ಕರಾವಳಿಯ ಕುಂಭಶ್ರೀ ಶಿಕ್ಷಣ ಸಂಸ್ಥೆಗೆ RUPSA-KARNATAKAದಿಂದ ಶಿಕ್ಷಣಭೀಷ್ಮ ಪ್ರಶಸ್ತಿ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಂದ ಪ್ರಶಸ್ತಿ ಸ್ವೀಕರಿಸಿದ ಶಾಲೆಯ ಸಂಸ್ಥಾಪಕ ಗಿರೀಶ್ ಕೆ. ಹೆಚ್.
ವೇಣೂರು: ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಕುಂಭಶ್ರೀ ವಿದ್ಯಾ ಸಂಸ್ಥೆಗೆ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಕರ್ನಾಟಕ ಕೊಡಲ್ಪಡುವ 2024- 25ರ ರಾಜ್ಯದ ಉತ್ತಮ ಶಾಲೆ ಶಿಕ್ಷಣ ಬೀಷ್ಮಪ್ರಶಸ್ತಿ ಲಭಿಸಿದೆ.
ಶಾಲೆಯ ಸಂಸ್ಥಾಪಕರಾದ ಗಿರೀಶ್ ಕೆ. ಹೆಚ್. ಅವರು ಬೆಂಗಳೂರಿನಲ್ಲಿ ನಡೆದ rupsa ಸಂಭ್ರಮ ಕಾರ್ಯಕ್ರಮದಲ್ಲಿ
ರಾಜ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರಿಂದ ಪ್ರಶಸ್ತಿ ಸ್ವೀಕರಿಸಿದರು.
ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಗುರುಕುಲ ಮಾದರಿ ಶಿಕ್ಷಣಕ್ಕೆ ಆದ್ಯತೆಯನ್ನು ನೀಡುತ್ತಾ ಬಂದಿದೆ.
1996 ರಲ್ಲಿ ಪ್ರಾರಂಭಗೊಂಡ ಕುಂಭಶ್ರೀ ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಾಧನೆಗೆ ರಾಷ್ಟ್ರೀಯ ವಿದ್ಯಾ ಗೌರವ್ ಚಿನ್ನದ ಪದಕ ಪ್ರಶಸ್ತಿ, ಪ್ರಬುದ್ಧ ಭಾರತ, ಸ್ಟಾರ್ ಆಫ್ ಏಷ್ಯಾ ಪ್ರಶಸ್ತಿಗಳು ಲಭಿಸಿವೆ. ಇದೀಗ ಕುಂಭಶ್ರೀ ವಿದ್ಯಾ ಸಂಸ್ಥೆಯನ್ನು ಅತ್ಯುತ್ತಮ ಶಾಲೆ ಎಂದು ಗುರುತಿಸಲ್ಪಟ್ಟು ಶಿಕ್ಷಣಭೀಷ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕುಂಭಶ್ರೀ ವಿದ್ಯಾ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ,ಎಸ್ ಎಸ್ ಎಲ್ ಸಿ ಯಲ್ಲಿ ಸತತ 11ನೇ ಬಾರಿ ಶೇ.100 ಫಲಿತಾಂಶ, ಪಿಯುಸಿಯಲ್ಲಿ ಮೂರನೇ ಬಾರಿ ನೂರು ಶೇಕಡ ಫಲಿತಾಂಶವನ್ನು ಪಡೆದುಕೊಂಡಿರುತ್ತದೆ .ಬರೀ ಶಿಕ್ಷಣಕ್ಕೆ ಮಾತ್ರ ಮಹತ್ವವನ್ನು ನೀಡುವುದಲ್ಲದೆ, ಕಂಪ್ಯೂಟರ್, ಭರತನಾಟ್ಯ ,ಯೋಗ, ಸಂಗೀತ ಕರಾಟೆ ,ಯಕ್ಷಗಾನ ಮುಂತಾದ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದು, ಉತ್ತಮ ತರಬೇತಿದಾರರಿಂದ ತರಬೇತಿಯನ್ನು ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ವಾಹನದ ವ್ಯವಸ್ಥೆ ಮತ್ತು ಮೂರನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ವಸತಿ ನಿಲಯದ ವ್ಯವಸ್ಥೆ ಇದೆ. ಬೇರೆ ಬೇರೆ ಜಿಲ್ಲೆ, ರಾಜ್ಯಗಳ ಮಕ್ಕಳು ಇಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.
ಉತ್ತಮ ಪಿಯು ಕಾಲೇಜಿನ ವ್ಯವಸ್ಥೆಯಿದ್ದು, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ಜೆ ಇ ಇ ಮುಂತಾದ ವಿಶೇಷ ತರಬೇತಿಗಳನ್ನು ನೀಡಲಾಗುತ್ತಿದೆ. ಮಾತಾ ಪಿತಾ ಗುರುದೇವೋಭವ ಎಂಬ ಪೂಜ್ಯನೀಯ ಕಾರ್ಯಕ್ರಮವು ದ್ವಿತೀಯ ಪಿಯುಸಿ ಮತ್ತು ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆಯು ಪ್ರತಿ ವರ್ಷ ನಡೆಯುತ್ತದೆ. ವಿದ್ಯಾಸಂಸ್ಥೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿರುವುದು ನಮಗೆ ಇನ್ನಷ್ಟು ಸಾಧನೆಗೆ ಸ್ಫೂರ್ತಿ ಸಿಕ್ಕಿದಂತಾಗಿದೆ ಎಂದು
ಸಂಸ್ಥಾಪಕರಾದ ಗಿರೀಶ್ ಕೆ. ಹೆಚ್ ಹಾಗೂ ಸಂಚಾಲಕರಾದ ಅಶ್ವಿತ್ ಕುಲಾಲ್ ತಿಳಿಸಿದ್ದಾರೆ.