December 23, 2024

ಗುಡ್ಡ, ಭೂ ಕುಸಿತ ಆತಂಕ: ಮುಳ್ಳಯ್ಯನಗಿರಿ, ಚಾರ್ಮಾಡಿ, ಶೃಂಗೇರಿ ಡೇಂಜರಸ್! ಸ್ಪೋಟಕ ವರದಿ ಬಹಿರಂಗ: ನಾಳೆಯಿಂದ ಜಿಯೋಲಾಜಿಕಲ್ ಸರ್ವೆ

0

ಚಿಕ್ಕಮಗಳೂರಿನಲ್ಲಿ ಗುಡ್ಡ ಕುಸಿತ, ಭೂ ಕುಸಿತದ ಆತಂಕ ಶುರುವಾಗಿದೆ. ಹೀಗಾಗಿ ಚಿಕ್ಕಮಗಳೂರು, ಶೃಂಗೇರಿ, ಕಳಸ, ಮೂಡಿಗೆರೆ, ಕೊಪ್ಪ ತಾಲೂಕಿನ 88 ಪ್ರದೇಶಗಳು ಡೇಂಜರಸ್ ಪಟ್ಟಿಗೆ ಸೇರಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ನಾಳೆಯಿಂದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಸರ್ವೆ ಮಾಡಲಾಗುತ್ತಿದೆ.

 

ಚಿಕ್ಕಮಗಳೂರು, ಆಗಸ್ಟ್​ 07: ಅದು ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿರುವ ಜಿಲ್ಲೆ. ಒಂದು ಕಡೆ ಪಶ್ಚಿಮ ಘಟ್ಟ ಸಾಲ ಮತ್ತೊಂದು ಕಡೆ ದಟ್ಟ ಅರಣ್ಯ. ನೂರಾರು ಪ್ರವಾಸಿತಾಣಗಳಿರುವ ಪ್ರವಾಸಿಗರ ಪಾಲಿನ ಸ್ವರ್ಗ ಎಂದೆ ಖ್ಯಾತಿ ಪಡೆದಿದ್ದ ಚಿಕ್ಕಮಗಳೂರಿನಲ್ಲಿ (Chikkamagaluru) ಗುಡ್ಡ ಕುಸಿತ, ಭೂ ಕುಸಿತದ ಆತಂಕ ಶುರುವಾಗಿದೆ. ಮುಳ್ಳಯ್ಯನಗಿರಿ (Mullayanagiri) ಸೇರಿದಂತೆ ಮಲೆನಾಡಿನ 5 ತಾಲೂಕಿನ 88 ಪ್ರದೇಶಗಳು ಡೇಂಜರಸ್ ಪಟ್ಟಿಗೆ ಸೇರಿದ್ದು ನಾಳೆಯಿಂದ ಜಿಯೋಲಾಜಿಕಲ್ ಸರ್ವೆ ಆರಂಭವಾಗಲಿದೆ.

 

ಕಾಫಿನಾಡು ಚಿಕ್ಕಮಗಳೂರು ಮಲೆನಾಡು, ದಟ್ಟ ಕಾಡು ಪಶ್ಚಿಮ ಘಟ್ಟ ಸಾಲಿನ ಸೋಲಾ ಅರಣ್ಯ ಹೊಂದಿರುವ ಪ್ರಕೃತಿ ಸೌಂದರ್ಯದಿಂದ ತುಂಬಿರುವ ಜಿಲ್ಲೆ. ಜಿಲ್ಲೆಯಾದ್ಯಂತ ನೂರಾರು ಪ್ರವಾಸಿತಾಣಗಳಿಗೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರ್ತಾರೆ. ಆದರೆ ರಾಜ್ಯದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಂದ್ರದ್ರೋಣ ಪರ್ವತ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಂತ ಪ್ರವಾಸಿತಾಣಗಳಿಂದ ತುಂಬಿರುವ ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತ ಸೇರಿದಂತೆ ಚಿಕ್ಕಮಗಳೂರು, ಶೃಂಗೇರಿ, ಕಳಸ, ಮೂಡಿಗೆರೆ, ಕೊಪ್ಪ ತಾಲೂಕಿನ 88 ಪ್ರದೇಶಗಳು ಡೇಂಜರಸ್ ಪಟ್ಟಿಗೆ ಸೇರಿದೆ.

 

ಈ‌ ವರ್ಷ ಜಿಲ್ಲೆಯಾದ್ಯಂತ ಅದರಲ್ಲೂ ಮಲೆನಾಡು ಭಾಗ ಪಶ್ಚಿಮ ಘಟ್ಟ ಸಾಲಿನಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು ವಾಡಿಕೆ ಪ್ರಮಾಣಕ್ಕಿಂತ 30% ಅಧಿಕ ಮಳೆ ಸುರಿದಿದ್ದು ನಾನಾ ಅನಾಹುತಕ್ಕೆ ಕಾರಣವಾಗಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಮೀಪ ಭೂ ಕುಸಿತ ಸಂಭವಿಸಿದ್ದು ಗುಡ್ಡಗಳು ರಸ್ತೆಗೆ ಊರುಳಿ ಬೀಳುತ್ತಿದೆ.

 

ಮತ್ತೊಂದು ಕಡೆ ಮಲೆನಾಡು ತಾಲೂಕಿನಲ್ಲಿ ಭೂ ಕುಸಿತ, ಗುಡ್ಡ ಕುಸಿತ ನಿರಂತರವಾಗಿ ಸಂಭವಿಸುತ್ತಿದ್ದು ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ 88 ಡೇಂಜರಸ್ ಸ್ಥಳಗಳನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಗುರುತು ಮಾಡಿದ್ದು ನಾಳೆಯಿಂದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಪರಿಶೀಲನೆ ನಡೆಯಲಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು