45 ವರ್ಷಗಳ ನಂತರ ಇತಿಹಾಸ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ! ಏನದು?
ನವದೆಹಲಿ : ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಏರಿದ ನಂತರ, ಭಾರತದ ಅಂತಾರಾಷ್ಟ್ರೀಯ ಸಂಬಂಧಗಳು ಸಾಕಷ್ಟು ಸುಧಾರಣೆ ಕಂಡಿವೆ. ಅದರಲ್ಲೂ ಪಾಶ್ಚಿಮಾತ್ಯ ದೇಶಗಳು ಇದೀಗ ಭಾರತಕ್ಕೆ ಮತ್ತಷ್ಟು ಹತ್ತಿರ ಆಗಲು ಪ್ರಯತ್ನಿಸುತ್ತಿವೆ. ಹೀಗಿದ್ದಾಗಲೇ ಯುರೋಪ್ ಖಂಡದ ದೇಶಗಳಲ್ಲೂ ಪ್ರಧಾನಿ ಮೋದಿ ಅವರು ಸಂಚಲನ ಸೃಷ್ಟಿಸುತ್ತಿದ್ದು, 45 ವರ್ಷಗಳ ನಂತರ ಭಾರತದ ಪ್ರಧಾನಿ ಒಬ್ಬರು ಹೊಸ ಇತಿಹಾಸ ನಿರ್ಮಿಸಿದ್ದಾರೆ! ಹಾಗಾದ್ರೆ ಏನದು ಇತಿಹಾಸ? ಬನ್ನಿ ತಿಳಿಯೋಣ.
ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಪೋಲೆಂಡ್ ದೇಶಕ್ಕೆ ಭೇಟಿ ನೀಡಿದ್ದಾರೆ. ಪಿಎಂ ಮೋದಿ ಅವರನ್ನ ಯುರೋಪ್ ಖಂಡದ ಈ ದೇಶವು ಅದ್ಧೂರಿಯಾಗಿ ಸ್ವಾಗತಿಸಿದೆ. ಸಡಗರ ಹಾಗೂ ಸಂಭ್ರಮದಿಂದ ಭಾರತದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಾಗಿದೆ. ಸುಮಾರು 5 ದಶಕದ ನಂತರ ಭಾರತದ ಪ್ರಧಾನಿ ಒಬ್ಬರು ಪೋಲೆಂಡ್ ದೇಶಕ್ಕೆ ಭೇಟಿ ನಿಡಿದ್ದು ಹೊಸ ಸಾಧನೆ ಆಗಿದೆ. ಹಾಗಾದ್ರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಪೋಲೆಂಡ್ ದೇಶಕ್ಕೆ ಭೇಟಿ ನೀಡಿರುವುದು ಏಕೆ? ಸಂಪೂರ್ಣ ಮಾಹಿತಿ ಇಲ್ಲಿದೆ, ಬನ್ನಿ ತಿಳಿಯೋಣ.
ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ
ಅಂದಹಾಗೆ ಇದೇ ಮೊದಲ ಬಾರಿ ಪೋಲೆಂಡ್ ಮತ್ತು ಉಕ್ರೇನ್‌ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಒಟ್ಟಾರೆ 3 ದಿನಗಳ ಕಾಲ ಈ ಪ್ರವಾಸವನ್ನು ಕೈಗೊಂಡಿದ್ದಾರೆ, ಭಾರತದ ಪ್ರಧಾನಿ ಮೋದಿ ಅವರು. ನಿನ್ನೆ ಭಾರತದಿಂದ ವಿಶೇಷ ವಿಮಾನ ಏರಿ ಹೊರಟ್ಟಿದ್ದ ಪ್ರಧಾನಿ ಮೋದಿ ಅವರು, ಪೋಲೆಂಡ್ ದೇಶಕ್ಕೆ ಬಂದು ಇಳಿದರು. ಹೀಗೆ ಪ್ರಧಾನಿ ಮೋದಿ ಅವರನ್ನು ಪೋಲೆಂಡ್ ದೇಶದಲ್ಲಿ ಭರ್ಜರಿಯಾಗಿ ಸ್ವಾಗತಿಸಲಾಯಿತು. ಖುದ್ದಾಗಿ ಆ ದೇಶದ ರಾಜಕೀಯ ಪ್ರಮುಖರು & ಸೇನಾ ಅಧಿಕಾರಿಗಳು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಇದರ ಜೊತೆಗೆ ಭಾರತೀಯರು ಕೂಡ ಭರ್ಜರಿ ಸ್ವಾಗತ ಕೋರಿದರು.
45 ವರ್ಷಗಳ ನಂತರ ಭೇಟಿ!
ಬುಧವಾರ ಅಂದ್ರೆ ನಿನ್ನೆ ಬಂದಿಳಿದ ಪ್ರಧಾನಿ ಮೋದಿ ಅವರು ಪೋಲೆಂಡ್ ದೇಶದಲ್ಲಿ 2 ದಿನ ವಾಸ್ತವ್ಯ ಹೂಡಲಿದ್ದಾರೆ. ಹಾಗೇ 45 ವರ್ಷಗಳ ನಂತರ ಈ ದೇಶಕ್ಕೆ ಭಾರತದ ಪ್ರಧಾನಿ ಒಬ್ಬರು ಅಧಿಕೃತವಾಗಿ ಮೊದಲ ಬಾರಿಗೆ ಭೇಟಿ ನೀಡಿದ್ದು ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಪೋಲೆಂಡ್ ನಂತರ ಮೋದಿ ಅವರು ಆಗಸ್ಟ್ 23 ರಂದು ಅಂದ್ರೆ ನಾಳೆ, ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ಕೊಡಲಿದ್ದಾರೆ. 7 ಗಂಟೆಗಳ ಕಾಲ ಉಕ್ರೇನ್ ರಾಜಧಾನಿಯಲ್ಲಿ ಉಕ್ರೇನ್ ಅಧ್ಯಕ್ಷರ ಜೊತೆಗೆ ಪ್ರಧಾನಿ ಮೋದಿ ಅವರು ಮಾತುಕತೆ ನಡೆಸುವರು. ಪೋಲೆಂಡ್ ದೇಶದ ಮೂಲಕ ಅವರು ರೈಲು ಮಾರ್ಗದಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಒಟ್ಟಾರೆ 20 ಗಂಟೆಗಳ ಕಾಲ ರೈಲು ಪ್ರಯಾಣ ಮಾಡಲಿದ್ದಾರೆ ಪ್ರಧಾನಿ ಮೋದಿ ಅವರು.
ಒಟ್ನಲ್ಲಿ ಪ್ರಧಾನಿ ಮೋದಿ ಅವರ ಉಕ್ರೇನ್ & ಪೋಲೆಂಡ್ ಪ್ರವಾಸ ಭಾರಿ ಗಮನ ಸೆಳೆದಿದೆ. ಅಲ್ಲದೆ ಇದೀಗ ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಇದೇ ವೇಳೆ ಭಾರತದ ಪ್ರಧಾನಿ ಇಲ್ಲಿಗೆ ಭೇಟಿ ನೀಡಿರುವುದು ಸಿಕ್ಕಾಪಟ್ಟೆ ಗಮನ ಸೆಳೆದಿದೆ. ಮತ್ತೊಂದು ಕಡೆ ಯುದ್ಧ ನಿಲ್ಲಿಸಲು ಉಕ್ರೇನ್ ಜೊತೆಗೆ ಭಾರತದ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ.