ತಹಸೀಲ್ದಾರ್ ರೌಂಡ್ಸ್ : ವೇಣೂರು ಭೂಕುಸಿತ ಸ್ಥಳಕ್ಕೆ ಬೆಳ್ತಂಗಡಿ ತಹಸೀಲ್ದಾರ್ ಭೇಟಿ
ವೇಣೂರು : ವೇಣೂರು ಗ್ರಾಮ ಪಂಚಾಯತು ಕಛೇರಿ ಬಳಿಯ ಹೆದ್ದಾರಿ ಬದಿ ಭೂ ಕುಸಿತ ಉಂಟಾಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿಸಾನಿಕಮ್, ತಾಲೂಕು ಪಂಚಾಯತು ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಹಾಗೂ ಅಧಿಕಾರಿ ವರ್ಗದವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ವೇಣೂರು -ಮೂರ್ಜೆ ರಸ್ತೆಯ ವೇಣೂರು ಮೆಸ್ಕಾಂ ಕಛೇರಿ ಬಳಿ ಕುಸಿದಿರುವ ರಸ್ತೆಯನ್ನೂ ತಹಸೀಲ್ದಾರ್ ವೀಕ್ಷಿಸಿದರು.