December 23, 2024

ಡಿ. 8ರಂದು ನೋಡಬನ್ನಿ ನಮ್ಮೂರ ಜಾತ್ರೆ ಕುಂಭಶ್ರೀ ವೈಭವ, ಮಾತ-ಪಿತಾ-ಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ

0

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ವೇಣೂರು ಸನಿಹದ ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ವಸತಿ ಶಾಲೆಯಲ್ಲಿ ಡಿ. 8ರಂದು ನಮ್ಮೂರ ಜಾತ್ರೆ ಕುಂಭಶ್ರೀ ವೈಭವ ಹಾಗೂ ಮಾತ-ಪಿತಾ-ಗುರುದೇವೋಭ ವ ಹೃದಯಸ್ಪರ್ಶಿ ಕಾರ್ಯಕ್ರಮ ವಿಶೇಷವಿಎಂಬಂತೆ ನಡೆಯಲಿದ್ದು, ನಾಲ್ಕೂವರೆ ಸಾವಿರ ಮಂದಿ ಜನ ಸೇರುವ ನಿರೀಕ್ಷೆ ಇದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ ನಡೆಯಲಿದೆ ಎಂದು ಕುಂಭಶ್ರೀ ವಿದ್ಯಾಸಂಸ್ಥೆಯ ಸಂಚಾಲಕ ಅಶ್ವಿತ್ ಕುಲಾಲ್ ಹಾಗೂ ಕುಂಭಶ್ರೀ ವೈಭವ ಸಮಿತಿ ಗೌರವಾಧ್ಯಕ್ಷ ಹರೀಶ್ ಪೊಕ್ಕಿ ಅವರು ಮಾಹಿತಿ ನೀಡಿದರು.

ಅವರು ಇಂದು ಬೆಳ್ತಂಗಡಿಯ ಸುವರ್ಣ ಆರ್ಕೆಡ್ ನಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಸಾಧನೆಯ ಹಾದಿಯಲ್ಲಿ
ಕಾಲೇಜು 1996ರಲ್ಲಿ ಆರಂಭಗೊಂಡು, ಗುಲಕುಲ ಮಾದರಿಯಲ್ಲಿ ವಿದ್ಯಾರ್ಜನೆಯನ್ನು ಧಾರೆಯೆರೆಯುತ್ತಾ ಸಾವಿರಾರು ಮಕ್ಕಳ ಶಿಕ್ಷಣದಾಹವನ್ನು ನೀಗಿಸುತ್ತಾ ಬಂದಿದೆ. ಈ ಮಧ್ಯೆ ಸಂಸ್ಥೆಯು ದಾಖಲೆಯ ಹಾದಿಯಲ್ಲಿ ಮುನ್ನಡೆಯುತ್ತಾ ಬಂದಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಪ್ರೀಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ತರಗತಿಗಳಿದ್ದು, ಮೂರನೇ ತರಗತಿಯಿಂದ ಮೇಲ್ಪಟ್ಟ ಮಕ್ಕಳಿಗೆ ಸುಸಜ್ಜಿತ ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸಿದೆ.

 

ಸಂಸ್ಥೆಯ ಸಾಧನೆಗಳು
ಎಸ್‌ಎಸ್‌ಎಲ್‌ಸಿಯಲ್ಲಿ 11ನೇ ಬಾರಿಗೆ ಶೇ. 100 ಫಲಿತಾಂಶ ದಾಖಲಿಸಿಕೊಂಡಿರುವ ಸಂಸ್ಥೆಯು ಪಿಯುಸಿಯಲ್ಲೂ ಕಳೆದ ಮೂರು ವರುಷಗಳಿಂದ ಶೇ. 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ. ಕುಂಭಶ್ರೀ ಸಂಸ್ಥೆಯ ಶಿಕ್ಷಣ ಪದ್ದತಿಯನ್ನು ಆಧರಿಸಿ ಹಲವು ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ರಾಷ್ಟ್ರೀಯ ವಿದ್ಯಾ ಗೌರವ್ ರಾಷ್ಟ್ರೀಯ ಪ್ರಶಸ್ತಿ, ಸ್ಟಾರ್ ಆಫ್ ಏಷ್ಯಾ ರಾಷ್ಟ್ರೀಯ ಪ್ರಶಸ್ತಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಪ್ರಬುದ್ಧ ಭಾರತ್ ರಾಜ್ಯ ಪ್ರಶಸ್ತಿ, ವಿದ್ಯಾರತ್ನ ರಾಜ್ಯ ಪ್ರಶಸ್ತಿ, ಶಾರದಾ ಸೇವಾ ಪ್ರಶಸ್ತಿ ವೇಣೂರು ಹಾಗೂ ರಾಜ್ಯಮಟ್ಟದ ಶಿಕ್ಷಣ ಭೀಷ್ಮ ರಾಜ್ಯ ಪ್ರಶಸ್ತಿ ಸೇರಿದಂತೆ ನೂರಾರು ಕಡೆಗಳಲ್ಲಿ ಸನ್ಮಾನಗಳನ್ನು ಮುಡಿಗೇರಿಸಿಕೊಂಡಿದೆ.

ಮಾತಾ-ಪಿತಾ-ಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ
ನಮ್ಮೂರ ಜಾತ್ರೆ ಕುಂಭಶ್ರೀ ವೈಭವ ಹಾಗೂ ಮಾತಾ-ಪಿತಾ-ಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ
ಪ್ರತೀ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಏರ್ಪಡಿಸುವುದು ಸಾಮಾನ್ಯ. ಆದರೆ ವೇಣೂರು ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ವಿಶೇಷ ರೀತಿಯಲ್ಲಿ ಬೀಳ್ಕೊಡುತ್ತಿರುವುದು ವಾಡಿಕೆ. ಮಾತಾ-ಪಿತಾ-ಗುರುದೇವೋಭವ ಎಂಬ ಪೂಜ್ಯನೀಯ ಬಾವನಾತ್ಮಕ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಿಂದಲೇ ಪೋಷಕರಿಗೆ ಭಾವನಾತ್ಮಕ ಹೃದಯಸ್ಪರ್ಶಿ ಪೂಜ್ಯಭಾವವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ಪ್ರತೀ ವರ್ಷವೂ ವಿಶೇಷ ಎಂಬಂತೆ ನಡೆಯುತ್ತಾಬಂದಿದೆ. ಈ ಬಾರಿಯೂ ಡಿ. ೮ರಂದು ನಮ್ಮೂರ ಜಾತ್ರೆ ಕುಂಭಶ್ರೀ ವೈಭವ ಎಂಬ ಶಿರ್ಷಿಕೆಯಡಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಮತ್ತು ಮಾತಾ-ಪಿತಾ-ಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ ಜರಗಲಿದೆ. ಸುಮಾರು ನಾಲ್ಕುವರೇ ಸಾವಿರ ಮಂದಿ ಜನ ಸೇರುವ ನಿರೀಕ್ಷೆ ಇದೆ. ಮಕ್ಕಳು, ಪೋಷಕರಿಗೆ ಮಾತ್ರವಲ್ಲದೆ ಆಗಮಿಸುವ ಸಾರ್ವಜನಿಕರಿಗೂ ಮಧ್ಯಾಹ್ನ ಮತ್ತು ರಾತ್ರಿ ಸಹಿಭೋಜನ ವ್ಯವಸ್ಥೆ ಏರ್ಪಡಿಸಲಾಗಿದೆ. ಎಂದರು.

ಪತ್ರಿಕಾಗೋಷ್ಠಿಯಲ್ಲಿ  ಅಶ್ವಿತ್ ಕುಲಾಲ್ ಪಡಂಗಡಿ, ಅಧ್ಯಕ್ಷರು ಕುಂಭಶ್ರೀ ವೈಭವ ಸಮಿತಿ, ಪಿಟಿಎ ಉಪಾಧ್ಯಕ್ಷಸಂತೋಷ್ ಪಡಿಲು, ಓ ಮನಾ ಪ್ರಾಂಶುಪಾಲರು, ಪದ್ಮನಾಭ ಕುಲಾಲ್ ವೇಣೂರು ಶಾಲಾ ಹಿತೈಷಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು