ಹಾಸನದ ಶಿರಾಡಿಘಾಟ್ನಲ್ಲಿ ವಾಹನ ಸಂಚಾರ ಆರಂಭ
ಹಾಸನದ ಶಿರಾಡಿಘಾಟ್ನಲ್ಲಿ ವಾಹನ ಸಂಚಾರ ಆರಂಭ
ಕರ್ನಾಟಕ ಮಳೆ, ಹವಾಮಾನ, ನೆರೆ ಮತ್ತು ಪ್ರವಾಹ ಲೈವ್ ವರದಿ: ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಜಲ ಕಂಟಕದಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ನರೆ ರಾಜ್ಯಗಳಲ್ಲಿ ಸುರಿಯುತ್ತಿರುವ ಮಳೆಯಿಂದ ರಾಜ್ಯದ ನದಿಗಳಿಗೆ ಭಾರಿ ಒಳಹರಿವು ಇದೆ. ಇದರಿಂದ ಪ್ರವಾಹ ಪರಿಸ್ಥತಿ ಎದುರಾಗಿದೆ. ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡ್ಡ ಕುಸಿತ ಸಂಭವಿಸಿದೆ.
ಶಿರಾಡಿಘಾಟ್ನಲ್ಲಿ ಸಂಚಾರ ಆರಂಭ
ಗುಡ್ಡ ಕುಸಿತದಿಂದ ಬಂದ್ ಆಗಿದ್ದ ಹಾಸನದ ಶಿರಾಡಿಘಾಟ್ನಲ್ಲಿ ಸಂಚಾರ ಆರಂಭವಾಗಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಗುಡ್ಡ ಕುಸಿದಿತ್ತು. ಕೂಡಲೆ ಕಾರ್ಯಪ್ರವೃಹತವಾದ ಜಿಲ್ಲಾಡಳಿತ ಸತತ 10-12 ಗಂಟೆ ಕಾರ್ಯಾಚರಣೆ ನಡೆಸಿ ಮಣ್ಣು ತೆರವು ಮಾಡಿದೆ. ಇದರಿಂದ ರಸ್ತೆ ಸಂಚರಿಸಲು ಮುಕ್ತವಾಗಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲ ಕೆಸರುಮಯವಾಗಿದೆ. ಟ್ರಕ್ವೊಂದು ಕೆಸರಿನಲ್ಲಿ ಸಿಲುಕಿತ್ತು. ನಿಧಾನಗತಿ ಸಂಚಾರದಿಂದ ರಸ್ತೆಯ ಎರಡೂ ಬದಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.