ವೇಣೂರು ಪ್ರಾ.ಕೃ.ಪ.ಸ. ಸಂಘದಿಂದ ಸರಕಾರಿ ಪ್ರೌಢಶಾಲೆಯ ಮೂಲಭೂತ ಸೌಲಭ್ಯಕ್ಕೆ ರೂ. 1 ಲಕ್ಷ ಆರ್ಥಿಕ ನೆರವು
ವೇಣೂರು: ಸರಕಾರಿ ಪ್ರೌಢಶಾಲೆ ವೇಣೂರು ಇನ್ನು ಕೆಲವೇ ದಿನಗಳಲ್ಲಿ ಹಳೆಯ ಕಟ್ಟಡದಿಂದ ನೂತನ ಕಟ್ಟಡಕ್ಕೆ ವೇಣೂರು ಸರಕಾರಿ ಪ್ರೌಢಶಾಲೆಯು ಪೂರ್ಣ ಸ್ಥಳಾಂತರಗೊಳ್ಳಲಿದ್ದು, ದಾನಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರ ನೆರವಿನಿಂದ ಮೂಲ ಸೌಲಭ್ಯದ ಕಾರ್ಯ ಭರದಿಂದ ಸಾಗುತ್ತಿದೆ.
ಸರಕಾರಿ ಅನುದಾನದಿಂದ 8 ತರಗತಿ ಕೊಣೆಗಳು ಬಿಟ್ಟರೆ ಮೂಲ ವ್ಯವಸ್ಥೆ ಮಾಡಲಾಗಿಲ್ಲ. ಶಿಕ್ಷಕರು ಹಾಗೂ ಅಭಿವೃದ್ಧಿ ಸಮಿತಿಯವರ ಕನಸಿನಂತೆ ಕುಡಿಯುವ ನೀರು ,ಶೌಚಾಲಯ, ಅಡುಗೆ ಕೋಣೆ, ಹೆಚ್ಚುವರಿ ತರಗತಿ ಕೋಣೆಗಳು ಊರವರು, ದಾನಿಗಳು, ಹಳೆ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಶಾಲೆಯ ಶಿಕ್ಷಕ ವೃಂದ ಕೈಜೋಡಿಸಿ ನಿರ್ಮಿಸುತ್ತಿದೆ.
ಇದೀಗ ವೇಣೂರು ಸಿ.ಎ ಬ್ಯಾಂಕ್ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೂ. 1 ಲಕ್ಷ ಅನುದಾನ ಒದಗಿಸಿದೆ. ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿಇ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಂತ್ ಪೂಜಾರಿ ಅವರು ಶಾಲೆಗೆ ಚೆಕ್ ಹಸ್ತಾಂತರಿಸಿದ್ದಾರೆ.
ಸಂಸ್ಥೆಯ ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಇವರಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.