ಪೆರಿಂಜೆ: ವ್ಯಕ್ತಿಯ ಪಾಲಿಗೆ ಯಮನಾದ ಕಣಜದ ಹುಳ! ಕಚ್ಚಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು
ಹೊಸಂಗಡಿ: ಕಣಜದ ಹುಳ ಕಚ್ಚಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬೆಳ್ತಂಗಡಿ ತಾಲೂಕಿನ ಪೆರಿಂಜೆ ನಿವಾಸಿ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟ ಘಟನೆ ನಡೆದಿದೆ.
ಪೆರಿಂಜೆಯ ಕುರ್ಲೊಟ್ಟು ನಿವಾಸಿ ದಿ. ಬಾಬು ಶೆಟ್ಟಿಯವರ ಪುತ್ರ ರಾಜೇಶ್ ಶೆಟ್ಟಿ (44) ಮೃತಪಟ್ಟ ದುರ್ದೈವಿ.
ಸೆ. 10ರಂದು ಅವರನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.