ಆರೋಪಪಟ್ಟಿ ಸಲ್ಲಿಕೆ ನಂತರ ವಿಚಾರಣಾ ಪೂರ್ವ ಶಿಕ್ಷೆ ಸಲ್ಲದು- ಹೈಕೋರ್ಟ್
D
ಬೆಂಗಳೂರು ಜುಲೈ.12: ಅಪರಾಧ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ ನಂತರವೂ ಆರೋಪಿಯನ್ನು ಬಂಧನದಲ್ಲಿಟ್ಟು ವಿಚಾರಣೆ ಮುಂದುವರಿಸುವುದು ವಿಚಾರಣಾ ಪೂರ್ವ ಶಿಕ್ಷೆ ಆಗುತ್ತದೆ. ಹೀಗೆಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜೊತೆಗೆ, ಅರ್ಜಿದಾರನಿಗೆ ಷರತ್ತು ಬದ್ಧ ಮಂಜೂರು ಮಾಡಿ ಆದೇಶಿಸಿದೆ.
ಜೋಡಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿಕ್ಕಮಗಳೂರಿನ ಆರೋಪಿ ಎಂ.ಬಿ.ಸಂತೋಷ್, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.