December 24, 2024

ಸವಣಾಲು ಆದಿನಾಥ ಜಿನ ಮಂದಿರದ ಜೀರ್ಣೋದ್ಧಾರಕ್ಕೆ ರೂ. 9 ಲಕ್ಷ ಅನುದಾನ: ಮಂಜೂರಾತಿಗೆ ಸಹಕರಿಸಿದ ರಕ್ಷಿತ್ ಶಿವರಾಂ ಅವರಿಗೆ ಸನ್ಮಾನ

0

ಬೆಳ್ತಂಗಡಿ : ಆಟಿ ಅಮಾವಾಸ್ಯೆ ಪುಣ್ಯ ದಿನದಂದು ಇಂದು ತಾಲೂಕಿನ ಪುಣ್ಯ ಕ್ಷೇತ್ರ ಸವಣಾಲು ಅತಿಶಯ ತೀರ್ಥ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೇಟಿ ನೀಡಿ ಶ್ರೀ ದೇವರಿಗೆ ಪ್ರಾಥನೆ ಸಲ್ಲಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸವಣಾಲು ಆದಿನಾಥ ಜಿನ ಮಂದಿರದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಒಂಬತ್ತು ಲಕ್ಷ ಅನುದಾನ ಮಂಜೂರಾತಿಗೆ ಸಹಕರಿಸಿದ ರಕ್ಷಿತ್ ಶಿವರಾಂ ರವರನ್ನು ಸಮಿತಿಯವರು ಗೌರವಿಸಿದರು. ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾದ ಜಯಕೀರ್ತಿ ಜೈನ್ , ಸಮಿತಿಯ ಮುಖ್ಯಸ್ಥರಾದ ಕಿಶೋರ್ ಹೆಗ್ಡೆ ಸುರೇಶ್, ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು