December 24, 2024

ವಾಹನ ಸವಾರರೇ ಎಚ್ಚರ! ಇನ್ಮುಂದೆ ಮಕ್ಕಳಿಗೆ ಶಿಶು ಕವಚ, ಬೈಕ್ ಸೇಫ್ಟಿ ಬೆಲ್ಟ್ ಕಡ್ಡಾಯ..!

0

ಇತ್ತೀಚೆಗೆ ಪುಟ್ಟ ಮಕ್ಕಳನ್ನ ಬೈಕ್‌ ಮೇಲೆ ಕೂರಿಸಿಕೊಂಡು ಸುಖಾಸುಮ್ಮನೆ ಸುತ್ತಾಡುವುದು, ಸ್ಟಂಟ್ ಮಾಡುವ ದೃಶ್ಯಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇದರಿಂದ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ಮುಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮಕ್ಕಳಿಗೆ ಹೆಲ್ಮೇಟ್ ಹಾಗೂ ಬೈಕ್ ಸೀಟ್ ಬೆಲ್ಟ್‌ ಕಡ್ಡಾಯವಾಗಿದ್ದರೂ ಬಹುತೇಕ ಪೋಷಕರು ಅದನ್ನು ಪಾಲಿಸುತ್ತಿಲ್ಲ. ಇಂಥಹ ಪೋಷಕರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ಹೌದು.. ರಾಜ್ಯದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಾಹನಗಳ ದಟ್ಟಣೆಯಿಂದಾಗಿ ನಿತ್ಯ ಸಂಭವಿಸುವ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂತಹ ಅಪಘಾತಗಳಿಂದ ಮಕ್ಕಳನ್ನು ರಕ್ಷಿಸಲು ಸಾರಿಗೆ ಇಲಾಖೆ ಸಂಚಾರಿ ನಿಮಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ. ನಿಯಮ ಉಲ್ಲಂಘಿಸುವ ಸವಾರರಿಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

 

ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸರ್ಕಾರ ಹಾಗೂ ಸಾರಿಗೆ ಇಲಾಖೆ ಮುಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ವಾಹನದಲ್ಲಿ ಸಂಚರಿಸುವ ಮಕ್ಕಳಿಗೆ ಹೆಲ್ಮೇಟ್ ಹಾಗೂ ಬೈಕ್ ಸೇಫ್ಟ್‌ ಬೆಲ್ಟ್ ಹಾಕುವುದು ಕಡ್ಡಾಯಗೊಳಿದೆ. ಈ ಮೂಲಕ 4 ವರ್ಷದ ಒಳಗಿನ ಮಕ್ಕಳನ್ನು ಬೈಕ್‌ನಲ್ಲಿ ಕೂಡಿಸಿಕೊಂಡು ಸವಾರಿ ಮಾಡುವ ಸವಾರರಿಗೆ ಬಿಸಿ ಮುಟ್ಟಿಸಿದೆ.

ಬೈಕ್ ಸೇಫ್ಟಿ ಬೆಲ್ಟ್ ಉಪಯೋಗವೇನು?
ಮಕ್ಕಳನ್ನು ಬೈಕ್ ಮೇಲೆ ಕೂಡಿಸಿಕೊಂಡು ಸಂಚಾರ ಮಾಡುವ ಅದೆಷ್ಟೋ ಪೋಷಕರಿಗೆ ಬೈಕ್ ಸೇಫ್ಟಿ ಬೆಲ್ಟ್ ಬಗ್ಗೆ ಗೊತ್ತೇ ಇಲ್ಲ. ಎಷ್ಟೋ ಜನ ಕಾರಿನಲ್ಲಿ ಮಾತ್ರ ಸೀಟ್ ಬೆಲ್ಟ್ ಇರುತ್ತದೆ ಬೈಕ್ ಅಲ್ಲಿ ಇರುವುದಿಲ್ಲ ಅಂದುಕೊಂಡಿದ್ದಾರೆ. ಆದರೆ ಈ ತಿಳಿವಳಿಕೆ ತಪ್ಪು. ಬೈಕ್‌ ಅಲ್ಲಿ ಸಂಚಾರ ಮಾಡುವಾಗ ಮಕ್ಕಳಿಗೆ ಹಾಕುವ ಬೆಲ್ಟ್‌ಗಳು ಅಂಗಡಿಗಳಲ್ಲಿ ಲಭ್ಯವಿದೆ. ಹೆಲ್ಮೇಟ್‌ನಂತೆ ಪೋಷಕರು ಈ ಬೈಕ್ ಸೀಟ್‌ ಬೆಲ್ಟ್‌ಗಳನ್ನು ಖರೀದಿಸಬೇಕು.

 

ಬೈಕ್ ಸೇಫ್ಟಿ ಬೆಲ್ಟ್ ಮಕ್ಕಳಿಗೆ ಹಾಕುವುದರಿಂದ ಅಪಘಾತಗಳನ್ನು ತಪ್ಪಿಸಬಹುದು. ಪುಟ್ಟಮಕ್ಕಳು ಬೈಕ್ ಮೇಲೆ ಸಂಚಾರ ಮಾಡುವಾಗ ಕೆಲವೊಮ್ಮೆ ನಿದ್ದೆ ಹೋಗಿಬಿಡುತ್ತಾರೆ, ಪೋಷಕರಿಗೆ ತಿಳಿಯದಂತೆ ವಾಲಿ ಬಿಡುತ್ತಾರೆ. ಇದರಿಂದಾಗಿ ಕೆಳಗೆ ಬೀಳುವ ಅಪಾಯ ಇರುತ್ತದೆ. ಬೈಕ್ ಸೀಟ್ ಬೆಲ್ಟ್ ಹಾಕುವುದರಿಂದ ಈ ಅಪಾಯಗಳನ್ನು ತಡೆಯಬಹುದು. ಜೊತೆಗೆ ಹಿಂಬದಿ ಸವಾರರನ್ನೂ ಅಪಘಾತಗಳಿಂದ ರಕ್ಷಣೆ ಮಾಡಬಹುದು.

 

4 ವರ್ಷದ ಮಕ್ಕಳಿಗೆ ಹೆಲ್ಮೇಟ್ ಹಾಗೂ ಬೈಕ್ ಸೇಫ್ಟಿ ಬೆಲ್ಟ್ ಹಾಕುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಯಮ ಮೀರುವ ಪೋಷಕರಿಗೆ 1000 ರೂಪಾಯಿ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ 2019ರ ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಬೆಲ್ಟ್ ಹಾಕುವುದು ಕಡ್ಡಾಯ. ಇದನ್ನು ಪಾಲಿಸದ ಪೋಷಕರಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಸೂಚಿಸಿದೆ. ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಆರ್‌ಟಿಒಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ.

 

ಆದರೆ ಈ ನಿಯಮ ಈ ಹಿಂದೆ ಕೂಡ ಜಾರಿಯಲ್ಲಿ ಇತ್ತು. ಆದರೆ ಈ ನಿಮಯವನ್ನು ಬಹುತೇಕ ವಾಹನ ಸವಾರರು ಪಾಲಿಸುತ್ತಿಲ್ಲ. ಇದರೊಂದಿಗೆ ತಮ್ಮ ಹಾಗೂ ತಮ್ಮ ಮಕ್ಕಳ ಜೀವದ ಜೊತೆಗೆ ಆಟವಾಡುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ನಿಯಮ ಮೀರುವ ಪೋಷಕರಿಗೆ ಬಿಸಿ ಮುಟ್ಟಿಸಲು ಈ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು