ಒಂದನೇ ತರಗತಿ ಪ್ರವೇಶ: ಗರಿಷ್ಠ ವಯೋಮಿತಿ 8 ವರ್ಷಕ್ಕೆ ಏರಿಕೆ
ಬೆಂಗಳೂರು : ಮಹತ್ವದ ಬೆಳವಣಿಗೆಯಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ಇದ್ದ ಮಕ್ಕಳ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. 1ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 6 ವರ್ಷಗಳಾಗಿದ್ದು ಗರಿಷ್ಠ ವಯೋಮಿತಿಯನ್ನು 8 ವರ್ಷಕ್ಕೆ ಹೆಚ್ಚಿಸಲಾಗಿದೆ.
ಈ ನಿಯಮ 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಅನ್ವಯವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶದಲ್ಲಿ ತಿಳಿಸಿದೆ. ಇದು 1ನೇ ತಗತಿಗೆ ವಿದ್ಯಾರ್ಥಿಯನ್ನು ದಾಖಲಿಸಲು ಗರಿಷ್ಠ ವಯೋಮಿತಿಯಾಗಿದ್ದು, ಕನಿಷ್ಠ ವಯೋಮಿತಿ 6 ವರ್ಷಗಳಾಗಿದೆ. 8 ವರ್ಷ ಮೀರಿದ ಮಕ್ಕಳಿಗೆ ಇನ್ನು ಮುಂದೆ 1ನೇ ತರಗತಿಗೆ ಪ್ರವೇಶ ಸಿಗುವುದಿಲ್ಲ.