Relationship Tips : ಮದುವೆಯಾದ ಹೆಣ್ಮಕ್ಳಳು ಈ ವಿಚಾರಗಳನ್ನು ಅಪ್ಪಿತಪ್ಪಿಯೂ ತಾಯಿಯ ಬಳಿ ಹಂಚಿಕೊಳ್ಳಬಾರದು! ಯಾಕೆ ಗೊತ್ತಾ?
ಹೆಣ್ಣು ಮಕ್ಕಳು ಸಹಜವಾಗಿ ವೈಯುಕ್ತಿಕ ವಿಚಾರಗಳನ್ನು ಹೇಳಿಕೊಳ್ಳುವುದೇ ಅಮ್ಮನ ಬಳಿ. ಬಾಲ್ಯದಲ್ಲಿ ನಿಮ್ಮ ತಾಯಿಗೆ ಎಲ್ಲವನ್ನೂ ಹೇಳುವ ಅಭ್ಯಾಸವಿರಬಹುದು, ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಎಲ್ಲವನ್ನು ಹೇಳಿಕೊಳ್ಳುವುದು ಒಳ್ಳೆಯದಲ್ಲ ಮತ್ತು ಅನಿವಾರ್ಯವಲ್ಲ. ಹೀಗಾಗಿ ಆ ಅಭ್ಯಾಸವಿದ್ದರೆ ಅದನ್ನು ತಕ್ಷಣವೇ ಬದಲಾಯಿಸಿಕೊಳ್ಳುವುದು ಒಳ್ಳೆಯದು. ಆದರೆ ಈ ಕೆಲವು ವಿಚಾರಗಳನ್ನು ಅಪ್ಪಿತಪ್ಪಿಯೂ ತಾಯಿಯ ಬಳಿ ಹೇಳಿಕೊಳ್ಳುವ ಮುನ್ನ ಸಾವಿರ ಸಲ ಯೋಚಿಸಬೇಕಂತೆ.
ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ಬಳಿಕವಷ್ಟೇ ತನ್ನ ತವರು ಮನೆಯ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ತಾಯಿಯ ಮೇಲೆ ಪ್ರೀತಿ ಹೆಚ್ಚಾಗುವುದಲ್ಲದೆ, ತಂದೆಯ ಬಳಿ ಹಂಚಿಕೊಳ್ಳಲು ಸಾಧ್ಯವಾಗದ ಅದೆಷ್ಟೋ ಸಂಗತಿಗಳನ್ನು ಅಮ್ಮನೊಂದಿಗೆ ಹೇಳಿಕೊಳ್ಳುತ್ತಾರೆ. ಒಬ್ಬ ಹೆಣ್ಣು ತನ್ನ ಸುಖ, ದುಃಖ ಸಂತೋಷವನ್ನು ತಾಯಿಯೊಂದಿಗೆ ಹೇಳಿಕೊಳ್ಳುವ ಸ್ವಾತಂತ್ರವನ್ನು ಪಡೆದುಕೊಂಡಿದ್ದಾಳೆ. ಆದರೆ ಮದುವೆ ಹೆಣ್ಣು ತನ್ನ ತಾಯಿಯ ಬಳಿಕ ಹಂಚಿಕೊಳ್ಳಬಾರದ ಕೆಲವು ವಿಷಯಗಳಿವೆ.
1. ಎಲ್ಲವನ್ನು ಹೇಳಿಕೊಳ್ಳುವುದು ಅನಿವಾರ್ಯವಲ್ಲ:
ಮದುವೆಯಾದ ಆರಂಭದ ದಿನಗಳಲ್ಲಿ ಪ್ರತಿಯೊಬ್ಬ ತಾಯಿಗೂ ‘ನನ್ನ ಮಗಳು ಸುಖವಾಗಿದ್ದಾಳಾ?’ ಎನ್ನುವುದಿರುತ್ತದೆ. ಒಂದು ವೇಳೆ ಈ ಬಗ್ಗೆ ನಿಮ್ಮ ತಾಯಿ ಕೇಳಿದರೆ, ಖುಷಿಯಾಗಿದ್ದೀರಿ ಎಂದು ಹೇಳುವುದು ಒಳ್ಳೆಯದು. ಇಲ್ಲದಿದ್ದರೆ ಆಕೆಯ ಮನಸ್ಸಿಗೂ ನೋವಾಗಬಹುದು. ಅತ್ತೆಯ ಮನೆಯಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತ ಹೋದರೆ ನಿಮ್ಮ ತಲೆಯಲ್ಲಿ ಮತ್ತು ನಿಮ್ಮ ತಾಯಿ ಮನೆಯ ಸದಸ್ಯರುಗಳಲ್ಲಿ ಅನುಮಾನದ ಬೀಜ ಬಿತ್ತುವ ಸಾಧ್ಯತೆಯಿದೆ.
2. ಗಂಡನೊಂದಿಗೆ ಜಗಳವಾದರೆ ಆ ವಿಷಯ ಗೌಪ್ಯವಾಗಿರಲಿ :
ಜಗತ್ತಿನಲ್ಲಿ ಜಗಳವಿಲ್ಲದ ಯಾವುದೇ ದಂಪತಿಗಳು ಇರುವುದಿಲ್ಲ. ಆದರೆ ಈ ಬಗ್ಗೆ ನಿಮ್ಮ ತಾಯಿಗೆ ಹೇಳಬೇಕೇ? ಎನ್ನುವುದರ ಬಗ್ಗೆ ನೀವೇ ಯೋಚಿಸಿ ನೋಡಿ. ಸಣ್ಣಪುಟ್ಟ ವಿಚಾರಕ್ಕೆ ಜಗಳವಾದರೆ ತಾಯಿಯ ಬಳಿ ಹಂಚಿಕೊಳ್ಳಬೇಡಿ.
ಗಂಡ ಪ್ರೀತಿ ತೋರಿಸಿಯೂ ಕೆಲವೊಂದು ಸಲ ಜಗಳ ಮಾಡುತ್ತಿದ್ದರೆ ನೀವು ಪ್ರೀತಿ ತೋರಿಸಿ, ಜಗಳಕ್ಕೆ ನಿಮ್ಮೊಳಗೇ ಪರಿಹಾರ ಕಂಡುಕೊಳ್ಳಿ.
ಜಗಳವು ತುಂಬಾ ಗಂಭೀರವಾಗಿದ್ದರೆ, ಗಂಡನ ಮನೆಯಲ್ಲಿ ನಿಮಗೆ ತೀರಾ ಸಮಸ್ಯೆಗಳಾಗುತ್ತಿದ್ದರೆ ಮಾತ್ರ ನಿಮ್ಮ ಅಮ್ಮನ ಬಳಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳಿ.
ಅತ್ತೆಯ ಕುರಿತು ಮಾತನಾಡಬೇಡಿ :
ನಿಮ್ಮ ಅತ್ತೆ ನಿಮಗೆ ಏನು ಹೇಳಿದರು, ಏನು ಮಾಡಿದರು ಈ ಬಗ್ಗೆ ತಾಯಿಯ ಬಳಿ ಹೇಳಿಕೊಳ್ಳುವುದು ಸರಿಯಲ್ಲ. ನೀವು ನಿಮ್ಮ ಅತ್ತೆಯೊಂದಿಗೆ ಇರುವ ಕಾರಣ, ಅವರು ಹೇಗೆ ಎನ್ನುವ ನಿಮಗೆ ಸ್ಪಷ್ಟ ಚಿತ್ರಣವಿರುತ್ತದೆ. ಆದರೆ ನಿಮ್ಮ ತಾಯಿಯೂ ಅತ್ತೆಯ ನಡವಳಿಕೆ ಹಾಗೂ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು. ಇದು ಅತ್ತೆಯ ಹಾಗೂ ನಿಮ್ಮ, ನಿಮ್ಮ ಮನೆಯವರ ಸಂಬಂಧದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಬಹುದು.
4. ಗಾಸಿಫ್ ವಿಚಾರಗಳನ್ನು ಮಾತನಾಡಲೇಬೇಡಿ :
ನಿಮ್ಮ ಬಳಿ ಅತ್ತೆ ಮನೆಯ ಸಂಬಂಧಿಕರು, ಇನ್ನಿತ್ತರ ಸದಸ್ಯರ ವಿಚಾರಗಳನ್ನು ಮಾತನಾಡಲು ಬಂದರೆ ಆದಷ್ಟು ಆ ವಿಚಾರಗಳಿಂದ ದೂರವಿರುವುದು ಹಿತಕರ. ನಿಮ್ಮ ತಾಯಿಯೊಂದಿಗೆ ಗಂಡನ ಮನೆಯ ಗಾಸಿಫ್ ವಿಚಾರಗಳನ್ನು ಹಂಚಿಕೊಳ್ಳಬೇಡಿ.
5. ಕುಟುಂಬದ ರಹಸ್ಯಗಳ ಬಗ್ಗೆ ಹೇಳಬೇಡಿ :
ಅನೇಕ ಕುಟುಂಬಗಳು ತಮ್ಮದೇ ಆದ ರಹಸ್ಯಗಳನ್ನು ಹೊಂದಿರುತ್ತದೆ. ಸೊಸೆಯಾದ ನೀವು ಕೂಡ ಆ ಕುಟುಂಬದ ಭಾಗವಾಗಿರುವುದರಿಂದ, ಅನಿವಾರ್ಯವಲ್ಲದ ವಿಚಾರಗಳನ್ನು ನಿಮ್ಮ ತಾಯಿಗೆ ಹೇಳದಿರಲು ಪ್ರಯತ್ನಿಸಿ. ಅಮ್ಮನೊಂದಿಗೆ ಹಂಚಿಕೊಂಡ ವಿಷಯಗಳು ಬೇರೆಯವರ ಕಿವಿಗೆ ಬಿದ್ದರೆ ಗಂಡನ ಮನೆಯ ಕುಟುಂಬಕ್ಕೆ ತೊಂದರೆಯಾಗಬಹುದು. ಅವರು ನಿಮ್ಮ ಮೇಲೆ ಇಟ್ಟ ನಂಬಿಕೆಯು ಹಾಳಾಗುತ್ತದೆ.
Source: TV9