December 24, 2024

ಜೆಡಿಎಸ್ ಕಾರ್ಯಾಧ್ಯಕ್ಷೆ ಎಂದು ಹೇಳಿ 8 ಜನರೊಂದಿಗೆ ಮದುವೆ, 38 ಕೋಟಿ ರೂ. ವಂಚನೆ! ಕರಾವಳಿ ಮೂಲದ ಈ ಖತರ್ನಾಕ್ ಐನಾತಿ ಯಾರು?

0

ಬಳ್ಳಾರಿ: ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡು ಖತರ್ನಾಕ್ ಲೇಡಿಯೊಬ್ಬಳು ಬರೊಬ್ಬರಿ ಎಂಟು ಜನರೊಂದಿಗೆ ಮದುವೆಯಾಗಿ ಬಹುಕೋಟಿ ವಂಚಿಸಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

 

ತಬುಸುಮ್ ತಾಜ್ (40) ಬಂಧಿತ ಮಹಿಳೆ. ಮೂಲತಃ ಉಡುಪಿ ನಿವಾಸಿಯಾಗಿರುವ ಆರೋಪಿ ಮಹಿಳೆ ಒಬ್ಬರಲ್ಲ ಇಬ್ಬರಲ್ಲ ಬರೊಬ್ಬರಿ 8 ಜನರೊಂದಿಗೆ ಸುಳ್ಳು ಹೇಳಿ ನಂಬಿಸಿ ಮದುವೆಯಾಗಿದ್ದಾರೆ. ಬಳಿಕ ಸಾಲ ಕೊಡಿಸೋದಾಗಿ ನಂಬಿಸಿ ಸುಮಾರು 38 ಕೋಟಿಯಷ್ಟು ಹಣ ವಂಚಿಸಿದ್ದಾಳೆಂದರೆ ಊಹಿಸಿ ಈಕೆ ಎಂತಹ ಐನಾತಿ ಎಂದು ತಿಳಿಯುತ್ತದೆ..

 

ಖತರ್ನಾಕ್ ಲೇಡಿ ವಿರುದ್ಧ ತುಮಕೂರು, ಭದ್ರಾವತಿ, ಶಿವಮೊಗ್ಗ, ಮಂಗಳೂರು, ಉಡುಪಿ, ಮಣಿಪಾಲ, ಕಾಪು, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ, ಹೊಸಪೇಟೆ ಬಡಾವಣೆ, ಹೊಸಪೇಟೆ ನಗರ ಠಾಣೆ, ರೂರಲ್ ನಲ್ಲಿ‌ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿವೆ.

ಸಿಟಿಜನ್ ಲೇಬರ್ ವೆಲ್ ಫೇರ್ ಆಂಡ್ ಆಂಟಿ ಕರಪ್ಷನ್ ಕಮಿಟಿ ಎಂದು ಕಚೇರಿ ಮಾಡಿಕೊಂಡು ಅದರ ವಿಳಾಸ ಇಮೇಜ್ ಮುಸ್ಕಾನ್ ಬಿಲ್ಡಿಂಗ್‌ ರೆಸಿಡೆಂಟ್ ಹೊಟೇಲ್ ಸರ್ವಿಸ್ ಬಸ್ ಸ್ಟ್ಯಾಂಡ್ ಉಡುಪಿ ಎಂದು ನಮೂದು ಮಾಡಿಕೊಂಡಿದ್ದಾಳೆ. ಅದೇ ರೀತಿ ಜೆಡಿಎಸ್‌ ರಾಜ್ಯ ಮೈನಾರಿಟಿ ಘಟಕದ ಕಾರ್ಯಾಧ್ಯಕ್ಷೆ ಜೊತೆಗೆ ಹೀನಾ ಎಂಟರ್‌ಪ್ರೈಸೆಸ್ ಎಂದು ರಾಜ್ಯದ ವಿವಿಧೆಡೆ ಆಫೀಸ್ ಮಾಡಿಕೊಂಡಿದ್ದ ಖತರ್ನಾಕ್ ವಂಚಕಿ. ಮುದ್ರಾ ಲೋನ್, ಸರ್ಕಾರಿ ನೌಕರಿ, ಮೈನಾರಿಟಿ ಲೋನ್, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೊಡಿಸೋದಾಗಿ ಹೇಳಿ ವಂಚನೆ ಮಾಡುವುದನ್ನೇ ಉದ್ಯೋಗ ಮಾಡಿಕೊಂಡು ವಂಚನೆಗಿಳಿದಿದ್ದ ಆರೋಪಿ ಮಹಿಳೆ.

 

ಯುಟಿ ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ ಅದನ್ನು ವೈಟ್ ಮಾಡಲಿಕ್ಕೆ ಈ ಬ್ಯುಸಿನೆಸ್ ಶುರು ಮಾಡಿದ್ದೇನೆಂದು ಹೇಳಿ ಮುಗ್ಧರನ್ನ ನಂಬಿಸಿದ್ದ ಕಳ್ಳಿ. ಒಂದು ಕೋಟಿ ನಿಮಗೆ ಲೋನ್ ಬೇಕೆಂದ್ರೆ 15 ಲಕ್ಷ ಕೊಡಿ ಸಾಕು. ಹತ್ತು ದಿನದಲ್ಲಿ ಮೈನಾರಿಟಿ ಲೋನ್ ಕೊಡುತ್ತೇನೆಂದು ಮುಗ್ಧ ಜನರ ತಲೆಗೆ ಮದ್ದು ಅರೆದು ವಂಚಿಸುತ್ತಿದ್ದ ಮಹಿಳೆ. ಇದೇ ರೀತಿ ಸುಳ್ಳು ಹೇಳಿ ಸುಮಾರು 38 ಕೋಟಿ ರೂಪಾಯಿ ವಂಚಿಸಿದ್ದಾಳೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು