December 24, 2024

‘ಪವಿತ್ರಾ ಗೌಡಳಿಗೆ ವಿವಾಹವಾಗಿ ಮಗಳಿದ್ದಾಳೆ, ದರ್ಶನ್ ಪತ್ನಿ ಎಂದು ಉಲ್ಲೆಖಿಸಬೇಡಿ’ ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮಿ ಬರೆದ ಪತ್ರದಲ್ಲಿ ಏನಿದೆ?

0

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ( Chitradurga Renukaswamy murder case) ಬಂಧಿತಳಾಗಿರುವ ಪವಿತ್ರಾ ಗೌಡಳನ್ನು(Pavitra Gowda) ದರ್ಶನ್(Darshan) ಪತ್ನಿ ಎಂದು ಉಲ್ಲೇಖಿಸದಂತೆ ನಗರ ಪೊಲೀಸ್‌ ಆಯುಕ್ತರಿಗೆ(City police commissioner) ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ(Vijayalakshmi) ಪತ್ರ ಬರೆದಿದ್ದಾರೆ.

 

2003ರಲ್ಲಿ ನಾನು ಹಾಗೂ ದರ್ಶನ್ ವಿವಾಹವಾಗಿದ್ದು, ನಮಗೆ ಓರ್ವ ಮಗನಿದ್ದಾನೆ. ಆದರೆ ಸಂಜಯ್ ಸಿಂಗ್ ಎಂಬುವರ ಜತೆ ಪವಿತ್ರಾಗೌಡಳಿಗೆ ಮದುವೆಯಾಗಿದ್ದು, ಅವರಿಗೂ ಒಬ್ಬ ಮಗಳಿದ್ದಾಳೆ. ಆದರೆ ನೀವು (ಆಯುಕ್ತರು) ಪತ್ರಿಕಾಗೋಷ್ಠಿಯಲ್ಲಿ ದರ್ಶನ್‌ರವರ ಪತ್ನಿ ಪವಿತ್ರಾಗೌಡ ಎಂದು ಹೇಳಿದ್ದೀರಿ. ಅದೇ ರೀತಿ ಒಮ್ಮೆ ಗೃಹಸಚಿವರು ಉಚ್ಚರಿಸಿದ್ದಾರೆ. ಹೀಗಾಗಿ ಪೊಲೀಸ್ ದಾಖಲೆಗಳಲ್ಲಿ ಪವಿತ್ರಾ ಗೌಡಳನ್ನು ದರ್ಶನ್‌ರವರ ಪತ್ನಿ ಎಂದು ಉಲ್ಲೇಖಿಸದಂತೆ ವಿಜಯಲಕ್ಷ್ಮೀ ಕೋರಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು