ವೇಣೂರು ಗ್ರಾಮ ಪಂಚಾಯತ್: ಎರಡನೇ ಅವಧಿಯ ಅಧ್ಯಕ್ಷರಾಗಿ ಮಲ್ಲಿಕಾ ಕಾಶೀನಾಥ್, ಉಪಾಧ್ಯಕ್ಷರಾಗಿ ಉಮೇಶ್ ಕುಲಾಲ್ ನಡ್ತಿಕಲ್ಲು ಆಯ್ಕೆ
ವೇಣೂರು : ಲೋಕಸಭಾ ಚುನಾವಣೆಯಿಂದ ಬಾಕಿ ಉಳಿದಿದ್ದ ವೇಣೂರು ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮಿಸಲಾತಿಯಿಂದ ಮಲ್ಲಿಕಾ ಕಾಶೀನಾಥ್ ಹೆಗ್ಡೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲಾತಿ ಯಿಂದ ಉಮೇಶ್ ಕುಲಾಲ್ ನಡ್ತಿಕಲ್ಲು ಆಯ್ಕೆಯಾದರು. ಇಲ್ಲಿ 24 ಮಂದಿ ಚುನಾಯಿತ ಪ್ರತಿನಿಧಿಗಳಿದ್ದು, ಎಲ್ಲರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ. ಬೆಳ್ತಂಗಡಿ ತಾಪಂ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್ ಅವರು ಚುನಾವಣಾಧಿಕಾರಿಯಾಗಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಎರಡೂ ಸ್ಥಾನಕ್ಕೂ ಆಕಾಕಂಕ್ಷಿಗಳಿದ್ದರು. ಆಂತರಿಕವಾಗಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ.