ಹಿಂದುತ್ವದ ಬಗ್ಗೆ ಅವಹೇಳನ ಆರೋಪ: ರಾಹುಲ್ ಗಾಂಧಿ ಮಂಗಳೂರಿನ ಫವರ್ ಫುಲ್ ಶಕ್ತಿ ದೇವತೆಗೆ ದೂರು ನೀಡಿದ ವಿಹಿಪಂ!
ಮಂಗಳೂರು, ಜುಲೈ 15: ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದುತ್ವದ ಬಗ್ಗೆ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ವಿರುದ್ಧ ದೇವರಿಗೆ ದೂರು ನೀಡಿರುವ ಪ್ರಸಂಗ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಶ್ರೀಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವರಿಗೆ ವಿಶ್ವ ಹಿಂದೂ ಪರಿಷತ್ ದೂರು ನೀಡಿದೆ.
ದೇವರ ನಿಂದನೆ, ಧರ್ಮ ವಿರೋಧಿ ಹೇಳಿಕೆ ಕೊಟ್ಟು ರಾಷ್ಟ್ರೀಯತೆಗೆ ಅವಮಾನ ಮಾಡಿದ್ದಾರೆ. ರಾಹುಲ್ ಗಾಂಧಿಗೆ ಒಳ್ಳೆ ಬುದ್ದಿಕೊಟ್ಟು, ಈ ಹೇಳಿಕೆಗೆ ಶಿಕ್ಷೆ ನೀಡುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀಕ್ಷೇತ್ರ ಪೊಳಲಿಯಲ್ಲಿ ವಿಶ್ವ ಹಿಂದೂ ಪರಿಷತ್ ಮಠ ಮಂದಿರ ಅರ್ಚಕ್ ಪುರೋಹಿತ್ ವತಿಯಿಂದ ದೇವರಿಗೆ ದೂರು ಸಲ್ಲಿಸಲಾಗಿದೆ. ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಮೂಲಕ ದೇವರಲ್ಲಿ ದೂರು ಕೊಟ್ಟು ಪ್ರಾರ್ಥನೆ ಸಲ್ಲಿಸಲಾಗಿದೆ.