ಪರಪ್ಪನ ಅಗ್ರಹಾರದಿಂದ ಮುಂಜಾನೆಯೇ ದರ್ಶನ್ ಶಿಫ್ಟ್; ಬಳ್ಳಾರಿ ಜೈಲು ತಲುಪೋದು ಎಷ್ಟು ಗಂಟೆಗೆ?
ಬೆಂಗಳೂರು: ಪ್ರಕರಣದ ಆರೋಪಿ ದರ್ಶನ್ ಹಾಗೂ ಕೆಲ ಇತರೆ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲು ನ್ಯಾಯಾಲಯ ಅನುಮತಿ ನೀಡಿತ್ತು. ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡುತ್ತಿರುವ ವಿಚಾರ ಬೆಳಕಿಗೆ ಬಂದು ಸಂಚಲನ ಸೃಷ್ಟಿಸಿತ್ತು.
ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿತ್ತು ಎಂಬ ಕೇಸ್ಗೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತಿದೆ. ಮುಂಜಾನೆ 4.30ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಅವರನ್ನು ಪೊಲೀಸರು ಕರೆದೊಯ್ದಿದ್ದಾರೆ. ಮುಂಜಾನೆ 9.30-10ರ ಸುಮಾರಿಗೆ ಅವರು ಬಳ್ಳಾರಿ ಜೈಲು ತಲುಪುವ ಸಾಧ್ಯತೆ ಇದೆ.
ಬೊಲೆರೋ ವಾಹನದಲ್ಲಿ ದರ್ಶನ್ ಅವರನ್ನು ಪೊಲೀಸರು ಕರೆದೊಯ್ದಿದ್ದಾರೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಆರೋಪಿಗಳನ್ನು ಕರೆದೊಯ್ಯಲಾಗಿದೆ.