ವೇಣೂರು : ಮೂಡುಕೋಡಿ ನಾರ್ಲ ಮನೆ ಶ್ರೀಮತಿ ಸುಶೀಲರವರ ಮನೆಯ ಸಿಟೌಟ್ ಮೇಲೆ ಅಡಿಕೆ ಮರ ಬಿದ್ದು ಸಿಮೆಂಟ್ ಸೀಟ್ಗಳು ತುಂಡಾಗಿ ಮುರಿದು ಬಿದ್ದಿದೆ.
ಫಲ ತುಂಬಿದ್ದ ಅಡಿಕೆ ಮರವೇ ಉರುಳಿದ್ದು, ನಷ್ಟ ಸಂಭವಿಸಿದೆ. ವಿಷಯ ತಿಳಿದು ಪಂಚಾಯತ್ ಸದಸ್ಯರು ಭೇಟಿ ನೀಡಿದ್ದು, ಸೂಕ್ತ ಪರಿಹಾರಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.