December 23, 2024

ಆಡಳಿತದಲ್ಲಿ ದಕ್ಷತೆ..! ಕಾಶಿಪಟ್ಣ ಗ್ರಾ.ಪಂ.ಗೆ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ, ಗಾಂಧಿಗ್ರಾಮ ಪುರಸ್ಕಾರಕ್ಕೂ ಆಯ್ಕೆಯಾಗಿದೆ ಈ ಗ್ರಾಮೀಣ ಭಾಗದ ಪಂಚಾಯತು

0
ವೇಣೂರು: ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಅಂಗವಾಗಿ ಅತ್ಯುತ್ತಮ ಆಡಳಿತ ವ್ಯವಸ್ಥೆಯನ್ನು ನೀಡುವ ಗ್ರಾಮ ಪಂಚಾಯತ್‌ಗಳಿಗೆ ಶಿವರಾಮ ಕಾರಂತ ಪ್ರಶಸ್ತಿ ನೀಡುತ್ತಿದ್ದು, ಈ ಪ್ರಶಸ್ತಿ ತೀರಾ ಗ್ರಾಮೀಣ ಭಾಗದ ಕಾಶಿಪಟ್ಣ ಗ್ರಾಮ ಪಂಚಾಯತ್‌ಗೆ ಲಭಿಸಿದೆ.

ಕೋಟತಟ್ಟು ಕಾರಂಥ ಥೀಂ ಪಾರ್ಕ್‌ನಲ್ಲಿ ನ. ೧೦ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೇಘಾಲಯದ ರಾಜ್ಯಪಾಲ ವಿಜಯಶಂಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಉಪಾಧ್ಯಕ್ಷೆ ಶುಭವಿ, ಪಂ. ಅಭಿವೃದ್ಧಿ ಅಧಿಕಾರಿ ಆಶಾಲತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪಂಚಾಯತ್ ಸದಸ್ಯರಾದ ಸುಶೀಲ, ಶಿಲ್ಪಾ, ಸವಿತಾ, ರವೀಂದ್ರ, ಅಶೋಕ್ ಕುಮಾರ್, ಕಾರ್ಯದರ್ಶಿ ಲೀನಾ, ಸಿಬ್ಬಂದಿಗಳಾದ ಶ್ವೇತಾ, ರೇಷ್ಮಾ, ಸುರೇಖಾ, ಮುಖೇಶ್, ಪ್ರದೀಪ್, ಸುಶಾಂತ್ ಉಪಸ್ಥಿತರಿದ್ದರು.

ಕಾಶಿಪಟ್ಣ ಗ್ರಾ.ಪಂ. ಹಲವಾರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಊರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಗಾಂಧಿಗ್ರಾಮ ಪುರಸ್ಕಾರಕ್ಕೂ ಆಯ್ಕೆ ಆಗಿರುವ ಈ ಗ್ರಾಮ ಪಂಚಾಯತ್ ಸ್ವಚ್ಛತೆಯಲ್ಲಿ ಮೇಲುಗೈ ಸಾಧಿಸಿದೆ.

ಜನಪರ ಕೆಲಸಕಾರ್ಯಗಳಿಗೆ ದೊರೆತ ಗೌರವ: ಸತೀಶ್ ಕೆ. ಕಾಶಿಪಟ್ಣ
ಶಿವರಾಮ ಕಾರಂತ ಪ್ರಶಸ್ತಿಯಿಂದ ಕಾಶಿಪಟ್ಣದ ಹಿರಿಮೆ ಹೆಚ್ಚಾಗಿದೆ. ಮತ್ತೊಂದೆಡೆ ಗಾಂಧಿಗ್ರಾಮ ಪುರಸ್ಕಾರಕ್ಕೆ ನಮ್ಮ ಪಂಚಾಯತ್ ಆಯ್ಕೆ ಆಗಿದೆ.  ಪಿಡಿಒ ಆಶಾಲತಾರವರ ಕಾರ್ಯದಕ್ಷತೆ, ಉಪಾಧ್ಯಕ್ಷರು, ಸದಸ್ಯರು ಮತ್ತು  ಸಿಬ್ಬಂದಿಗಳ ಪಾಲ್ಗೊಳ್ಳುವಿಕೆ, ಗ್ರಾಮಸ್ಥರ ಸಹಕಾರ, ಸಂಘ ಸಂಸ್ಥೆಗಳ ಪ್ರೋತ್ಸಾಹದಿಂದ ಪಂಚಾಯತ್ ಗಣನೀಯವಾಗಿ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು