ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಏಷ್ಯನ್ ಪೆಸಿಫಿಕ್ ಯೋಗಾಸನ ಸ್ಪರ್ಧೆ: ಕೊಕ್ರಾಡಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಅಕ್ಕಮ್ಮ ಅವರಿಗೆ ಚಿನ್ನದ ಪದಕ
ಶ್ರೀಲಂಕಾ/ವೇಣೂರು: ಆ. 21ರಿಂದ 24ರವರೆಗೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಏಷ್ಯನ್ ಪೆಸಿಫಿಕ್ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ಸರಕಾರಿ ಪ್ರೌಢಶಾಲೆ ಕೊಕ್ರಾಡಿ, ಬೆಳ್ತಂಗಡಿ ತಾಲೂಕು ಇಲ್ಲಿಯ ಶಿಕ್ಷಕಿ ಚಿನ್ನದ ಪದಕ ಪಡೆದಿದ್ದಾರೆ.
ಏಷ್ಯನ್ ಪೆಸಿಫಿಕ್ ಚಾಂಪಿಯನ್ ಶಿಪ್ ನ ಮಹಿಳೆಯರ ‘ಬಿ’ ವಿಭಾಗದ ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿರುವ ಅಕ್ಕಮ್ಮ ಅವರು ಚಿನ್ನದ ಪದಕವನ್ನು ಪಡೆದಿದ್ದು, ಯೋಗದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ.