ಟಿಆರ್‌ಪಿಗಾಗಿ ಊಹಾಪೋಹದಲ್ಲಿ ಪಾಲ್ಗೊಳ್ಳಲು ನಮಗೆ ಇಷ್ಟವಿಲ್ಲ. ಎಕ್ಸಿಟ್ ಪೋಲ್ ಕುರಿತ ಚರ್ಚೆಗಳಲ್ಲಿ ಕಾಂಗ್ರೆಸ್ ಭಾಗವಹಿಸುವುದಿಲ್ಲ: ಪವನ್ ಖೇರಾ
“ಊಹಾಪೋಹದ ಅರ್ಥವೇನು? ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ನಾವೇಕೆ ಅರ್ಥಹೀನ ಊಹಾಪೋಹಗಳಲ್ಲಿ ಭಾಗಿಯಾಗಬೇಕು? ಬೆಟ್ಟಿಂಗ್‌ನಲ್ಲಿ ಕೆಲವು ಶಕ್ತಿಗಳು ಭಾಗಿಯಾಗಿವೆ. ನಾವೇಕೆ ಅದರ ಭಾಗವಾಗಬೇಕು? ಯಾರಿಗೆ ಮತ ಹಾಕಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಜೂನ್ 4 ರಂದು ಪಕ್ಷಗಳು ಎಷ್ಟು ಮತಗಳನ್ನು ಪಡೆದಿವೆ ಎಂದು ತಿಳಿಯುತ್ತದೆ. ನಾವೇಕೆ ಊಹೆ ಮಾಡಬೇಕು? ಎಂದು ಪವನ್ ಖೇರಾ ಕೇಳಿದ್ದಾರೆ.
ದೆಹಲಿ ಮೇ 31: ಜೂನ್ 1 ರಂದು ಟೆಲಿವಿಷನ್ ಚಾನೆಲ್‌ಗಳಲ್ಲಿ ಯಾವುದೇ ಎಕ್ಸಿಟ್ ಪೋಲ್ (Exit poll) ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ (Congress) ಶುಕ್ರವಾರ ಘೋಷಿಸಿದೆ. ಎಲ್ಲಾ ಚುನಾವಣೆಗಳು ಮುಗಿದ ಅರ್ಧ ಘಂಟೆಯ ನಂತರ ಶನಿವಾರ ಸಂಜೆ ಎಕ್ಸಿಟ್ ಪೋಲ್ ಭವಿಷ್ಯವಾಣಿಗಳು ಪ್ರಕಟಗೊಳ್ಳಲು ಪ್ರಾರಂಭಿಸುತ್ತವೆ. ಜೂನ್ 4 ರಂದು ನಿಜವಾದ ಫಲಿತಾಂಶ ಹೊರಬೀಳುವ ಮುನ್ನ ಊಹಾಪೋಹಗಳಿಗೆ ಒಳಗಾಗದಿರಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ (Pawan Khera) ಹೇಳಿದ್ದಾರೆ.
ಮತದಾರರು ಮತ ಚಲಾಯಿಸಿದ್ದು, ತೀರ್ಪು ಖಚಿತವಾಗಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಅದಕ್ಕೂ ಮೊದಲು, ಟಿಆರ್‌ಪಿಗಾಗಿ ಊಹಾಪೋಹದಲ್ಲಿ ಪಾಲ್ಗೊಳ್ಳಲು ನಮಗೆ ಇಷ್ಟವಿಲ್ಲ. ಎಕ್ಸಿಟ್ ಪೋಲ್ ಕುರಿತ ಚರ್ಚೆಗಳಲ್ಲಿ ಕಾಂಗ್ರೆಸ್ ಭಾಗವಹಿಸುವುದಿಲ್ಲ. ಯಾವುದೇ ಚರ್ಚೆಯ ಉದ್ದೇಶವು ಜನರಿಗೆ ತಿಳಿಸುವುದು ಆಗಿರಬೇಕು. ನಾವು ಜೂನ್ 4 ರಿಂದ ಸಂತೋಷದಿಂದ ಚರ್ಚೆಗಳಲ್ಲಿ ಭಾಗವಹಿಸುತ್ತೇವೆ” ಎಂದು ಪವನ್ ಖೇರಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.