December 24, 2024

T20 WOrld Cup IND vs PAK: ಹೈವೋಲ್ಟೇಜ್‌ ಪಂದ್ಯದಲ್ಲಿ ಹೇಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್‌ XI?

0

ಟಿ20 ವಿಶ್ವಕಪ್‌ ಆರಂಭವಾಗಿದೆ. ಮೊದಲ ಲೀಗ್‌ ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಐರ್ಲೆಂಡ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ. ಭಾನುವಾರ ಲೀಗ್‌ ಹಂತದ ಎರಡನೇ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿದ್ದು, ಈ ಪಂದ್ಯದಲ್ಲಿ ಗೆಲುವಿನ ಟಾರ್ಗೆಟ್‌ ಹಾಕಿಕೊಂಡಿದೆ.

 

ಲೀಗ್‌ ಹಂತದ ಗೆಲುವು ನಿಶ್ಚಿತವಾಗಿ ರೋಹಿತ್ ಶರ್ಮಾ ಪಡೆಗೆ ಬೂಸ್ಟ್‌ ನೀಡಲಿದೆ. ಇನ್ನು ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಸೋತು ಮುಖಭಂಗ ಅನುಭವಿಸಿದೆ. ಲೀಗ್‌ ಹಂತದಿಂದ ಮುಂದಿನ ಹಂತಕ್ಕೆ ಪಾಕ್‌ ಅರ್ಹತೆ ಪಡೆಯಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಟೀಮ್ ಇಂಡಿಯಾ, ಪಾಕ್‌ಗೆ ಸುಲಭದ ತುತ್ತು ಆಗಲಾರದು.

 

ವಿಶ್ವಕಪ್ ಎಂದು ಬಂದಾಗ ಟೀಮ್ ಇಂಡಿಯಾ ಮೈಚಳಿ ಬಿಟ್ಟು ಆಡುತ್ತದೆ. 2021ರಲ್ಲಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಸೋಲು ಕಂಡಿದ್ದು ಬಿಟ್ಟರೆ ಟೀಮ್ ಇಂಡಿಯಾ ಪ್ರದರ್ಶನ ಸ್ಥಿರವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿ ಆತ್ಮವಿಶ್ವಾಸವನ್ನು ಇಮ್ಮಡಿ ಗೊಳಿಸಿಕೊಳ್ಳಲಿದೆ. ಹಾಗಿದ್ದರೆ ಟೀಮ್ ಇಂಡಿಯಾದ ಪ್ಲೇಯಿಂಗ್‌ ಇಲೆವೆನ್ ಹೇಗಿರಲಿದೆ ಇಲ್ಲಿದೆ ಮಾಹಿತಿ.

ಟಾಪ್‌ ಆರ್ಡರ್‌ನಲ್ಲಿ ಸ್ಟಾರ್ ಬ್ಯಾಟರ್ಸ್‌
ಟೀಮ್ ಇಂಡಿಯಾದ ಟಾಪ್‌ ಆರ್ಡರ್‌ ನೋಡಿದರೆ ಪಾಕ್‌ಗೆ ಭಯವಾಗುತ್ತದೆ. ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ವಿಶ್ವದ ಕ್ಲಾಸ್‌ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರೂ ಪವರ್‌ ಪ್ಲೇನಲ್ಲಿ ಪಾಕ್‌ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ರನ್‌ ಗಳಿಸುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಗೆಲುವು ಸುಲಭವಾಗುತ್ತದೆ. ಅಲ್ಲದೆ ಇಬ್ಬರಲ್ಲಿ ಒಬ್ಬರು ಬಿಗ್ ಇನ್ನಿಂಗ್ಸ್ ಕಟ್ಟಬೇಕು.

ಮಿಡ್ಲ್‌ ಆರ್ಡರ್‌ ಸಖರ್ ಸ್ಟ್ರಾಂಗ್‌
ಟೀಮ್ ಇಂಡಿಯಾದ ಬ್ಯಾಟಿಂಗ್‌ ವಿಭಾಗದಲ್ಲಿ ಮೂರನೇ ಕ್ರಮಾಂಕದಲ್ಲಿ ರಿಷಭ್ ಪಂಥ್‌ ಆಡುವುದು ಫಿಕ್ಸ್‌. ಸಿಕ್ಕ ಅವಕಾಶವನ್ನು ರಿಷಭ್ ಬಳಸಿಕೊಂಡಿರುವ ರೀತಿಯನ್ನು ನೋಡಿದರೆ, ಪಾಕ್‌ ಬೌಲರ್‌ಗಳಿಗೆ ಇವರು ಕಾಡಬಲ್ಲರು. ನಾಲ್ಕನೇ ಕ್ರಮಾಂಕದಲ್ಲಿ ವಿಶ್ವದ ಸ್ಟಾರ್‌ ಟಿ20 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಅಂಗಳಕ್ಕೆ ಪ್ರವೇಶಿಸುತ್ತಾರೆ. ಇವರು ಬರುತ್ತಿದ್ದಂತೆ ರನ್‌ವೇಗಕ್ಕೆ ಚುರುಕು ಮುಟ್ಟುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು