ಅಂಡಿಂಜೆ ಸರಕಾರಿ ಶಾಲೆ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.5 ಲಕ್ಷ ರೂ. ಆರ್ಥಿಕ ನೆರವು
ಅಂಡಿಂಜೆ : ಅಂಡಿಂಜೆ ಶಾಲೆಯ ಭೋಜನಾಲಯ ಹಾಗೂ ಸಭಾಭವನ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರೂ.1.5 ಲಕ್ಷ ಅನುದಾನ ಮಂಜೂರಾತಿ ಮಾಡಿದ್ದು ಅದರ ಮಂಜೂರಾತಿ ಪತ್ರ ಹಸ್ತಾಂತರ ನಡೆಯಿತು.
ಗ್ರಾ.ಯೋಜನೆಯ ವೇಣೂರು ವಲಯ ಮೇಲ್ವಿಚಾರಕಿ ಶಾಲಿನಿ ಮತ್ತು ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಮೋಹನ್ ಅಂಡಿಂಜೆ ಇವರು ಶಾಲಾ ಸಮಿತಿಯವರಿಗೆ ಸದ್ರಿ ಆದೇಶ ಪತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶಿವಶಂಕರ್ ಭಟ್, ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್ ಬಂಗೇರ ಮತ್ತು ಶಾಲಾ ಶಿಕ್ಷಕ ವೃಂದದವರು, ವಿನಾಯಕ ಭಜನಾ ಮಂಡಳಿಯ ಅಧ್ಯಕ್ಷ ಆನಂದ ಕುಲಾಲ್, ಪ್ರಗತಿ ಬಂಧು ಎ ಮತ್ತು ಬಿ ಒಕ್ಕೂಟದ ಅಧ್ಯಕ್ಷರುಗಳಾದ ಯಶೋಧರ ಮತ್ತು ಸುಲೋಚನ, ಸೇವಾಪ್ರತಿನಿಧಿ ಭಾಗ್ಯ, ಒಕ್ಕೂಟದ ಕಾರ್ಯದರ್ಶಿ ಪಂಚಾಯತ್ ಸದಸ್ಯ ಸುರೇಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.