ಪಾಣೂರು ಗದ್ದೆಯಲ್ಲಿ ಸೆ. 29ರಂದು ಕೆಸರ್‌ದ ಕಂಡೊಡು ಒಂಜಿದಿನ
ವೇಣೂರು: ತುಳುವೆರ ಕೂಟ ವೇಣೂರು ಇದರ ಪ್ರಾಯೋಜಕತ್ವದಲ್ಲಿ ಕೆಸರ್‌ದ ಕಂಡೊಡು ಒಂಜಿದಿನ ವಿಶೇಷ ಆಟೋಟ ಸ್ಪರ್ಧಾ ಕಾರ್ಯಕ್ರಮವು ಸೆ. 29ರಂದು ನಿಟ್ಟಡೆ ಗ್ರಾಮದ ಪಾಣೂರು ಗದ್ದೆಯಲ್ಲಿ ಜರಗಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.
ಸ್ಪರ್ಧೆಯಲ್ಲಿ ಕಬಡ್ಡಿ, ಹಗ್ಗಜಗ್ಗಾಟ, ವಾಲಿಬಾಲ್, ಓಟ, ತ್ರೋಬಾಲ್ ಸೇರಿದಂತೆ ಭಕ್ತಿಗೀತೆ, ಸಂಧಿ, ಭಕ್ತಿಗೀತೆ ಸೇರಿದಂತೆ ಹಲವಾರು ವಿವಿಧ ರೀತಿಯ ಆಟಗಳಿವೆ. ಮಕ್ಕಳು, ಮಹಿಳೆಯವರು, ಪುರುಷರು, ಯುವತಿಯರಿಗೆ ವಿಶೇಷ ರೀತಿಯಲ್ಲಿ ಆಟಗಳನ್ನು ಏರ್ಪಡಿಸಲಾಗಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೂಟದ ಪ್ರಧಾನ ಸಂಚಾಲಕರಾದ ರಾಜೇಂದ್ರ ರಾವ್ ಅವರು ತಿಳಿಸಿದ್ದಾರೆ.