಗಡಿ ತಾಲೂಕು ಇಲ್ಲಿನ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರಜ್ಞಾ ಅವರು ಇಂದು ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿಜೇತ ವಿದ್ಯಾರ್ಥಿನಿಯನ್ನು ಶಾಲೆಯ ಮುಖ್ಯ ಶಿಕ್ಷಕರು ,ಶಿಕ್ಷಕ ವೃಂದ, ಎಸ್ ಡಿಎಂಸಿ ಹಾಗೂ ಪೋಷಕ ವೃಂದ ಅಭಿನಂದಿಸಿದ್ದಾರೆ.