ಎಫ್‌ಐಆರ್; ಎಚ್.ಡಿ ಕುಮಾರಸ್ವಾಮಿ ಫಸ್ಟ್ & ಶಾಕಿಂಗ್ ರಿಯಾಕ್ಷನ್!
HD Kumaraswamy: ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಈ ಬಗ್ಗೆ ಎಚ್.ಡಿ ಕುಮಾರಸ್ವಾಮಿ ಅವರು ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಉಪ ಚುನಾವಣೆ ಕಣ ರಂಗೇರುತ್ತಿದೆ. ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಮಹತ್ವದ ಹೆಜ್ಜೆಯನ್ನು ಇರಿಸಿದೆ. ಕುಮಾರಸ್ವಾಮಿ ಅವರ ಮೇಲೆ ಎಫ್‌ಐಆರ್ ದಾಖಲಾಗಿರುವುದು ಸಹಜವಾಗಿಯೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಕೆರಳಿಸಿದೆ. ಕುಮಾರಸ್ವಾಮಿ ಅವರ ಫಸ್ಟ್ ರಿಯಾಕ್ಷನ್ ಏನು ಎನ್ನುವುದು ಇಲ್ಲಿದೆ.
ಎಚ್.ಡಿ ಕುಮಾರಸ್ವಾಮಿ ಮೇಲೆ ಎಫ್‌ಐಆರ್ ದಾಖಲಾಗಿರುವುದಕ್ಕೆ ಎಚ್‌ಡಿಕೆ ಇದು ಹಾಸ್ಯಾಸ್ಪದ ಅಲ್ಲದೇ ಕುತಂತ್ರದಿಂದ (ದುರುದ್ದೇಶಪೂರಿತ) ಕೂಡಿದೆ. ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ದೂರಿನ ಆಧಾರದ ಮೇಲೆ ನನ್ನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎನ್ನುವುದು ಕೇಳಿದರೆ ನಗು ಬರ್ತಿದೆ ಅಂತ ಹೇಳಿದ್ದಾರೆ.
ಈ ರಾಜ್ಯ ಕಾಂಗ್ರೆಸ್ ಸರ್ಕಾರ ನನ್ನ ಮೇಲೆ ಈ ರೀತಿ ಇನ್ನೂ ನೂರು ಎಫ್‌ಐಆರ್‌ಗಳನ್ನು ಬೇಕಾದರೂ ಹಾಕಿಕೊಳ್ಳಲಿ ನಾನು ಹೆದರುವುದಿಲ್ಲ. ಈ ಬೆದರಿಕೆಗಳಿಗೆ ನಾನು ಧೃತಿಗೆಡುವುದಿಲ್ಲ. ಈಗ ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮಾಡುತ್ತಿರುವ ದ್ವೇಷ ರಾಜಕೀಯಕ್ಕೆ ನಾನು ಕೋರ್ಟ್‌ನ ಮೂಲಕವೇ ಉತ್ತರಿಸಲಿದ್ದೇನೆ ಎಂದು ಬೆಂಕಿ ಕಾರಿದ್ದಾರೆ.
ಎಫ್‌ಐಆರ್ ಕಾಪಿ ಓದಿದರೆ ಸಾಕು ಯಾರಿಗಾದರೂ ಅದು ದುರುದ್ದೇಶದಿಂದಲೇ ಮಾಡಿಸಿರೋದು ಅಂತ ಗೊತ್ತಾಗುತ್ತೆ. ನಾನು ಮಾತನಾಡಿರುವ ವಿಡಿಯೋ ಇದೆಯಲ್ಲ ಬೇಕಾದರೆ, ಅದನ್ನೇ ಇನ್ನೊಂದು ಸಲ ನೋಡಿಕೊಳ್ಳಲಿ. ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಆ ಅಧಿಕಾರಿಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದೇನಂತೆ. ಈ ರೀತಿ ಆ ಅಧಿಕಾರಿ (ದೂರು ನೀಡಿರುವವರು) ರಿಕ್ವೆಸ್ಟ್ ಮಾಡಿದ್ದಾರೆ. ನಾನು ಅವರ ಬಗ್ಗೆ ಏನು ಮಾತನಾಡಿದ್ದೇನೆ ಅಂತ ಇನ್ನೊಂದು ಸಲ ಬೇಕಾದರೆ, ವಿಡಿಯೋ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.