ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮುಖಂಡನಿಗೆ ಮಹಿಳೆಯಿಂದ ಫುಲ್ ಕ್ಲಾಸ್! ಯಾಕೆ ಗೊತ್ತಾ?
ಬೆಳ್ತಂಗಡಿ : ಖಾಸಗಿ ರಸ್ತೆಗೆ ಅಡ್ಡಲಾಗಿ ಎರಡು ಗಂಟೆಗೂ ಅಧಿಕ ಸಮಯ ಕೀಯಾ ಕಾರು ನಿಲ್ಲಿಸಿ ಹೋಗಿದ್ದ ಮಾಲೀಕ ಜಿಲ್ಲಾ ಕಿಸನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೋಹನ್ ಕಲ್ಮಂಜ ಅವರನ್ನು ಸಂಚಾರಿ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ಆ.11 ರಂದು ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ಶ್ರೀ ಗುರುದೇವ ಬ್ಯಾಂಕ್ ನ ಶಾಖಾ ಕಚೇರಿಗೆ ಹಾಗೂ ಖಾಸಗಿ ಮನೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ಆ.11 ರಂದು 12:30 ಕ್ಕೆ ಕೀಯಾ ಕಂಪನಿಯ KA-70-M-4209 ಸಂಖ್ಯೆಯ ಕಾರನ್ನು ಮಾಲೀಕ ಮೋಹನ್ ಕಲ್ಮಂಜ ಇಟ್ಟು ಬೇರೆಡೆ ಹೋಗಿದ್ದು ಎಷ್ಟೇ ಕರೆ ಮಾಡಿ ತಿಳಿಸಿದರೂ ಬರಲೇ ಇಲ್ಲ. ಬ್ಯಾಂಕ್ ಸಭೆಗೆ ಬರಬೇಕಾದ ಸದಸ್ಯರ ಕಾರು ಒಳಪ್ರವೇಶ ಮಾಡಲು ಸಾಧ್ಯವಾಗಿರಲ್ಲಿಲ್ಲ, ಪಕ್ಕದ ಖಾಸಗಿ ಮನೆಯ ಮಾಲಕಿ ವಯಸ್ಸಾದ ತಾಯಿ ಜೊತೆ ಬೆಂಗಳೂರಿಗೆ ಹೋಗಲು ರಸ್ತೆ ಕಡೆ ಬರುವಾಗ ಕೂಡ ಕಾರು ಮಾಲೀಕ ಒಂದು ಗಂಟೆಯಾದರೂ ಬಂದೇ ಇಲ್ಲ. ಕೊನೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರನ್ನು ಕರೆಸಲಾಯಿತು.
ಖಾಸಗಿ ಮನೆಯ ಮಹಿಳೆ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಕಾರು ಮಾಲೀಕ ಮೋಹನ್ ಕಲ್ಮಂಜ ನಿಗೆ ಕರೆ ಮಾಡಿ ತಕ್ಷಣ ಬರಲು ತಿಳಿಸಿದರೂ ತಡವಾಗಿ 2:30 ಕ್ಕೆ ಮಾಲೀಕ ಆಗಮಿಸಿದ್ದ.
ಈ ವೇಳೆ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು, ಈ ವೇಳೆ ಕಾರು ಮಾಲೀಕ ಮೋಹನ್ ಕಲ್ಮಂಜ ಮಹಿಳೆಗೆ ಸಾರ್ವಜನಿಕರ ಮುಂದೆ ಕ್ಷಮೆ ಕೇಳಿದ್ದಾರೆ. ಬಳಿಕ ಸಂಚಾರಿ ಪೊಲೀಸರು ಕಾರನ್ನು ಠಾಣೆ ವಶಕ್ಕೆ ಪಡೆದುಕೊಂಡಿದ್ದು. ಪೊಲೀಸರು ಕಾರಿನ ಮೇಲೆ ಮಾಲೀಕ ಮೋಹನ್ ಕಲ್ಮಂಜನಿಗೆ ದಂಡ ವಿಧಿಸಿದ್ದಾರೆ. ಮಹಿಳೆ ಕಾರು ಮಾಲೀಕ ಮೋಹನ್ ಕಲ್ಮಂಜನಿಗೆ ಕ್ಲಾಸ್ ತೆಗೆದುಕೊಂಡ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.