December 24, 2024

ನಾಳೆ ಶಾಲೆ & ಕಾಲೇಜಿಗೆ ಸಾಮೂಹಿಕ ರಜೆ! ದಿಢೀರ್ ರಜೆ ಘೋಷಣೆ ಯಾಕಾಗಿ?

0

ಬೆಂಗಳೂರು : ಶಾಲೆ & ಕಾಲೇಜುಗಳು ನಾಳೆ ಬಂದ್ ಆಗಲಿವೆ, ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಇದೀಗ ಹೊರಬಿದ್ದಿದೆ. ಹಾಗಾದರೆ ಯಾವ ಯಾವ ಜಿಲ್ಲೆಗಳಲ್ಲಿ ಶಾಲೆ & ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ? ಅಷ್ಟಕ್ಕೂ ಹೀಗೆ ದಿಢೀರ್ ಶಾಲೆ & ಕಾಲೇಜು ಬಂದ್ ಮಾಡುವ ಉದ್ದೇಶವಾದ್ರು ಯಾರದ್ದು? ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

 

ಶೈಕ್ಷಣಿಕ ಗುಣಮಟ್ಟ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ದೊಡ್ಡ ಹೆಸರು ಪಡೆದಿದೆ. ಹೀಗಾಗಿ ಕರ್ನಾಟಕದ ಶಿಕ್ಷಣ ವ್ಯವಸ್ಥೆ ಇಡೀ ದೇಶದ ಗಮನವನ್ನ ಸೆಳೆದಿದೆ. ಯಾಕಂದ್ರೆ ಕರ್ನಾಟಕದಲ್ಲಿ ಅದ್ರಲ್ಲೂ ನಮ್ಮ ಬೆಂಗಳೂರಲ್ಲಿ ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳು ಕೂಡ ಓದುತ್ತಿದ್ದಾರೆ. ಈ ಕಾರಣಕ್ಕೆ ದೊಡ್ಡ ದೊಡ್ಡ ಶೈಕ್ಷಣಿಕ ಸಂಸ್ಥೆಗಳು ನಮ್ಮ ಕರ್ನಾಟದಲ್ಲಿ ನೆಲೆಯೂರಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಶಿಕ್ಷಣವನ್ನು ಜಗತ್ತೇ ಕೊಂಡಾಡುತ್ತದೆ. ಹೀಗಿದ್ದಾಗ ಲಕ್ಷಾಂತರ ಯುವಕ & ಯುವತಿಯರು ಹಾಗೂ ಮಕ್ಕಳು ನಾಳೆ ಶಾಲೆ & ಕಾಲೇಜಿಗೆ ಹೋಗದೇ ಇರುವುದೇ ಬೆಸ್ಟ್, ಯಾಕಂದ್ರೆ ನಾಳೆ ಶಾಲೆ & ಕಾಲೇಜಿಗೆ ರಜೆ ಘೋಷಿಸಲಾಗಿದೆ.

 

ಶಾಲೆ & ಕಾಲೇಜು ರಜೆ ಯಾಕೆ?
ಅಂದಹಾಗೆ ನೀಟ್ & ನೆಟ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಇಡೀ ದೇಶದಲ್ಲಿ ಇದೀಗ ಬಿರುಗಾಳಿ ಎಬ್ಬಿಸಿದೆ. ಅದರಲ್ಲೂ ಈ ಬಗ್ಗೆ ಕಠಿಣ ತನಿಖೆಗೆ ಆಗ್ರಹಿಸಿ ವಿರೋಧ ಪಕ್ಷಗಳಿಂದ ಹೋರಾಟ ಕೂಡ ನಡೆದಿದೆ. ಹೀಗಿದ್ದಾಗಲೇ, ನೀಟ್ ಮತ್ತು ನೆಟ್ ಪರೀಕ್ಷೆಗಳ ಪತ್ರಿಕೆ ಸೋರಿಕೆ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ಜುಲೈ 4 ರಂದು, ಅಂದರೆ ನಾಳೆಗೆ ಇಡೀ ಭಾರತದಲ್ಲಿ ಬಂದ್‌ಗೆ ಕರೆ ನೀಡಿವೆ. ಇದೇ ಕಾರಣಕ್ಕೆ, ನಾಳೆ ಶಾಲಾ-ಕಾಲೇಜಿಗೆ ರಜೆ ಇರಲಿದೆ.

 

ವಿದ್ಯಾರ್ಥಿಗಳಿಗೆ ರಜೆ ಮೇಲೆ ರಜೆ!
ಒಟ್ನಲ್ಲಿ 2024-25ರ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಓದುವುದರಲ್ಲಿ ಬ್ಯುಸಿ ಆಗಿದ್ದಾರೆ. ಹೀಗೆ ಶಾಲೆ & ಪುಸ್ತಕ ಅಂತಾ ಇರುವ ಮಕ್ಕಳಿಗೆ ರಜೆ ಮೇಲೆ ರಜೆ ಸಿಗುತ್ತಿರುವುದು ಬಂಪರ್ ಸಿಕ್ಕ ರೀತಿ ಆಗಿದೆ. ಇದೇ ತಿಂಗಳಲ್ಲಿ ಅಂದ್ರೆ ಜುಲೈ ತಿಂಗಳಲ್ಲಿ ಸುಮಾರು 7 ದಿನಗಳ ಕಾಲ ರಜೆ ಸಿಗಲಿದೆ. ಮತ್ತೊಂದು ಕಡೆ ಮಳೆ ಹೆಚ್ಚಾಗಿ ಬೀಳುತ್ತಿರುವ ಕರಾವಳಿ ಜಿಲ್ಲೆಗಳು & ಮಲೆನಾಡು ಜಿಲ್ಲೆಯ ಹಲವು ತಾಲೂಕುಗಳಲ್ಲಿ ಶಾಲೆ & ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಹೀಗಿದ್ರೂ ಇದೀಗ ಮತ್ತೆ ನಾಳೆ ದಿಢೀರ್ ಬಂದ್‌ಗೆ ಕರೆ ನೀಡಲಾಗಿದ್ದು, ಮಕ್ಕಳಿಗೆ ರಜೆ ಸಿಗುವುದು ಪಕ್ಕಾ ಆಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು