ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಅಂಗರಕ್ಷಕ ನಿಯೋಜನೆ
ಬೆಳ್ತಂಗಡಿ: ಬೆದರಿಕೆ ಗ್ರಹಿಕೆಯ ಹಿನ್ನೆಲೆ ಬೆಳ್ತಂಗಡಿ ಕ್ಷೇತ್ರ ಶಾಸಕ ಹರೀಶ್ ಪೂಂಜ ಅವರಿಗೆ ರಾಜ್ಯ ಅಂಗರಕ್ಷಕ ‘ದ್ರತಾ ಪುನರ್ ವಿಮರ್ಶಣಾ ಸಮಿತಿಯ ಸೂಚನೆ ಮೇರೆಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಅಂಗರಕ್ಷಕರನ್ನು ನಿಯೋಜಿಸಲು ಆದೇಶಿಸಲಾಗಿದೆ.
ರಾಜ್ಯ ಅಂಗರಕ್ಷಕ ‘ದ್ರತಾ ಪುನರ್ ವಿಮರ್ಶಣಾ ಸಮಿತಿಯು ಶಾಸಕ ಹರೀಶ್ ಪೂಂಜ ಅವರ ಪ್ರಸ್ತುತ ಬೆಳವಣಿಗೆಯನ್ನು ಅವಲೋಕಿಸಿ ಬೆದರಿಕೆ ಗ್ರಹಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸೂಚನೆ ನೀಡಿದಂತೆ ದ.ಕ. ಪೊಲೀಸ್ ಅಧೀಕ್ಷಕ ಅವರ ಆದೇಶದ ಮೇರೆಗೆ ಜು.28ರಂದು ಜಾರಿಗೆ ಬರುವಂತೆ ಓರ್ವ ಅಂಗರಕ್ಷನನ್ನು ನಿಯೋಜಿಸಿದೆ.