December 24, 2024

ಭಾರತೀಯ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ತಾತ್ಕಾಲಿಕ ಸ್ಥಗಿತ, ಎಲ್ಲಾ ವೇಳಾಪಟ್ಟಿ ಬದಲು!

0

ಭಾರತೀಯ ಪಾಸ್‌ಪೋರ್ಟ್ ವೆಬ್‌ಸೈಟ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮ ಈಗಾಗಲೇ ಬುಕ್ ಮಾಡಿದ ಅಪಾಯಿಟ್ಮೆಂಟ್ ವೇಳಾಪಟ್ಟಿ ಬದಲಾಗಿದೆ. ಇಷ್ಟೇ ಅಲ್ಲ ಹೊಸ ಅಪಾಯಿಟ್ಮೆಂಟ್ ಬುಕಿಂಗ್ ಸ್ವೀಕರಿಸಲಾಗುತ್ತಿಲ್ಲ. ಈ ಸ್ಥಗಿತ ಎಷ್ಟು ದಿನ ಇರಲಿದೆ?

 

 

ನವದೆಹಲಿ(ಆ.29) : ಪಾಸ್‌ಪೋರ್ಟ್ ಸೇವೆಯಲ್ಲಿ ವ್ಯತ್ಯಯ ಎದುರಾಗಿದ್ದು, ಹಲವರು ಸಮಸ್ಯೆಗೆ ಸಿಲುಕಿದ್ದಾರೆ. ಆನ್‌ಲೈನ್ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹೀಗಾಗಿ ಸದ್ಯ ಯಾವುದೇ ಹೊಸ ಅರ್ಜಿಗಳನ್ನು, ಅಪಾಯಿಟ್ಮೆಂಟ್‌ಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲಾಗುತ್ತಿಲ್ಲ. ಈಗಾಗಲೇ ಬುಕಿಂಗ್ ಮಾಡಿರುವ ಅರ್ಜಿಗಳ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ ಎಂದು ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಪಷ್ಪಪಡಿಸಿದೆ.

 

 

ತಾಂತ್ರಿಕ ನಿರ್ವಹಣೆ ಕಾರಣ ಭಾರತೀಯ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಸ್ಥಗಿತಗೊಂಡಿದೆ. ಆಗಸ್ಟ್ 29 ರಿಂದ ಸೆಪ್ಟೆಂಬರ್ 2ರ ವರೆಗೆ ಒಟ್ಟು 5 ದಿನಗಳ ಕಾಲ ಪಾಸ್‌ಪೋರ್ಟ್ ಆನ್‌ಲೈನ್ ಪೋರ್ಟಲ್ ಸೇವೆ ಲಭ್ಯವಿಲ್ಲ. ಈ ಕುರಿತು ಪಾಸ್‌ಪೋರ್ಟ್ ಕೇಂದ್ರ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ತಾಂತ್ರಿಕ ನಿರ್ವಹಣೆ ಸಾಮಾನ್ಯ ಪ್ರಕ್ರಿಯೆಯಾಗಿದೆ. 5 ದಿನಗಳ ಕಾಲ ತಾಂತ್ರಿಕ ನಿರ್ವಹಣೆ ಕಾರಣದಿಂದ ಪೋರ್ಟಲ್ ಸೇವೆ ಸ್ಥಗಿತಗೊಂಡಿದೆ. ಜನರು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.

 

ದೇಶದ ಎಲ್ಲಾ ಪಾಸ್‌ಪೋರ್ಟ್ ಕೇಂದ್ರಗಳಲ್ಲಿ ತಾಂತ್ರಿಕ ನಿರ್ವಹಣೆ ಕಾರ್ಯ ನಡೆಯಲಿದೆ. ಹೀಗಾಗಿ ದೇಶದ ಎಲ್ಲಾ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಸೇವೆಗಳು ಲಭ್ಯವಿಲ್ಲ. ತಾಂತ್ರಕ ನಿರ್ವಹಣೆಯಿಂದ ಇದೀಗ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು