ಮದುವೆಯಾದ ನವಜೋಡಿಗೆ ಈ ವಿಚಾರ ತಿಳಿದಿರಲೇಬೇಕಂತೆ..!
ಮದುವೆ ಅನ್ನೋದು ಜನುಮ ಜನುಮಗಳ ಅನುಬಂಧ. ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಒಮ್ಮೆ ಮದುವೆಯಾದವರು ಕೊನೆ ಉಸಿರು ಇರುವರೆಗೂ ಒಟ್ಟಿಗೆ ಬದುಕಬೇಕು ಎಂಬ ಆಸೆಯಿಂದಿರುತ್ತಾರೆ, ಆದರೆ ಕೆಲವೊಮ್ಮೆ ಅರ್ಧದಲ್ಲಿಯೇ ಕೊನೆಯಾಗುವುದನ್ನು ಸಹ ನಾವು ನೋಡಿದ್ದೇವೆ.
ಮದುವೆಯು ಜೀವನದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ, ಇದು ಅನನ್ಯ ಅನುಭವಗಳು, ಸವಾಲುಗಳು ಮತ್ತು ಬೆಳವಣಿಗೆಯ ಅವಕಾಶಗಳಿಂದ ತುಂಬಿದೆ. ನವವಿವಾಹಿತರಲ್ಲಿ ಹಲವು ರೀತಿಯ ಭಯ ನಾವು ನೋಡಬಹುದು. ಮದುವೆಯಾದ ಹೊಸತರಲ್ಲಿ ಸ್ವಲ್ಪ ದಿನಗಳ ಕಾಲ ಅವರಲ್ಲಿ ಹೊಂದಾಣಿಕೆಯ ಸಮಸ್ಯೆಯಿಂದ ಹಿಡಿದು ಯಾರಲ್ಲೂ ಹೇಳಿಕೊಳ್ಳಲಾಗದ ಸಮಸ್ಯೆ ಎದುರಾಗಬಹುದು.
ಆದರೆ ಮದುವೆಯಾದ ಹೊಸ ಜೋಡಿ ಈ ಅಂಶಗಳ ಕುರಿತು ಅಥವಾ ಈ ವಿಚಾರಗಳ ತಿಳಿದುಕೊಳ್ಳುವುದು ಉತ್ತಮವಂತೆ. ಹಾಗಾದರೆ ಮಾತ್ರ ಸಂಬಂಧ ಅನ್ನೋದು ಗಟ್ಟಿಯಾಗಿ ಕೊನೆಯವರೆಗೂ ನಿಲ್ಲುತ್ತದೆ. ಹಾಗಾದ್ರೆ ಯುವ ಜೋಡಿ ಯಾವ ಯಾವ ವಿಚಾರವಾಗಿ ಹೆಚ್ಚು ಗಮನ ಕೊಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಸಂಗಾತಿ ಜೊತೆ ಮಾತುಕತೆ
ಮದುವೆಯಾದ ಜೋಡಿ ಮೊದಲ ಕೆಲವು ದಿನಗಳ ಕಾಲ ಒಬ್ಬರನೊಬ್ಬರ ಅರಿತುಕೊಳ್ಳುವುದು ಅವರ ಕುರಿತು ತಿಳಿದುಕೊಳ್ಳುವುದು ಉತ್ತಮ. ಇದಕ್ಕಾಗಿ ಇಬ್ಬರು ಸಹ ಪರಸ್ಪರ ತಮ್ಮ ಕುರಿತು ಆದಷ್ಟು ಹಂಚಿಕೊಳ್ಳಬೇಕಾಗುತ್ತದೆ. ಅದರಲ್ಲೂ ಮದಿವೆಯಾದ ಕೆಲವು ದಿನಗಳ ಒಳಗೆ ನೀವೆಷ್ಟು ಸಮಯ ಒಟ್ಟಿಗೆ ಕಳೆಯುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಅಗತ್ಯಗಳನ್ನು ಬಹಿರಂಗವಾಗಿ ಮತ್ತು ಗೌರವದಿಂದ ವ್ಯಕ್ತಪಡಿಸುವುದನ್ನು ಒಳಗೊಂಡಿರುತ್ತದೆ.
ನಿಮ್ಮ ಗುರಿಗಳ ಬಗ್ಗೆ ಇಬ್ಬರಿಗೂ ಅರಿವಿರಲಿ
ಹೊಸದಾಗಿ ಮದುವೆಯಾಗಿದೆ ಎಂಬ ಕಾರಣಕ್ಕೆ ನಿಮ್ಮ ಮುಂದಿನ ಗುರಿಗಳ ಬಗ್ಗೆ ಆಕೆ ಅಥವಾ ಆತನೊಂದಿಗೆ ಹಂಚಿಕೊಳ್ಳಲು ಹಿಂಜರಿಯಬಾರದಂತೆ. ನಿಮ್ಮ ಮುಂದಿನ ಗುರಿ ಏನು? ಏನು ಮಾಡಬೇಕು ಅಂದುಕೊಂಡಿದ್ದೀರಿ? ಯಾವ ದಾರಿಯತ್ತ ಸಾಗಬೇಕು. ಈ ಗುರಿ ತಲುಪಲು ಯಾರ ಪಾಲು ಎಷ್ಟು ಹೀಗೆ ಎಲ್ಲಾ ವಿಚಾರಗಳ ಚರ್ಚೆ ಮಾಡಬೇಕಂತೆ. ಸಂಬಂಧಿಕರು-ಕುಟುಂಬ, ಸ್ನೇಹಿತರ ಮಾಹಿತಿ ಹೊಸದಾಗಿ ಮದುವೆಯಾದಾಗ ನಿಮ್ಮ ಕುಟುಂಬ, ಆವರ ಕುಟುಂಬ ಸಂಬಂಧಿಕರು ಅವರ ನಡುವಿನ ಮಾತುಕೆಗೆ ಅವರ ಜೊತೆಗೆ ಅನ್ಯೋನ್ಯತೆ ಹೇಗಿದೆ, ಅವರ ಜೀವನ ಹೇಗಿದೆ ಎಂಬ ಕುರಿತು ಎಲ್ಲಾ ಮಾಹಿತಿ ಹಂಚಿಕೊಳ್ಳುವುದು ಉತ್ತಮವಂತೆ. ಅಲ್ಲದೆ ಯಾವ ಕುಟುಂಬದಲ್ಲಿ ಯಾವ ಹಿರಿಯರಿದ್ದಾರೆ, ನಿಮ್ಮ ಕುಟುಂಬದ ಬೆಳವಣಿಗೆಯಲ್ಲಿ ಯಾರ ಪಾತ್ರ ಮುಖ್ಯವಾಗಿದೆ ಎಂಬ ಕುರಿತಂತೆ ಮುಕ್ತ ಮಾತುಕತೆ ನಡೆಸಬೇಕಂತೆ.
ಆಕೆ ಅಥವಾ ಆತನ ಮದುವೆಯಾದ ಪ್ರಸಂಗ
ಹೊಸದಾಗಿ ಮದುವೆಯಾದಾಗ ಮಾತನಾಡಲು ಏನು ಇರುವುದಿಲ್ಲ ಎಂಬುದು ಎಲ್ಲರ ದೂರಾಗಿರುತ್ತದೆ. ಆದ್ರೆ ನೀವು ಆತ ಅಥವಾ ಆಕೆಯನ್ನು ಮದುವೆಯಾಗಲು ನಿಶ್ಚಯಿಸಿದ್ದು ಏಕೆ ಎಂಬ ಕುರಿತು ಸಹ ಹಂಚಿಕೊಳ್ಳಬೇಕಂತೆ. ಇದೆಲ್ಲಾ ಮದುವೆಯಾದ ಆರಂಭದ ದಿನದಲ್ಲೇ ಮಾತುಕತೆಗೆ ಸೂಕ್ತವಾದ ವಿಚಾರಗಳಂತೆ.
ಆಕೆ/ಆತನೊಂದಿಗೆ ಸುತ್ತಾಟ
ಮದುವೆಯಾದ ಆರಂಭದಲ್ಲಿ ಎಲ್ಲಾ ಜೋಡಿಗಳು ಇದನ್ನು ಮಾಡುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಂತೆ. ದೇವಸ್ಥಾನ ಸಣ್ಣಪುಟ್ಟ ಪ್ರವಾಸಿ ತಾಣಕ್ಕೆ ಹೋಗುವುದು ಉತ್ತಮವಂತೆ, ಈ ವೇಳೆ ಆಕೆ ಅಥವಾ ಆತನ ಇಷ್ಟಗಳೇನು? ಒಬ್ಬರನೊಬ್ಬರು ಅರಿತುಕೊಳ್ಳಲು ಸಹಾಯವಾಗುತ್ತದೆ. ಆದರೆ ಕೆಲವು ಜೋಡಿ ಮದುವೆಯಾದ ಹೊಸತು ಎಂದು ಓಡಾಡುವುಲ್ಲ. ಜೊತೆಗೆ ಕೆಲಸದ ಒತ್ತಡದಲ್ಲಿ ಇದೆಲ್ಲವನ್ನೂ ಬಿಟ್ಟು ನಗರಕ್ಕೆ ಹೋಗುವುದು, ಆಫಿಸ್ ಕೆಲಸಕ್ಕೆ ಹೋಗುವುದು, ಇಲ್ಲದೆ ಮನೆಯಲ್ಲೇ ಇರುವುದು ನಡೆಯುತ್ತದೆ. ಇದು ಒಂದಲ್ಲಾ ಒಂದು ದಿನ ಇಬ್ಬರ ನಡುವಿನ ಬಿರುಕಿಗೂ ಕಾರಣವಾಗಬಹುದಂತೆ.