ಬಳಂಜ ಸರಕಾರಿ ಪ್ರೌಢಶಾಲೆ: ಪಿಜಿ ವಿದ್ಯಾರ್ಥಿಗಳಿಂದ ಸ್ಪೋಕನ್ ಇಂಗ್ಲೀಷ್ ತರಗತಿ
ಬಳಂಜ: ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ.), ಪುತ್ತೂರು, ಎಸ್ ಡಿ ಎಮ್ ಕಾಲೇಜ್ (Autonomous) ಮತ್ತು ಪಿಜಿ ಸೆಂಟರ್, ಡಿಪಾರ್ಟ್ಮೆಂಟ್ ಆಫ್ ಇಂಗ್ಲಿಷ್, ಉಜಿರೆ, ಬಳಂಜ ಶಿಕ್ಷಣ ಟ್ರಸ್ಟ್ (ರಿ.) ಇವರ ನೇತೃತ್ವದಲ್ಲಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆ, ಬಳಂಜದ 6,7,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನದ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ಪಿಜಿ ವಿದ್ಯಾರ್ಥಿಗಳು ನಡೆಸಲಿದ್ದು, ಇದರ ಉದ್ಘಾಟನೆಯನ್ನು ಎಸ್‌ಡಿಎಂ ಕಾಲೇಜ್ ಉಜಿರೆಯ ಹೆಡ್ ಆಫ್ ಡಿಪಾರ್ಟ್ಮೆಂಟ್ ಆಫ್ ಇಂಗ್ಲಿಷ್ ಡಾ. ಮಂಜುಶ್ರೀ ಆರ್. ನೆರವೇರಿಸಿದರು.
ವೇದಿಕೆಯಲ್ಲಿ ಬಳಂಜ ಶಿಕ್ಷಣ ಟ್ರಸ್ಟ್(ರಿ) ನ ಕಾರ್ಯದರ್ಶಿ ರತ್ನರಾಜ್ ಜೈನ್, ಟ್ರಸ್ಟಿ ಬಿ. ಪ್ರಮೋದ್ ಕುಮಾರ್ , ಆಕಾಂಕ್ಷ ಟ್ರಸ್ಟ್ ನ ಸದಸ್ಯೆ ಶ್ರೀಮತಿ ಕವಿತಾ ಎನ್., ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಲೋಚನ ಕೆ. ಮತ್ತು ರೆನಿಲ್ಡಾ ಜೋಯ್ಸ್ ಮಥಾಯಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಮಲ್ಲಿಕಾರ್ಜುನ ಆರ್. ನಿರೂಪಿಸಿ, ಶಿಕ್ಷಕಿ ಶ್ರೀಮತಿ ಹೇಮಲತಾ ಸ್ವಾಗತಿಸಿ, ಪಿಜಿ ವಿದ್ಯಾರ್ಥಿನಿ ದೀಪಾ ವಂದಿಸಿದರು.