December 24, 2024

ಆಂಕರ್ ಶಾಲಿನಿಗೆ ಅಂತಾನೆ ಈ ಬ್ಲೌಸ್ ಹುಟ್ಟಿರೋದು; ಬೇಕು ಅಂದ್ರು ನಿಮ್ಗೆ ಸಿಗಲ್ಲ!

0

ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ಹಲವು ದಿನಗಳಿಂದ ಮೂಡಿ ಬರುತ್ತಿದೆ. ಶಾಲಿನಿ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ಕಷ್ಟ ಸುಖಗಳನ್ನು ಕೇಳುವುದರ ಜೊತೆಗೆ ಕಾಮಿಡಿ ಕೂಡ ಮಾಡುತ್ತಾರೆ. ಅದರಲ್ಲೂ ಶಾಲಿನಿ ಆಂಕರಿಂಗ್ ಅಂದ್ರೆ ಕೇಳ್ಬೇಕಾ, ಹೇಳೋದೆ ಬೇಡ. ಜಾಲಿ ಜಾಲಿಯಾಗಿ ಎಲ್ಲರು ಕೆಲಸ ಮಾಡುತ್ತಾರೆ.

 

ಇತ್ತಿಚೆಗೆ ಸುವರ್ಣ ಸೂಪರ್ ಸ್ಟಾರ್ ವೇದಿಕೆಯಲ್ಲಿ ಶಾಲಿನಿ ಅವರ ಮಗಳು ಕೂಡ ಬಂದಿದ್ದರು. ಅವರು ಅಮ್ಮನಂತೆಯೇ ಆಂಕರಿಂಗ್ ಮಾಡಿ ಗಮನ ಸೆಳೆದಿದ್ದರು. ಹೀಗೆ ಸುವರ್ಣ ಸೂಪರ್ ಸ್ಟಾರ್‌ನಲ್ಲಿ ಶಾಲಿನಿ ವಿಭಿನ್ನವಾದದ್ದು, ವಿಶೇಷವಾದದ್ದು ಏನಾದರೂ ಮಾಡುತ್ತಲೇ ಇರುತ್ತಾರೆ. ಅದಕ್ಕೂ ವಿಶೇಷ ಅಂದ್ರೆ ಶಾಲಿನಿ ಹಾಕುವ ಬ್ಲೌಸ್‌ಗಳದ್ದು.

 

ಮೌನೇಶನೇ ರುವಾರಿ ಸುವರ್ಣ ಸೂಪರ್ ಸ್ಟಾರ್ ವೇದಿಕೆಗೆ ನಿರೂಪಕಿಯಾಗಿ ಬರುವ ಶಾಲಿನಿ ಹೆಚ್ಚು ಗಮನ ಸೆಳೆಯುವುದು ಅವರು ತೊಡುವ ಸೀರೆ.‌ ಅದಕ್ಕೆ ಮ್ಯಾಚ್ ಮಾಡಿಕೊಳ್ಳುವ ಬ್ಲೌಸ್. ಶಾಲಿನಿಗೆ ಒಂದೊಂದು ಬ್ಲೌಸ್ ರೆಡಿ ಮಾಡಿ ಕೊಡುವುದು ಮೌನೇಶ‌ನೆ. ಅದೆಲ್ಲೆಲ್ಲಿಂದ ತಲೆಗೆ ಬರುತ್ತೋ ಏನೋ, ಅದ್ಭುತ, ವಿಭಿನ್ನ, ವಿಶೇಷತೆ ಹೀಗೆ ಇರೋ ಬರೋ ಹೆಸರೆಲ್ಲ ಹೇಳುವಂತ ಬ್ಲೌಸ್‌ಗಳನ್ನೇ ರೆಡಿ ಮಾಡ್ತಾರೆ.

ಮೌನೇಶನೇ ರುವಾರಿ ಸುವರ್ಣ ಸೂಪರ್ ಸ್ಟಾರ್ ವೇದಿಕೆಗೆ ನಿರೂಪಕಿಯಾಗಿ ಬರುವ ಶಾಲಿನಿ ಹೆಚ್ಚು ಗಮನ ಸೆಳೆಯುವುದು ಅವರು ತೊಡುವ ಸೀರೆ.‌ ಅದಕ್ಕೆ ಮ್ಯಾಚ್ ಮಾಡಿಕೊಳ್ಳುವ ಬ್ಲೌಸ್. ಶಾಲಿನಿಗೆ ಒಂದೊಂದು ಬ್ಲೌಸ್ ರೆಡಿ ಮಾಡಿ ಕೊಡುವುದು ಮೌನೇಶ‌ನೆ. ಅದೆಲ್ಲೆಲ್ಲಿಂದ ತಲೆಗೆ ಬರುತ್ತೋ ಏನೋ, ಅದ್ಭುತ, ವಿಭಿನ್ನ, ವಿಶೇಷತೆ ಹೀಗೆ ಇರೋ ಬರೋ ಹೆಸರೆಲ್ಲ ಹೇಳುವಂತ ಬ್ಲೌಸ್‌ಗಳನ್ನೇ ರೆಡಿ ಮಾಡ್ತಾರೆ.

ಹದ್ದು ಬ್ಲೌಸ್ ತೊಟ್ಟ ಶಾಲಿನಿ ಜೊತೆಗೆ ಬ್ಲೌಸ್ ಬಗ್ಗೆ ಜನರಿಗೆ ತಿಳಿಸುವುದು ಸುಖಾ ಸುಮ್ಮನೆ ತಿಳಿಸಲ್ಲ. ಅವರ ವಿಭಿನ್ನ ಕ್ರಿಯೆಟಿವಿಟಿ ನಿಮಗೂ ಈಗಾಗಲೇ ಗೊತ್ತಿರಲೇಬೇಕು. ಈಗ ಹದ್ದಿನ ಬ್ಲೌಸ್‌ಗೂ ಒಂದು ಸ್ಪೆಷಲ್ ವಿಡಿಯೋ ಮಾಡಿದ್ದಾರೆ. ಸ್ಟಾಫ್ ಎಲ್ಲಾ ಸೇರಿ ನೀನೆ ಸಾಕಿದ ಗಿಣಿ ಎಂಬ ಹಾಡನ್ನು ಹಾಡಿದ್ದಾರೆ. ಈ ಮೂಲಕ ಶಾಲಿನಿ ಹಾಕಿರುವ ಹದ್ದಿನ ಬ್ಲೌಸ್ ಅನ್ನು ತೋರಿಸಿದ್ದಾರೆ. ಅದನ್ನು ಡಿಸೈನ್ ಮಾಡಿದ ಮೌನಿಶನತ್ತ ಶಾಲಿನಿ ಕಣ್ಣು ಮೊದಲಿನಂತೆ ಹೋಗಿದೆ. ಕೋಪ ಶಾಲಿನಿಯವರದ್ದಾದರೆ ಮುಗ್ಧತೆಯ ನೋಟ ಮೌನೀಶನದ್ದಾಗಿದೆ.

ಬ್ಲೌಸ್‌ಗೆ ಸೂಪರ್ ಕಮೆಂಟ್ಸ್

ಈ ಹದ್ದಿನ ಬ್ಲೌಸ್‌ಗೆ ಬರುತ್ತಿರುವ ಕಮೆಂಟ್‌ಗಳು ಒಂದೆರಡಲ್ಲ. ಈಗಾಗಲೇ ಹತ್ತಿರತ್ತಿರ 918 ಸಾವಿರ ಜನ ಈ ಹದ್ದಿನ ವಿಡಿಯೋವನ್ನು ನೋಡಿದ್ದಾರೆ. ಅದೇ ಥರ ಕಮೆಂಟ್‌ಗಳ ಸುರಿಮಳೆಯೂ ಸುರಿಯುತ್ತಿದೆ. ಬೆಸ್ಟ್ ಬ್ಲೌಸಸ್ ಡಿಸೈನರ್ ಅವಾರ್ಡ್ ಇದ್ದರೆ ಅದನ್ನ ಮೌನೇಶನಿಗೆ ಕೊಡಬೇಕು ಅಂತ ಒಬ್ಬರು ಹೇಳಿದರೆ, ಅದನ್ನು ತೊಟ್ಟಿರುವ ನನಗೂ ಕೊಡಬೇಕು ಎಂದು ಶಾಲಿನಿ ರಿಪ್ಲೇ ಮಾಡಿದ್ದಾರೆ. ಮೌನೀಶ ಈ ರೀತಿ ಬ್ಲೌಸ್ ಯಾರೂ ಹೊಲಿತಾರೆ. ಇಂಡಸ್ಟ್ರಿಗೆ ನೆಕ್ಸ್ಟ್ ಡಿಸೈನರ್ ನೀವೆ. ಉಪೇಂದ್ರ ಹೇಗೆ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟರೋ ಮೌನೀಶನು ಹಾಗೇ ಎಂದು ಕಮೆಂಟ್ ಹಾಕುತ್ತಿದ್ದಾರೆ.

ಬ್ಲೌಸ್ ಸಿಕ್ಕಾಪಟ್ಟೆ ಡಿಮ್ಯಾಂಡ್

ಹಾಗೇ ಈ ಹದ್ದಿನ ಬ್ಲೌಸ್‌ಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಕಮೆಂಟ್ ಬಾಕ್ಸ್‌ನಲ್ಲಿಯೇ ಒಬ್ಬರು ಈ ಬ್ಲೌಸ್ ನನಗೂ ಬೇಕು ಎಂದು ಕೇಳಿದ್ದಾರೆ. ಆದರೆ ಶಾಲಿನಿ ಅವರು, ಈ ಬ್ಲೌಸ್ ಶಾಲಿನಿಗೆ ಮಾತ್ರ ಅಂತ ಹೇಳಿದ್ದಾರೆ. ಅಂದ್ರೆ ಮೌನೇಶ ಈ ರೀತಿಯ ಬ್ಲೌಸ್ ಅನ್ನು ಯಾವತ್ತಿಗೂ ಬೇರೆಯವರಿಗೆ ಡಿಸೈನ್ ಮಾಡುವುದಿಲ್ಲ. ಇಲ್ಲಿ ಶಾಲಿನಿ ಮನರಂಜನೆಗಾಗಿ ಶಾಲಿನಿಗೆ ಮಾತ್ರ ಎಂದು ಹೇಳಿದ್ದಾರೆ. ಆದರೆ ಅದು ಸತ್ಯ ಕೂಡ. ಪ್ರೋಗ್ರಾಂಗೋಸ್ಕರ ಮಾತ್ರ ಈ ರೀತಿಯ ಬ್ಲೌಸ್ ಡಿಸೈನ್ ಮಾಡಬಹುದು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು