December 23, 2024

ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ – ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ವೇಣೂರು ನವಚೇತನ ಆಂಗ್ಲ ಮಾಧ್ಯಮ ಶಾಲೆ

0

ವೇಣೂರು: ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಬಳೆಂಜ ಇಲ್ಲಿ ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನವ ಚೇತನ ಆಂಗ್ಲ ಮಾಧ್ಯಮ ಶಾಲೆ ವೇಣೂರು ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ತೋರಿದ್ದಾರೆ.

14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು :
ಸನ್ನಿಧಿ – ಗುಂಡೆಸೆತ -ಪ್ರಥಮ
ಚಕ್ರ ಎಸೆತ -ಪ್ರಥಮ
ಹಾಗೂ 80 ಮೀ ಹರ್ಡಲ್ಸ್ -ಪ್ರಥಮ
ವರ್ಷಿಣಿ ಎತ್ತರ ಜಿಗಿತ -ದ್ವಿತೀಯ
ಯಸ್ತಿ -80 ಮೀ ಹರ್ಡಲ್ಸ್ ದ್ವಿತೀಯ
ಸಂಪ್ರೀತಾ ಉದ್ದ ಜಿಗಿತ- ಪ್ರಥಮ.

 

14ರ ವಯೋಮಾನದ ಬಾಲಕರ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು :

ಶರ್ವಿನ್ ಮೋನಿಸ್ -ಗುಂಡೆಸೆತ – ಪ್ರಥಮ
ಶ್ರವಣ್ ರಾಜ್ -ಚಕ್ರ ಎಸೆತ-ಪ್ರಥಮ.

17ರ ವಯೋಮಾನದ ಬಾಲಕರ ವಿಭಾಗದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು: ಹೃತ್ವಿಕ್ 110 ಮೀ ಹರ್ಡಲ್ಸ್ ಪ್ರಥಮ
ಸ್ವೀಕೃತ್ 400 ಮೀ ಓಟ -ದ್ವಿತೀಯ

ಸೊಹಾನ್ ಪಿಯೋ ರೇಗೋ- ಉದ್ದ ಜಿಗಿತ- ದ್ವಿತೀಯ

14ರ ವಯೋಮಾನದ ಬಾಲಕರ ವಿಭಾಗದ ಚಕ್ರ ಎಸೆತದಲ್ಲಿ ಶರ್ವಿನ್ ಮೋನಿಸ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಲಿಯಾ ಜೇಮ್ಸ್ 80 ಮೀ ಹರ್ಡಲ್ಸ್ ನಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

17ರ ವಯೋಮಾನದ ಬಾಲಕರ ವಿಭಾಗದ ಗುಂಡೆಸತದಲ್ಲಿ ರಕ್ಷಣ್ ತೃತೀಯ ಸ್ಥಾನ ಪಡೆದಿದ್ದಾರೆ.
4×400 ಮೀ ರಿಲೇಯಲ್ಲಿ ಸುಶಾಂತ್, ಸಾತ್ವಿಕ್ ಸೋಹಾನ್ ಪಿಯೋ, ಹಾಗೂ ಸ್ವೀಕೃತ್ ಇವರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ. 4×100 ಮೀ ರಿಲೇಯಲ್ಲಿ ಹೃತ್ವಿಕ್, ಸಾತ್ವಿಕ್, ಸೋಹನ್ ಪಿಯೋ ಹಾಗೂ ಸ್ವೀಕೃತ್ ಇವರ ತಂಡವು ತೃತೀಯ ಸ್ಥಾನವನ್ನು ಪಡೆದಿರುತ್ತದೆ.

14ರ ವಯೋಮಾನದ ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಸನ್ನಿಧಿ ಪಡೆದುಕೊಂಡಿರುತ್ತಾರೆ.
ಹಾಗೂ 14ರ ವಯೋಮಾನದ ಸಮಗ್ರ ಚಾಂಪಿಯನ್ ಟ್ರೋಫಿಯನ್ನು ನವಚೇತನ ಆಂಗ್ಲ ಮಾಧ್ಯಮ ಶಾಲೆಯು ಪಡೆದುಕೊಂಡಿರುತ್ತದೆ.
ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅದ್ವಿತೀಯ ಸಾಧನೆಯನ್ನು ತೋರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಹಾಗೂ ಇವರನ್ನು ಉತ್ತಮ ರೀತಿಯಲ್ಲಿ ತರಬೇತುಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ದೀಕ್ಷಿತ್ ಇವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಲಿನಿ ಡಿಸೋಜಾ, ಶಿಕ್ಷಕ- ಶಿಕ್ಷಕೇತರವೃಂದ ಹಾಗೂ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು