December 24, 2024

ಮಕ್ಕಳು..ಪತಿ..ಹುಟ್ಟೂರು: ಅಪರ್ಣಾ ವೈಯಕ್ತಿಕ ಜೀವನದ ಒಂದಿಷ್ಟು ಮಾಹಿತಿ

0

ಬೆಂಗಳೂರು, ಜುಲೈ 12: ಅಚ್ಚ ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರಾದೃವಶಾತ್‌ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಜುಲೈ 11ರಂದು ನಿಧನರಾಗಿದ್ದಾರೆ.

ಕನ್ನಡಿಗರ ಮೆಚ್ಚಿನ ನಿರೂಪಕಿಯಾಗಿ, ನಟಿಯಾಗಿದ್ದ ಅಪರ್ಣಾ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅನೇಕರಲ್ಲಿತ್ತು. ಆದರೆ ಈ ಬಗ್ಗೆ ಹೆಚ್ಚಾಗಿ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ನಿರೂಪಣೆ, ನಟನೆ ಮನೋರಂಜನಾ ಕ್ಷೇತ್ರಕ್ಕೆ ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಡಿಗಿಟ್ಟ ಅಪರ್ಣಾ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.

ಅಪರ್ಣಾ ಅವರ ಪೂರ್ಣ ಹೆಸರು ಅಪರ್ಣಾ ವಸ್ತಾರೆ. ಅಚ್ಚ ಕನ್ನಡದ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಅಪರ್ಣಾ ಅವರು ಸಿನಿಮಾ ಪತ್ರಕರ್ತರೊಬ್ಬರ ಪುತ್ರಿ. ಇವರ ಪತಿ ನಾಗರಾಜ್ ವಸ್ತಾರೆ. ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದ್ದ ಅಪರ್ಣಾ, 1989ರಲ್ಲಿ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟರು. ಬಳಿಕ 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್​ ಅವರ ಮಸಣದ ಹೂವು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.

ನಿರೂಪಣೆ ಹಾಗೂ ಕನ್ನಡ ಚಿತ್ರರಂಗ, ಕಿರುತೆರೆಯ ನಟನೆಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಅಪರ್ಣಾ ಅವರದು ಬಹಳ ಚಿಕ್ಕದಾದ ಕುಟುಂಬ. ಅಪರ್ಣಾ ಅವರಿಗೆ ಪತಿ ನಾಗರಾಜ್ ವಸ್ತಾರೆ ಅವರೇ ಪ್ರಪಂಚವಾಗಿದ್ದರು. ಯಾಕೆಂದರೆ ನಾಗರಾಜ್ ವಸ್ತಾರೆ ಹಾಗೂ ಅಪರ್ಣಾ ದಂಪತಿಗೆ ಮಕ್ಕಳಿರಲಿಲ್ಲ. ತಮ್ಮ ಈ ಖಾಸಗಿ ವಿಚಾರದ ಬಗ್ಗೆ ಅಪರ್ಣಾ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅಂದ ಹಾಗೆ ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಅವರು ವಾಸ್ತುಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ಅಪರ್ಣಾ ಅವರ ಅಗಲಿಕೆ ಬಗ್ಗೆ ಪತಿ ನಾಗರಾಜ ವಸ್ತಾರೆ ಮಾತನಾಡಿದ್ದಾರೆ. ಅಪರ್ಣಾ ಇಹಲೋಕದ ವ್ಯಾಪಾರವನ್ನ ತ್ಯಜಿಸಿ ಸ್ವರ್ಗಸ್ತಳಾಗಿದ್ದಾಳೆ. ಕಳೆದ 2 ವರ್ಷಗಳಿಂದ ನಾನು ಮತ್ತು ಅವಳು ಅವಳ 4ನೇ ಹಂತದಲ್ಲಿದ್ದ ಶ್ವಾಸಕೋಶದ ಕ್ಯಾನ್ಸರ್ ಅನ್ನು ಸೆಣಸುತ್ತಾ ಇದ್ದೆವು. ಈ ಹೋರಾಟದಲ್ಲಿ ನಾವಿಬ್ಬರು ಸೋತಿದ್ದೇವೆ. ಅತ್ಯಂತ ವಿಷಾಧದಿಂದ ಈ ಮಾತುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಅಪರ್ಣಾಳಿಗೆ ಬರುವ ಅಕ್ಟೋಬರ್‌ಗೆ 58 ವರ್ಷ ತುಂಬುತ್ತಿತ್ತು. ಎಲ್ಲರ ಪ್ರೀತಿ, ಸಹಕಾರ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು