ವೇಣೂರು: ರಿಯಾಂತ್ ಎಲೆಕ್ಟ್ರಾನಿಕ್ಸ್ ನೂತನ ಶೋರೂಂ ಮಳಿಗೆ ಉದ್ಘಾಟನೆ
ವೇಣೂರು: ಇಲ್ಲಿಯ ಜಿನಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ರಿಯಾಂತ್ ಎಲೆಕ್ಟ್ರಾನಿಕ್ಸ್ ನೂತನ ಶೋರೂಂ ಮಳಿಗೆಯು ಆ. 28ರಂದು ಉದ್ಘಾಟನೆಗೊಂಡಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ನೂತನ ಎಲೆಕ್ಟ್ರಾನಿಕ್ಸ್ ಮಳಿಗೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಗೊಳಿಸಿ, ಶುಭ ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿನಪ್ರಸಾದ್ ಕಾಂಪ್ಲೆಕ್ಸ್‌ನ ಮಾಲಕಿ ಸರೋಜಾ ಜಿ. ಜೈನ್, ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ, ನಮನ ಕ್ಲಿನಿಕ್‌ನ ಡಾ| ಶಾಂತಿಪ್ರಸಾದ್, ವೇಣೂರಿನ ಪ್ರಸಿದ್ಧ ಉದ್ಯಮಿ ಕೆ. ಭಾಸ್ಕರ ಪೈ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ರೆ|ಫಾ| ಪೀಟರ್ ಅರನ್ಹಾ, ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಉಳ್ತೂರು, ವೇಣೂರು ಜುಮ್ಮಾ ಮಸೀದಿಯ ಬದ್ರುದ್ದೀನ್ ಮದನಿ ಖತೀಬರು, ಮಹಮ್ಮದ್ ಆಸ್ಕರ್ ಇಮಾಮ್ ಹಾಗೂ ವೇಣೂರು ಶ್ರೀ ರಾಮಾಂಜನೇಯ ಫೈನಾನ್ಸ್‌ನ ಜಗದೀಶ್ಚಂದ್ರ ಡಿ.ಕೆ. ಸೇರಿದಂತೆ ವೇಣೂರಿನ ಉದ್ಯಮಿಗಳು, ಹಿತೈಷಿಗಳು ಭಾಗವಹಿಸಿದ್ದರು.
ರಿಯಾಂತ್ ಸಂಸ್ಥೆಯ ಮಾಲಕರಾದ ಪ್ರಸಾದ್ ಜೈನ್ ಬಿ. ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು.