ಬೆಳ್ತಂಗಡಿ ತಾಲೂಕಿನ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಆದೇಶ
ಬೆಳ್ತಂಗಡಿ: ವಿಪರೀತ ಮಳೆಯ ಹಿನ್ನಲೆಯಲ್ಲಿ ಜಲಪಾತಗಳು ಅಪಾಯಕಾರಿ ಮಟ್ಟದಲ್ಲಿ ಧುಮ್ಮಿಕ್ಕುತ್ತಿರುವ ಕಾರಣ
ತಾಲೂಕಿನಲ್ಲಿರುವ ಕಾರಣ ತಾಲೂಕಿನ ಎರ್ಮಾಯಿ, ಕಡಮಗುಂಡಿ, ಬಂಡಾಜೆ, ಬೊಳ್ಳೆ, ಎಳನೀರು ಮೊದಲಾದ ಜಲಪಾತಗಳಿಗೆ ಸಾರ್ವಜನಿಕರಿಗೆ ಮುಂದಿನ ಆದೇಶದ ತನಕ ಪ್ರವೇಶ ನಿರ್ಬಂಧ ಹೇರಲಾಗಿದೆ.
ಗಡಾಯಿಕಲ್ಲು ಪ್ರದೇಶಕ್ಕೂ ಚಾರಣ ನಿರ್ಬಂಧ ವಿಧಿಸಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ಭಾಗದ ಆರ್ ಎಫ್ ಒ ಸ್ವಾತಿ ತಿಳಿಸಿದ್ದಾರೆ.