ತಲೆಯಲ್ಲಿ ಎರಡು ಸುಳಿಯಿದ್ದರೆ ಎರಡು ಮದುವೆಯಾಗುತ್ತಾರೆನ್ನುವ ಮಾತು ನಿಜನಾ?! ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತೆ?
ನಿಮ್ಮ ಮನೆಯಲ್ಲಿ ಅಥವಾ ಅಕ್ಕ ಪಕ್ಕದ ಮನೆ ಇಲ್ಲವೆ ಪರಿಚಯಸ್ಥರ ಮನೆಯಲ್ಲಿ ಯಾರಿಗಾದರು ಎರಡು ಸುಳಿ ಇರುವುದು ನೋಡಿರುತ್ತೀರಿ. ತಲೆಯಲ್ಲಿ ಎರಡು ಸುಳಿ ಅಥವಾ ಅದಕ್ಕಿಂತ ಹೆಚ್ಚಿನ ಸುಳಿ ಇರುವ ಉದಾಹರಣೆಯೂ ಇದೆ. ಈ ರೀತಿಯ ಮಕ್ಕಳನ್ನು, ಯುವಕರನ್ನೂ ನೀವು ನೋಡಿರಬಹುದು.
ಆದ್ರೆ ಸಾಮಾನ್ಯವಾಗಿ ಎಲ್ಲರಿಗೂ ಒಂದೇ ಸುಳಿ ಇರುತ್ತದೆ. ಹಲವರಿಗೆ 2ರಿಂದ ಮೂರು ನಾಲ್ಕು ಸುಳಿ ಇರುವುದು ಸಹ ನೋಡಬಹುದು. ಹಾಗಾದ್ರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರೀತಿ ಹುಟ್ಟುವಾಗಲೇ ಎರಡು ಸುಳಿ ಇದ್ದರೆ ಏನರ್ಥ? ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಗೆ ವಿವರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.
ಎರಡು ಮದುವೆಯ ಉಲ್ಲೇಖವಿಲ್ಲ
ತಲೆಯಲ್ಲಿ ಎರಡು ಸುಳಿ ಇದ್ದರೆ ಎರಡು ಮದುವೆಯಾಗುತ್ತಾರೆ ಎಂಬ ಮಾತಿದೆ. ಆದರೆ ಇದು ಜ್ಯೋತಿಷ್ಯಶಾಸ್ತ್ರದಲ್ಲಿ ಈ ರೀತಿ ಎರಡನೇ ಮದುವೆ ಕುರಿತ ಉಲ್ಲೇಖಗಳಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಎರಡು ಸುರುಳಿಯನ್ನು ಹೊಂದಿದ್ದರೆ, ಆತ ನೇರ ನೇರ ಮಾತನಾಡುವ ವ್ಯಕ್ತಿಯಾಗಿರುತ್ತಾರೆ.
ತುಂಬಾ ಬುದ್ದಿವಂತರು
ಸಾಮಾನ್ಯವಾಗಿ ಪುರುಷರ ತಲೆಯಲ್ಲಿ ಎರಡಕ್ಕಿಂತ ಹೆಚ್ಚು ಸುಳಿ ಇದ್ದರೆ ತುಂಬಾ ಬುದ್ಧಿವಂತರಂತೆ. ಅವರ ಆರೋಗ್ಯ ಉತ್ತಮ ಮಟ್ಟದಲ್ಲಿರುತ್ತದೆ. ಅವರಿಗೆ ಹಣಕಾಸಿನ ವಿಚಾರವಾಗಿಯೂ ಎಲ್ಲವೂ ಅಂದುಕೊಂಡಂತೆ ಆಗಲಿದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಈ ರೀತಿ ಎರಡಕ್ಕಿಂತ ಹೆಚ್ಚಿನ ಸುಳಿ ಹೊಂದಿರುವ ಮಂದಿ ತಮ್ಮ ಉದ್ಯೋಗದಲ್ಲಿ ಬಹಳ ಬೇಗ ಯಶಸ್ಸು ಗಳಿಸುತ್ತಾರೆ ಎನ್ನಲಾಗಿದೆ. ಜೊತೆಗೆ ಇಂತವರು ಸ್ವಂತ ಉದ್ಯಮ, ಉದ್ಯೋಗ ಮಾಡಿದರೆ ಅದರಲ್ಲಿ ಯಶಸ್ಸು ಖಚಿತವಂತೆ. ಅಲ್ಲದೆ ಯಾವುದೇ ಸಂಸ್ಥೆಯಲ್ಲಿ ಇವರಿಗೆ ಬಡ್ತಿ, ವೇತನ ಹೆಚ್ಚಳವಾಗುವುದು ಸುಲಭದ ಕೆಲಸವಂತೆ.
ದೀರ್ಘ ಆಯಸ್ಸು
ತಲೆಯಲ್ಲಿ 1ಕ್ಕಿಂತ ಹೆಚ್ಚು ಸುಳಿ ಹೊಂದಿರುವ ಮಂದಿಯ ಆಯಸ್ಸು ಹೆಚ್ಚಾಗಿರಲಿದೆ ಎನ್ನಲಾಗುತ್ತದೆ. ಅವರಿಗೆ ಅನಾರೋಗ್ಯ ಭಾದಿಸುವುದು ಕಡಿಮೆ. ಹಾಗೂ ಅವರಲ್ಲಿ ಹೆಚ್ಚು ಜೀವನ ಶಕ್ತಿ ಇರುತ್ತದೆ. ಹೀಗಾಗಿ ಬಹಳ ವರ್ಷ ಬದುಕುತ್ತಾರೆ.
ಸಾಮಾನ್ಯವಾಗಿ ಪುರುಷರ ತಲೆಯಲ್ಲಿ ಎರಡಕ್ಕಿಂತ ಹೆಚ್ಚು ಸುಳಿ ಇದ್ದರೆ ತುಂಬಾ ಬುದ್ಧಿವಂತರಂತೆ. ಅವರ ಆರೋಗ್ಯ ಉತ್ತಮ ಮಟ್ಟದಲ್ಲಿರುತ್ತದೆ. ಅವರಿಗೆ ಹಣಕಾಸಿನ ವಿಚಾರವಾಗಿಯೂ ಎಲ್ಲವೂ ಅಂದುಕೊಂಡಂತೆ ಆಗಲಿದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಸರ್ಕಾರಿ ಉದ್ಯೋಗ ಸಿಗುವ ಸಂಭವ
ತಲೆಯಲ್ಲಿ ಎರಡು ಸುಳಿ ಇರುವವರು ಬುದ್ಧಿವಂತರು ಎಂದು ನಾವು ಮೊದಲೇ ಉಲ್ಲೇಖಿಸಿದ್ದೇವೆ. ಇನ್ನೊಂದೆಡೆ ಇವರು ಹೆಚ್ಚಾಗಿ ಸರ್ಕಾರಿ ಹುದ್ದೆಗಳ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂದು ನಂಬಲಾಗಿದೆ. ಕುಟುಂಬ ವಿಚಾರದಲ್ಲೂ ಸಂತೃಪ್ತರು ಇವರು ತಮ್ಮ ಕುಟುಂಬ ಚೆನ್ನಾಗಿರಲಿ ಎಂದು ಹಗಲು ರಾತ್ರಿ ಕಷ್ಟಪಡುತ್ತಾರೆ. ಜೊತೆಗೆ ಕೌಂಟುಬಿಕ ಜೀವನದಲ್ಲಿ ಇವರಿಂದ ಸಮಸ್ಯೆ ಉದ್ಭವಿಸುವುದು ಕಡಿಮೆ. ಅಲ್ಲದೆ ಇವರ ಜೀವನ ಸಂತೋಷದಿಂದ ಕೂಡಿರಲಿದೆಯಂತೆ.
ಸದಾ ಕಾಲ ಚಟುವಟಿಕೆಯಿಂದ ಕೂಡಿರುತ್ತಾರೆ. ಹೀಗಾಗಿ ಮನೆ ಮಂದಿಗೆ ಇವರಿಂದ ಅನುಕೂಲಗಳು ಹೆಚ್ಚಂತೆ. ಮುಂಗೋಪಿಗಳು ಎರಡು ಸುಳಿ ಹೊಂದಿರುವ ಮಂದಿ ಸ್ವಲ್ಪ ಮುಂಗೋಪಿಗಳಂತೆ. ಆದರೆ ಸುಖಾ ಸುಮ್ಮನೆ ಯಾವುದೇ ಸಮಸ್ಯೆಗಳ ಮೈ ಮೇಲೆ ಎಳೆದುಕೊಳ್ಳುವುದಿಲ್ಲ. ಆದರೆ ಕೋಪವನ್ನು ನಿಯಂತ್ರಿಸುವುದು ಕಷ್ಟಕರವಾಗಲಿದೆ. ಇವರಿಗೆ ಯಾವಾಗಲೂ ಒಬ್ಬರೇ ಇರುವುದು, ಕೆಲಸ ಮಾಡುವುದು ನೆಮ್ಮದಿ ನೀಡಲಿದೆ. ಹೀಗಾಗಿ ಅವರು ಕೋಪಗೊಂಡಾಗ ನಿಯಂತ್ರಿಸುವುದು ಕಷ್ಟವಂತೆ.
ಆದರೆ ಈ ರೀತಿ ಎರಡಕ್ಕಿಂತ ಹೆಚ್ಚು ಸುಳಿ ಇರಲು ಜೆನೆಟಿಕ್ ಕಾರಣವಂತೆ. ಜೀನ್ಸ್‌ನಲ್ಲಿ ಆಗುವ ಬದಲಾವಣೆ ಈ ಎರಡು ಸುಳಿಗೆ ಕಾರಣವಾಗುತ್ತದೆ. ವಂಶದಲ್ಲಿ ಯಾರಿಗಾದರು ಈ ರೀತಿ ಎರಡು ಸುಳಿ ಇದ್ದರೆ ಮುಂದೆ ಕುಟುಂಬದಲ್ಲಿಯೂ ಈ ರೀತಿ ಸುಳಿಗಳು ಕಂಡುಬರುತ್ತದೆ. ವಿಶ್ವದ ಜನಸಂಖ್ಯೆಯಲ್ಲಿ ಶೇ 5ರಷ್ಟು ಮಂದಿ ತಲೆಯಲ್ಲಿ ಎರಡು ಸುಳಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.